Asianet Suvarna News Asianet Suvarna News

ಎಲ್‌ಐಸಿ ವಿಶ್ವದ ಅತ್ಯಂತ ಬಲಿಷ್ಠ ವಿಮಾ ಬ್ರ್ಯಾಂಡ್‌: ಫೈನಾನ್ಸ್‌ ಇನ್ಷೂರೆನ್ಷ್‌ ವರದಿ!

ಭಾರತದ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ವಿಶ್ವದಲ್ಲೇ ಅತ್ಯಂತ ಬಲಿಷ್ಠ ವಿಮಾ ಬ್ರ್ಯಾಂಡ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ರ್ಯಾಂಡ್‌ ಫೈನಾನ್ಸ್ ಇನ್ಷೂರೆನ್ಸ್‌ 100’ ಬಿಡುಗಡೆ ಮಾಡಿರುವ 2024ನೇ ಸಾಲಿನ ವರದಿಯಲ್ಲಿ ಈ ಅಂಶವಿದೆ. 

LIC worlds strongest insurance brand Brand Finance Insurance Report gvd
Author
First Published Mar 27, 2024, 5:52 AM IST

ನವದೆಹಲಿ (ಮಾ.27): ಭಾರತದ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ವಿಶ್ವದಲ್ಲೇ ಅತ್ಯಂತ ಬಲಿಷ್ಠ ವಿಮಾ ಬ್ರ್ಯಾಂಡ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಬ್ರ್ಯಾಂಡ್‌ ಫೈನಾನ್ಸ್ ಇನ್ಷೂರೆನ್ಸ್‌ 100’ ಬಿಡುಗಡೆ ಮಾಡಿರುವ 2024ನೇ ಸಾಲಿನ ವರದಿಯಲ್ಲಿ ಈ ಅಂಶವಿದೆ. ಎಲ್‌ಐಸಿಯ ಬ್ರ್ಯಾಂಡ್‌ ಮೌಲ್ಯ 9.8 ಶತಕೋಟಿ ಡಾಲರ್‌ನಲ್ಲೇ ಸ್ಥಿರವಾಗಿ ಮುಂದುವರೆದಿದೆ. 

ಬ್ರ್ಯಾಂಡ್‌ ಸ್ಟ್ರೆಂಥ್‌ ಇಂಡೆಕ್ಸ್‌ನಲ್ಲಿ ಎಲ್‌ಐಸಿ ಶೇ.88.3ರಷ್ಟು ಅಂಕ ಹೊಂದಿದೆ ಮತ್ತು ಬ್ರ್ಯಾಂಡ್‌ ಸ್ಟ್ರೆಂಥ್‌ ರೇಟಿಂಗ್‌ನಲ್ಲಿ ಎಎಎ ಸ್ತರ ಹೊಂದಿದೆ ಎಂದು ವರದಿ ಹೇಳಿದೆ. ಎಲ್‌ಐಸಿ ನಂತರದ ಸ್ಥಾನವನ್ನು ಕ್ಯಾಥೆ ಲೈಫ್‌ ಇನ್ಷೂರೆನ್ಷ್‌, ಎನ್‌ಆರ್‌ಎಂಎ ಇನ್ಷೂರೆನ್ಷ್‌ ಹೊಂದಿವೆ. ಇನ್ನು ಬ್ರ್ಯಾಂಡ್‌ ಮೌಲ್ಯದಲ್ಲಿ ಚೀನಾದ ಪಿಂಗ್‌ ಆ್ಯನ್‌, ಚೀನಾ ಲೈಫ್ ಇನ್ಷೂರೆನ್ಸ್‌ ಮತ್ತು ಸಿಪಿಐಸಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿವೆ.

Lok Sabha Election 2024: ಕೋಲಾರದಲ್ಲಿ ಸಚಿವ ಮುನಿಯಪ್ಪ ಅಳಿಯಗೆ ಕಾಂಗ್ರೆಸ್‌ ಟಿಕೆಟ್‌?

ಶೇ.17ರಷ್ಟು ವೇತನ ಹೆಚ್ಚಳ: ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಶೇ.17ರಷ್ಟು ವೇತನ ಹೆಚ್ಚಳ ಮಾಡಿದೆ. ಇದರಿಂದ ಸುಮಾರು 1 ಲಕ್ಷ ಉದ್ಯೋಗಿಗಳಿಗೆ ಹಾಗೂ 30,000 ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ಈ ವೇತನ ಹೆಚ್ಚಳ 2002ರ ಆಗಸ್ಟ್ ನಿಂದಲೇ ಜಾರಿಗೆ ಬರಲಿದೆ. ಇದರಿಂದ ಎಲ್ಐಸಿಗೆ ಒಂದು ವರ್ಷಕ್ಕೆ  4,000 ಕೋಟಿ ರೂ. ವೆಚ್ಚವಾಗಲಿದೆ. ಈ ಬಗ್ಗೆ ಎಲ್ಐಸಿ ಪ್ರಕಟಣೆ ಕೂಡ ಹೊರಡಿಸಿದೆ. ಈ ಪರಿಷ್ಕರಣೆಯಲ್ಲಿ ಎನ್ ಪಿಎಸ್ ಕೊಡುಗೆಯನ್ನು ಶೇ.10ರಿಂದ ಶೇ.14ಕ್ಕೆ ಹೆಚ್ಚಿಸಿರೋದು ಕೂಡ ಸೇರಿದೆ. 

ಇದರಿಂದ 2010ರ ಏಪ್ರಿಲ್ 1ರ ಬಳಿಕ ಸೇರ್ಪಡೆಗೊಂಡ ಸುಮಾರು  24,000 ಉದ್ಯೋಗಿಗಳಿಗೆ ನೆರವಾಗಲಿದೆ. ಈ ಪರಿಷ್ಕರಣೆಯು ಎಲ್ಐಸಿ ಪಿಂಚಣಿದಾರರಿಗೆ ಒಂದು ಬಾರಿಯ ಎಕ್ಸ್ ಗ್ರೇಷಿಯಾ ಪಾವತಿಯನ್ನು ಕೂಡ ಒಳಗೊಂಡಿದೆ. ಇದನ್ನು ಎಲ್ಐಸಿ ಪಿಂಚಣಿದಾರರಿಗೆ ಅವರು ಸಂಸ್ಥೆಗೆ ನೀಡಿರುವ ಮೌಲ್ಯಯುತ ಕೊಡುಗೆಗೆ ಅಭಿನಂದನೆ ಮಾದರಿಯಲ್ಲಿ ನೀಡಲಾಗುತ್ತಿದೆ. ಇದರಿಂದ 30,000ಕ್ಕೂ ಅಧಿಕ ಪಿಂಚಣಿದಾರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ನೆರವಾಗಲಿದೆ.ಕೇಂದ್ರ ಸರ್ಕಾರ ಈ ಹಿಂದೆ ಕುಟುಂಬ ಪಿಂಚಣಿ ಮೊತ್ತವನ್ನು ಹೆಚ್ಚಿಸಿತ್ತು. 

ಲೋಕಸಭಾ ಟಿಕೆಟ್ ಭಿನ್ನಮತ ಶಮನಕ್ಕೆ ಬಿಎಸ್‌ವೈ ಸಾರಥ್ಯ: ಕೊಪ್ಪಳ, ಬಳ್ಳಾರಿ, ದಾವಣಗೆರೆಯಲ್ಲಿ ಯಶಸ್ವಿ?

ಇದು 21,000ಕ್ಕೂ ಅಧಿಕ ಕುಟುಂಬ ಪಿಂಚಣಿದಾರರಿಗೆ ನೆರವು ನೀಡಿತ್ತು ಎಂದು ವಿಮಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪರಿಷ್ಕರಣೆ ಈ ಹಿಂದಿನ ಹಾಗೂ ಈಗಿನ ಎಲ್ಐಸಿ ಉದ್ಯೋಗಿಗಳಿಗೆ ನೆರವು ನೀಡಲಿದೆ. ಹಾಗೆಯೇ ಮುಂದಿನ ಜನಾಂಗಕ್ಕೆ ಆಕರ್ಷಕ ಉದ್ಯೋಗದ ತಾಣವಾಗಲಿದೆ ಕೂಡ. ಈ ವೇತನ ಪರಿಷ್ಕರಣೆಗೆ ಎಲ್ ಐಸಿ ಭಾರತ ಸರ್ಕಾರಕ್ಕೆ ಚಿರಋಣಿಯಾಗಿದೆ. ಈ ವೇತನ ಪರಿಷ್ಕರಣೆಯಿಂದ ದೇಶಾದ್ಯಂತ ಇರುವ ಎಲ್ಐಸಿ ಉದ್ಯೋಗಿಗಳು ಹಾಗೂ ಅವರ ಕುಟುಂಬದವರಿಗೆ ನೆರವು ನೀಡಲಿದೆ' ಎಂದು ಎಲ್ಐಸಿ ಹೇಳಿಕೆಯಲ್ಲಿ ತಿಳಿಸಿದೆ.

Follow Us:
Download App:
  • android
  • ios