ನವದೆಹಲಿ(ಸೆ.14): ಜುಲೈ ತಿಂಗಳಿನಲ್ಲಿ ಶೇ.5.09 ರಷ್ಟಿದ್ದ ಸಗಟು ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ.4.53 ಕ್ಕೆ ಇಳಿಕೆಯಾಗಿದೆ. 

ಒಂದು ವರ್ಷದ ಆಧಾರದ ಸಗಟು ಹಣದುಬ್ಬರ ಏರುಗತಿಯಲ್ಲೇ ಇದ್ದು, 2017 ರಲ್ಲಿ ಶೇ.3.24 ರಷ್ಟಿದ್ದ ಹಣದುಬ್ಬರಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಸಗಟು ಹಣದುಬ್ಬರ ಹೆಚ್ಚಿದೆ.

ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಹಣದುಬ್ಬರದ ಬಗ್ಗೆ ಅಂಕಿ-ಅಂಶ ಬಿಡುಗಡೆ ಮಾಡಿದ್ದು, ಬಿಲ್ಡ್ ಅಪ್ ಹಣದುಬ್ಬರ ಪ್ರಮಾಣ ಕಳೆದ ವರ್ಷ ಶೇ.1.41 ರಷ್ಟಿತ್ತು.  ಈ ವರ್ಷ 3.8 ರಷ್ಟಿದೆ ಎಂದು ಹೇಳಿದೆ.  

ಜುಲೈಗೆ ಹೋಲಿಕೆ ಮಾಡಿದರೆ ಆಹಾರ ಪದಾರ್ಥಗಳ ಬೆಲೆಯೂ ಕಡಿಮೆಯಾಗಿದ್ದು, ಸಗಟು ಹಣದುಬ್ಬರ ಕಡಿಮೆಯಾಗಲು ಸಹಕಾರಿಯಾಗಿದೆ.