ಪಿಎಫ್‌ ಅಕೌಂಟ್‌ನ UAN ಜೊತೆ ಬ್ಯಾಂಕ್‌ ಅಕೌಂಟ್‌ ಲಿಂಕ್‌ ಮಾಡಿಲ್ವಾ? ಲಿಂಕ್‌ ಮಾಡಿದ್ರೆ ಇದೆ ಸಾಕಷ್ಟು ಪ್ರಯೋಜನ!

ಪಿಎಫ್‌ ಅಕೌಂಟ್‌ನಲ್ಲಿರುವ ಬ್ಯಾಲೆನ್ಸ್‌ಅನ್ನು ಸುಲಭವಾಗಿ ಚೆಕ್‌ ಮಾಡೋದು, ಹಣ ವಿತ್‌ಡ್ರಾ ಮಾಡೋದು ಹಾಗೂ ಟ್ರಾನ್ಸ್‌ಫರ್‌ ಮಾಡಿಕೊಳ್ಳಬೇಕಾಗಿದ್ದಲ್ಲಿ ಯುಎಎನ್‌ ಜೊತೆ ಬ್ಯಾಂಕ್‌ ಅಕೌಂಟ್‌ ಲಿಂಕ್‌ ಮಾಡಿದ್ರೆ ಒಳ್ಳೆಯದು.

Link UAN to Bank Account for Easy PF Withdrawal and Transfer san

ಪಿಎಫ್ ಸಬ್‌ಸ್ಕ್ರೈಬರ್‌ಗಳಿಗೆ UAN & ಬ್ಯಾಂಕ್ ಅಕೌಂಟ್ ಲಿಂಕ್ ಮಾಡೋದು ತುಂಬಾ ಉಪಯುಕ್ತ. PF ಬ್ಯಾಲೆನ್ಸ್‌ನ ಸುಲಭವಾಗಿ ಚೆಕ್‌ ಮಾಡೋದು, ಹಣ ವಿತ್‌ಡ್ರಾ ಮಾಡೋದು & ಟ್ರಾನ್ಸ್‌ಫರ್‌ಗೆ ಇದು ಸಹಾಯ ಮಾಡುತ್ತೆ. PF ಅಕೌಂಟ್‌ಗೆ ಬರೋ ಹಣದ ಬಗ್ಗೆ ಮಾಹಿತಿ ಸಿಗುತ್ತೆ. ಕಂಪನಿ ಬದಲಾಯಿಸುವಾಗ ಅಥವಾ ನಿವೃತ್ತಿ ಹೊಂದುವಾಗ PF ವಿಚಾರದಲ್ಲಿ ಸುಲಭವಾಗಿ ಇದರಿಂದ ಕೆಲಸ ಆಗಲಿದೆ.

UAN ಅಂದ್ರೇನು?

ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್‌ನಲ್ಲಿ ಪ್ರತಿ ಮೆಂಬರ್‌ಗೂ ಕೊಡೋ 12 ಅಂಕಿಯ ನಂಬರ್ UAN. ಯಾವ ಕಂಪನಿಯಲ್ಲಿ ಕೆಲಸ ಮಾಡ್ತಿದ್ರೂ PF ಮಾಹಿತಿ ಪಡೆಯೋಕೆ UAN ಸಹಾಯ ಮಾಡುತ್ತೆ. ಯುಎಎನ್‌ ಅಂದರೆ Universal Account Number ಅರ್ಥಾತ್‌ ಸಾರ್ವತ್ರಿಕ ಖಾತೆ ಸಂಖ್ಯೆ.


UAN & ಬ್ಯಾಂಕ್ ಅಕೌಂಟ್ ಲಿಂಕ್ ಮಾಡೋದು ಹೇಗೆ?

ಸ್ಟೆಪ್ 1: EPFO ಪೋರ್ಟಲ್‌ನಲ್ಲಿ ಲಾಗಿನ್ ಮಾಡಿ
(https://unifiedportal-mem.epfindia.gov.in/memberinterface/)

ಸ್ಟೆಪ್ 2: ಮ್ಯಾನೇಜ್ ಟ್ಯಾಬ್‌ನಲ್ಲಿ, ಡ್ರಾಪ್-ಡೌನ್ ಮೆನುವಿನಿಂದ KYC ಆಯ್ಕೆ ಮಾಡಿ

ಸ್ಟೆಪ್ 3: ಮುಂದಿನ ಪುಟದಲ್ಲಿ, ಯಾವ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ ಅಂತ ನೋಡಬಹುದು. ಲಿಂಕ್ ಮಾಡ್ಬೇಕಾದ ಬ್ಯಾಂಕ್ ಅಕೌಂಟ್ ನಂಬರ್ ಹಾಕಿ.

ಸ್ಟೆಪ್ 4: ಬ್ಯಾಂಕ್ ಅಕೌಂಟ್ ನಂಬರ್ & IFSC ಕೋಡ್ ಕನ್ಫರ್ಮ್ ಮಾಡಿ. IFSC ಟ್ಯಾಬ್ ಚೆಕ್ ಮಾಡಿ ಕ್ಲಿಕ್ ಮಾಡಿ

* ಆಧಾರ್‌ಗೆ ಲಿಂಕ್ ಆದ ಮೊಬೈಲ್‌ಗೆ OTP ಬರುತ್ತೆ

ಕೇಂದ್ರ ಬಜೆಟ್‌ನಲ್ಲಿ ಇಪಿಎಫ್‌ಒ ಕನಿಷ್ಠ ಪಿಂಚಣಿ ₹7500ಕ್ಕೆ ಏರಿಕೆ ಸಾಧ್ಯತೆ!

ಸ್ಟೆಪ್ 5: OTP ಹಾಕಿ. ಬ್ಯಾಂಕ್ ಅಕೌಂಟ್ ನಂಬರ್ ವೆರಿಫಿಕೇಶನ್ ಪ್ರಕ್ರಿಯೆಯಲ್ಲಿದೆ ಅಂತ ಮೆಸೇಜ್ ಬರುತ್ತೆ

ಇಪಿಎಫ್‌ಎ ಪೆನ್ಶನ್‌ ಲೆಕ್ಕಾಚಾರ: 10 ವರ್ಷ ಕೆಲಸ ಮಾಡಿದ್ರೆ ಎಷ್ಟು ಪಿಂಚಣಿ ಸಿಗುತ್ತೆ?

Latest Videos
Follow Us:
Download App:
  • android
  • ios