Union Budget 2023 ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿನ ಅತೀ ದೊಡ್ಡ ಘೋಷಣೆ ಪಟ್ಟಿ!
ಕೇಂದ್ರ ಬಜೆಟ್ ಮಂಡನೆಯಾಗಿದೆ. ಇದರ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ಇದೀಗ ಬಜೆಟ್ ಭಾರಿ ಚರ್ಚೆಯಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಹಲವು ವಿಶೇಷತಗಳಿವೆ. ಜೊತೆಗೆ ಅತೀ ದೊಡ್ಡ ಘೋಷಣೆಗಳಿವೆ.
ನವದೆಹಲಿ(ಫೆ.01): ಕೇಂದ್ರ ಬಜೆಟ್ ಮಂಡನೆಯಾದ ಬೆನ್ನಲ್ಲೇ ಇದೀಗ ಭಾರಿ ಚರ್ಚೆಗೆ ಒಳಪಟ್ಟಿದೆ. ಹಲವರು ಐತಿಹಾಸಿಕ ಬಜೆಟ್ ಎಂದು ಘೋಷಿಸಿದ್ದರೆ, ವಿಪಕ್ಷಗಳು ಇದು ಎಲೆಕ್ಷನ್ ಘೋಷಣಾ ಬಜೆಟ್ ಎಂದು ಟೀಕಿಸಿದೆ. ಇದರ ನಡುವೆ ಆರ್ಥಿಕ ತಜ್ಞರು ಕೇಂದ್ರದ ಬಜೆಟ್ ಮೇಲೆ ವಿಶ್ಲೇಷಣೆ ಮಾಡಿದ್ದಾರೆ. ಇಷ್ಟೇ ಅಲ್ಲ ಈ ಬಾರಿಯ ಬಜಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಕೆಲ ಅತೀ ದೊಡ್ಡ ಘೋಷಣೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಘೋಷಣೆಗಳು ಹೊಸ ಭಾರತದ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿನ ಅತೀ ದೊಡ್ಡ ಘೋಷಣೆ ಹಾಗೂ ವಿಶೇಷತೆಗಳ ಪಟ್ಟಿ ಇಲ್ಲಿದೆ.
- ರೈಲ್ವೇ ಇಲಾಖೆ ಇದುವರೆಗಿನ ಅತೀ ದೊಡ್ಡ ಮೊತ್ತವನ್ನು ಮೀಸಲಿಟ್ಟಿದೆ. ಬಜೆಟ್‌ನಲ್ಲಿ 2.4 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ರೈಲ್ವೇ ಇಲಾಖೆಗೆ ನೀಡಿದೆ
- ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ.
- ಸಾರಿಗೆ ಸಂಪರ್ಕ ಬಲಪಡಿಸಲು ಹಾಗೂ ಮೂಲಭೂತ ಸೌಕರ್ಯ ಹೆಚ್ಚಿಸಲು 50 ವಿಮಾನ ನಿಲ್ದಾಣ ಹಾಗೂ ಹೆಲಿಪ್ಯಾಡ್ ನಿರ್ಮಾಣ
- 50 ಪ್ರೇಕ್ಷಣೀಯ ಸ್ಥಳಗಳನ್ನು ಆಯ್ಕೆ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿ
- ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಜಾರಿ, ಈ ಮೂಲಕ ಮಹಿಳೆಯರು 2 ವರ್ಷದ ಅವಧಿಗೆ ಗರಿಷ್ಠ 2 ಲಕ್ಷ ರೂಪಾಯಿ ಉಳಿತಾಯ ಮಾಡಬಹುದು. ಇದಕ್ಕೆ 7.5 ಶೇಕಡಾ ಬಡ್ಡಿ ಪಡೆಯಲಿದ್ದಾರೆ.
- ಹಿರಿಯ ನಾಗರೀಕರ ಉಳಿತಾಯ ಯೋಜನೆ ಠೇವಣಿ ಮೊತ್ತವನ್ನು 15 ಲಕ್ಷ ರೂಪಾಯಿಂದ 30 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.
ಮದ್ಯಮ ವರ್ಗದ ಬಯಕೆ ಈಡೇರಿಸಿದ ನಿರ್ಮಲಾ, 7 ಲಕ್ಷ ರೂ.ಆದಾಯಕ್ಕೆ ತೆರಿಗೆ ಇಲ್ಲ
- ತೆರಿಗೆ ವಿನಾಯಿತಿಯನ್ನು 5 ಲಕ್ಷ ರೂಪಾಯಿಂದ 7 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ
- ಪಿಎಂ ಅವಾಸ್ ಯೋಜನೆ ಮೂಲಕ ಸೂರು ನೀಡಲು ಈ ಬಾರಿ ಶೇಕಡಾ 69 ರಷ್ಟು ಮೊತ್ತ ಹೆಚ್ಚಿಸಲಾಗಿದೆ. ಈ ಬಜೆಟ್‌ನಲ್ಲಿ 79,000 ಕೋಟಿ ರೂಪಾಯಿ ಮೀಸಲಿಡಲಾಗಿದೆ.
- ಬಂಡವಾಳ ಹೂಡಿಕೆ ವೆಚ್ಚ 33 ಪ್ರತಿಶತದಿಂದ 10 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಇದು 2024ರ ಆರ್ಥಿಕ ವರ್ಷದಲ್ಲಿ ಜಿಡಿಪಿಯ ಶೇಕಡಾ 3.3 ರಷ್ಟಾಗಲಿದೆ.
- ಕೇಂದ್ರ ಸರ್ಕಾರದ ಪರಿಣಾಮಕಾರಿ ಬಂಡವಾಳ ವೆಚ್ಚ 13.7 ಲಕ್ಷ ಕೋಟಿ ರೂಪಾಯಿ
- ದೇಶದ ಪ್ರಮುಖ ಸ್ಥಳಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜು ಸ್ಥಾಪನೆ
- 20247ರ ವೇಳೆಗೆ ಭಾರತದಲ್ಲಿ ರಕ್ತಹೀನತೆ ಸಮಸ್ಯೆ ತೊಡೆಹು ಹಾಕಲು ಯೋಜನೆ
- ಬುಡಕಟ್ಟು ಸಮುದಾಯದ ಜನರಿಗೆ ವಸತಿ, ನೈರ್ಮಲ್ಯ, ಕುಡಿಯುವ ನೀರು ಹಾಗೂ ವಿದ್ಯುತ್‌ಗಾಗಿ ಮುಂದಿನ ಮೂರು ವರ್ಷಗಳಲ್ಲಿ 15,000 ಕೋಟಿ ರೂಪಾಯಿ
- ಎಲ್ಲಾ ನಗರ ಪಟ್ಟಣದಲ್ಲಿನ ಒಳಚರಂಡಿ ವ್ಯವಸ್ಥೆ ಮಶಿನ್ ನಿಯಂತ್ರಿತವಾಗಲಿದೆ
- ಏಕಲವ್ಯ ಮಾದರಿ ರೆಸಿಡೆನ್ಸಿ ಶಾಲೆಗಾಗಿ 38,800 ಶಿಕ್ಷಕರ ನೇಮಕಾತಿ
- ಆರ್ಟಿಫೀಶಿಯಲ್ ಇಂಟೆಲಿಜೆನ್ಸಿ ಕೇಂದ್ರಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಿ ಸ್ಫಾಪನೆ ಈ ಮೂಲಕ ಮೇಕ್ ಆರ್ಟಿಫೀಶಿಯಲ್ ಇಂಟೆಲಿಜೆನ್ಸಿ ಇಂಡಿಯಾ ಸ್ಥಾಪನೆ
- ಶೂನ್ಯ ಕಾರ್ಬನ್‌ಗಾಗಿ 35,000 ಕೋಟಿ ರೂಪಾಯಿ ಮೀಸಲು
- ಇಂಧನ ಮೇಲಿನ ಅವಲಂಬನೆ ಕಡಿಮೆ ಮಾಡಲು ಗ್ರೀನ್ ಹೈಡ್ರೋಜನ್ ಮಿಷನ್‌ಗೆ ಚಾಲನೆ