ಬ್ಯುಸಿನೆಸ್ ಶುರು ಮಾಡುವ ಮೊದಲು ಸಾವಿರಾರು ಬಾರಿ ಆಲೋಚನೆ ಮಾಡ್ತೇವೆ. ಅದಕ್ಕೆ ಹಣ ಹೊಂದಿಸುವ ಜೊತೆಗೆ ಸಾಲ ಮಾಡಿದ ಭಯ ನಮ್ಮಲ್ಲಿರುತ್ತದೆ. ಹಾಗೆ ವ್ಯಾಪಾರ ಶುರು ಮಾಡಿದ ಮೊದಲ ದಿನವೇ ಹಣ ಕೈಗೆ ಬರಬೇಕೆಂದು ಅನೇಕರು ಅಂದುಕೊಳ್ತಾರೆ. ಅವರಿಗೆ ಈ ವ್ಯವಹಾರ ಬೆಸ್ಟ್. 

ಬ್ಯುಸಿನೆಸ್ (Business) ಶುರು ಮಾಡುವುದು ಎಷ್ಟು ಕಷ್ಟವೋ ಅದನ್ನು ಮುನ್ನಡೆಸಿಕೊಂಡು ಹೋಗುವುದು ಕೂಡ ಸುಲಭವಲ್ಲ. ಹಾಗಾಗಿ ಹಾಕಿದ ದುಡ್ಡು ವಾಪಸ್ (Back) ಬರುವ ಜೊತೆಗೆ ಲಾಭ (Profit)ವಾಗುವಂತಹ ಬ್ಯುಸಿನೆಸ್ ಆಯ್ಕೆ ಮಾಡಿಕೊಳ್ಳಬೇಕು. ಜನರು ಹೆಚ್ಚಿನ ಲಾಭ ತರುವ ವ್ಯವಹಾರದ ಬಗ್ಗೆ ಹುಡುಕಾಟ ನಡೆಸ್ತಿರುತ್ತಾರೆ. ಅನೇಕ ಬಾರಿ ನಮ್ಮದೇ ಬ್ರ್ಯಾಂಡ್ ಕ್ರಿಯೆಟ್ ಮಾಡಲು ಕಷ್ಟವಾಗುತ್ತದೆ. ಈಗಾಗಲೇ ಪ್ರಸಿದ್ಧಿ ಪಡೆದಿರುವ ಕಂಪನಿ ಜೊತೆ ಕೈ ಜೋಡಿಸಿ, ವ್ಯವಹಾರ ಶುರು ಮಾಡುವ ಮೂಲಕ ಹಣ ಸಂಪಾದನೆ ಮಾಡಬಹುದು. ಬ್ಯುಸಿನೆಸ್ ಶುರು ಮಾಡಿದ ಮೊದಲ ದಿನದಿಂದಲೂ ಹಣವನ್ನು ಗಳಿಸಬಹುದಾದ ಕೆಲ ಉತ್ಪನ್ನಗಳಿವೆ. ಇಂದು ಯಾವ ಕಂಪನಿ ನಿಮಗೆ ಸುಲಭವಾಗಿ ಹಣ ಗಳಿಸುವ ಅವಕಾಶ ನೀಡ್ತಿದೆ ಎಂಬುದನ್ನು ನಾವು ಹೇಳ್ತೇವೆ.

ಅಮುಲ್ ಜೊತೆ ವ್ಯವಹಾರ ಶುರು ಮಾಡಿ ಹಣ ಗಳಿಸಿ : ಅಮುಲ್ ಕಂಪನಿ ಎಲ್ಲರಿಗೂ ತಿಳಿದಿದೆ. ಡೈರಿ ಉತ್ಪನ್ನಗಳನ್ನು ತಯಾರಿಸುವ ಕಂಪನಿ ಅಮುಲ್. ಈ ಕಂಪನಿಯೊಂದಿಗೆ ವ್ಯಾಪಾರ ಶುರು ಮಾಡಲು ನಿಮಗೆ ಅವಕಾಶವಿದೆ. ಅಮುಲ್ ಫ್ರಾಂಚೈಸಿಯನ್ನು ನೀಡುತ್ತಿದೆ. ಇದರಲ್ಲಿ ಸಣ್ಣ ಹೂಡಿಕೆ ಮಾಡಿ, ಪ್ರತಿ ತಿಂಗಳು ನಿಯಮಿತ ಗಳಿಕೆಯನ್ನು ಮಾಡಬಹುದು. ಇದ್ರಲ್ಲಿ ದೊಡ್ಡ ಮಟ್ಟದ ನಷ್ಟ ನಿಮಗಾಗಲು ಸಾಧ್ಯವೇ ಇಲ್ಲ.

ಇದನ್ನೂ ಓದಿ: Karnataka Budget 2022-23: ಮೊಹಲ್ಲಾ ಕ್ಲಿನಿಕ್‌ ರೀತಿ ನಮ್ಮ ಕ್ಲಿನಿಕ್‌: ಸಿಎಂ ಬೊಮ್ಮಾಯಿ

ವ್ಯಾಪಾರ ಶುರು ಮಾಡಲು ಬೇಕು ಇಷ್ಟು ಹಣ ? : ಅಮುಲ್ ಯಾವುದೇ ರಾಯಲ್ಟಿ ಅಥವಾ ಲಾಭ ಹಂಚಿಕೆ ಇಲ್ಲದೆ ಫ್ರಾಂಚೈಸಿಗಳನ್ನು ನೀಡುತ್ತಿದೆ. ಅಮುಲ್‌ನ ಫ್ರಾಂಚೈಸಿ ತೆಗೆದುಕೊಳ್ಳುವ ವೆಚ್ಚವೂ ಹೆಚ್ಚಿಲ್ಲ. ಎರಡು ಲಕ್ಷದಿಂದ ಆರು ಲಕ್ಷ ರೂಪಾಯಿ ಖರ್ಚು ಮಾಡಿ ವ್ಯಾಪಾರ ಆರಂಭಿಸಬಹುದು. ವ್ಯವಹಾರದ ಪ್ರಾರಂಭದಲ್ಲಿಯೇ ಉತ್ತಮ ಲಾಭವನ್ನು ಗಳಿಸಬಹುದು. ಫ್ರಾಂಚೈಸಿ ಮೂಲಕ ಪ್ರತಿ ತಿಂಗಳು ಸುಮಾರು 5 ರಿಂದ 10 ಲಕ್ಷ ರೂಪಾಯಿ ವ್ಯವಹಾರವನ್ನು ನೀವು ಮಾಡಬಹುದು.

 ಇದನ್ನೂ ಓದಿ:Karnataka Budget: ಸ್ತ್ರೀಯರು, ಮಕ್ಕಳಿಗೆ ಬಂಪರ್‌ ಕೊಡುಗೆ ನೀಡಿದ ಬೊಮ್ಮಾಯಿ

ಫ್ರ್ಯಾಂಚೈಸ್ ಪಡೆಯುವುದು ಹೇಗೆ? : ಅಮುಲ್ ಎರಡು ರೀತಿಯ ಫ್ರಾಂಚೈಸಿಗಳನ್ನು ನೀಡುತ್ತಿದೆ. ಒಂದು ಅಮುಲ್ ಔಟ್ಲೆಟ್. ಇನ್ನೊಂದು ಅಮುಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್ ಫ್ರಾಂಚೈಸಿ. ಅಮುಲ್ ಔಟ್ಲೆಟ್ ನಲ್ಲಿ ಹೂಡಿಕೆ ಮಾಡಲು ಬಯಸಿದರೆ, ನೀವು 2 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. ಅಮುಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್ ಫ್ರಾಂಚೈಸ್ ತೆಗೆದುಕೊಳ್ಳಲು 5 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ 25 ರಿಂದ 50 ಸಾವಿರ ರೂಪಾಯಿಗಳನ್ನು ಭದ್ರತೆಗಾಗಿ ಇಟ್ಟುಕೊಳ್ಳಲಾಗುತ್ತದೆ. ಅದನ್ನು ಮರುಪಾವತಿ ಮಾಡುವುದಿಲ್ಲ.

ಇದ್ರಲ್ಲಿದೆ ಲಾಭ : ಅಮುಲ್ ಔಟ್ಲೆಟ್ ಮೂಲಕ ನೀವು ಲಾಭ ಗಳಿಸಬಹುದು. ಅಮುಲ್ ತನ್ನ ಉತ್ಪನ್ನದ ಮೇಲೆ ಕಮಿಷನ್ ನೀಡುತ್ತದೆ. ಹಾಲಿನ ಪೌಚ್ ಮೇಲೆ ಶೇಕಡಾ 2.5ರಷ್ಟು, ಹಾಲಿನ ಉತ್ಪನ್ನಗಳ ಮೇಲೆ ಶೇಕಡಾ 10ರಷ್ಟು ಮತ್ತು ಐಸ್ ಕ್ರೀಂ ಮೇಲೆ ಶೇಕಡಾ 20ರಷ್ಟು ಕಮಿಷನ್ ಸಿಗುತ್ತದೆ. ಇನ್ನು ಅಮುಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್‌ನ ಫ್ರಾಂಚೈಸಿಯಲ್ಲಿ ಉತ್ಪನ್ನಗಳ ಮೇಲೆ ಶೇಕಡಾ 50ರಷ್ಟು ಕಮಿಷನ್ ಲಭ್ಯವಿದೆ. ಬೇರೆ ಬೇರೆ ಉತ್ಪನ್ನಗಳ ಮೇಲೆ ಕಂಪನಿ ಬೇರೆ ಬೇರೆ ರೀತಿಯಲ್ಲಿ ಕಮಿಷನ್ ನೀಡುತ್ತದೆ.

ಜಾಗ ಮುಖ್ಯ : ಯಾವುದೇ ವ್ಯವಹಾರದಲ್ಲಿ ಲಾಭ ಸಿಗಬೇಕೆಂದ್ರೆ ವ್ಯಾಪಾರ ಶುರು ಮಾಡುವ ಜಾಗವೂ ಮಹತ್ವ ಪಡೆಯುತ್ತದೆ. ಜನನಿಬಿಡ ಪ್ರದೇಶದಲ್ಲಿ ಉತ್ಪನ್ನಗಳ ಮಾರಾಟ ಹೆಚ್ಚಿರುತ್ತದೆ. ಇದಲ್ಲದೆ ನೀವು ವ್ಯವಹಾರ ಶುರು ಮಾಡಲು ಎಷ್ಟು ಜಾಗಬೇಕು ಎಂಬುದನ್ನು ನೋಡ್ಬೇಕು. ಅಮುಲ್ ಔಟ್ಲೆಟ್ ಗೆ 150 ಚದರ ಅಡಿ ಜಾಗ ಹೊಂದಿರಬೇಕು. ಅಮುಲ್ ಐಸ್ ಕ್ರೀಮ್ ಪಾರ್ಲರ್‌ ಫ್ರಾಂಚೈಸಿಗೆ ಕನಿಷ್ಠ 300 ಚದರ ಅಡಿ ಜಾಗದ ಅಗತ್ಯವಿದೆ.

ಫ್ರ್ಯಾಂಚೈಸಿ ಪಡೆಯೋದು ಹೇಗೆ? : ಅಮುಲ್ ಫ್ರ್ಯಾಂಚೈಸಿ ಪಡೆಯಲು ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. retail@amul.coop ಗೆ ಮೇಲ್ ಮಾಡಬೇಕಾಗುತ್ತದೆ. ಇದಲ್ಲದೆ ಸ್ಕೂಪಿಂಗ್ ಪಾರ್ಲರ್‌ ಗೆ http://amul.com/m/amul ಲಿಂಕ್ ಕ್ಲಿಕ್ ಮಾಡಿ ಅಲ್ಲಿ ಮಾಹಿತಿ ಪಡೆಯಬಹುದು.