*ಎಲ್ಐಸಿ ಆಧಾರ್ ಶಿಲಾ ಪ್ಲ್ಯಾನ್ ಮಹಿಳೆಯರಿಗಾಗಿಯೇ ರೂಪಿಸಿರೋ ಯೋಜನೆ*ಈ ಪಾಲಿಸಿಯ ಮಚ್ಯುರಿಟಿ ಅವಧಿ 10 ವರ್ಷಗಳಿಂದ 20 ವರ್ಷಗಳು* ಈ ಯೋಜನೆಯಲ್ಲಿ ಅಟೋ ಕವರ್ ಹಾಗೂ ಸಾಲ ಸೌಲಭ್ಯ ಕೂಡ ಇದೆ
Business Desk: ಮಕ್ಕಳಿಂದ ಹಿಡಿದು ವೃದ್ಧರ ತನಕ ಆಯಾ ವಯೋಮಾನ, ಆದಾಯ ಆಧರಿಸಿ ಭಾರತೀಯ ಜೀವ ವಿಮಾ ನಿಗಮ (LIC) ಅನೇಕ ವಿಮಾ (Insurance) ಯೋಜನೆಗಳನ್ನು ರೂಪಿಸಿದೆ. ಭಾರತದಲ್ಲಿ(India) ಬ್ಯಾಂಕ್ (Bank) ಹಾಗೂ ಅಂಚೆ ಕಚೇರಿ (POst office) ಉಳಿತಾಯ (Saving) ಯೋಜನೆಗಳ ಬಳಿಕ ಜನರು ಹೆಚ್ಚಾಗಿ ಹೂಡಿಕೆಗೆ ಆಯ್ದುಕೊಳ್ಳುವುದು ಎಲ್ ಐಸಿ ಪಾಲಿಸಿಗಳನ್ನೇ. ಎಲ್ಐಸಿ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರೋ ಕಾರಣ ಹೂಡಿಕೆ (Invest) ಮಾಡಿದ ಹಣ ಸುರಕ್ಷಿತವಾಗಿರೋ ಜೊತೆಗೆ ಉತ್ತಮ ರಿಟರ್ನ್ಸ್ (return) ಕೂಡ ಸಿಗುತ್ತದೆ ಎಂಬುದು ಇದಕ್ಕೆ ಕಾರಣ. ಎಲ್ಐಸಿ (LIC) ಮಹಿಳೆ (Woman) ಹಾಗೂ ಹೆಣ್ಣು ಮಗುವಿಗಾಗಿಯೇ ಎಲ್ಐಸಿ ಆಧಾರ್ ಶಿಲಾ ಪ್ಲ್ಯಾನ್ (LIC Aadhaar Shila Plan) ಎಂಬ ವಿಶೇಷ ಯೋಜನೆಯೊಂದನ್ನು ರೂಪಿಸಿದೆ. ಈ ಯೋಜನೆಯಲ್ಲಿ ನೀವು ದಿನಕ್ಕೆ ಕೇವಲ 29ರೂ. ಹೂಡಿಕೆ ಮಾಡಿ 4 ಲಕ್ಷ ರೂ. ರಿಟರ್ನ್ (Return)ಗಳಿಸಬಹುದು.
ಎಲ್ಐಸಿ ಆಧಾರ್ ಶಿಲಾ ಪ್ಲ್ಯಾನ್ ಭದ್ರತೆ ಹಾಗೂ ಉಳಿತಾಯದ ಜೊತೆಗೆ ಮೆಚ್ಯುರಿಟಿಗೂ (Maturity) ಮುನ್ನ ಪಾಲಿಸಿದಾರರು ಸಾವನ್ನಪ್ಪಿದ್ರೆ ಅವರ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡುತ್ತದೆ. ಇನ್ನು ಮೆಚ್ಯುರಿಟಿ (Maturity) ಅವಧಿ ಬಳಿಕ ಪಾಲಿಸಿದಾರರಿಗೆ ಒಮ್ಮೆಗೆ ಪೂರ್ಣ ಮೊತ್ತ ಪಾವತಿಸಲಾಗುತ್ತದೆ. ಅಲ್ಲದೆ, ಈ ಯೋಜನೆ ಅಟೋ ಕವರ್ (Auto cover) ಹಾಗೂ ಸಾಲ (Loan) ಸೌಲಭ್ಯವನ್ನೊಳಗೊಂಡಿದ್ದು, ಆರ್ಥಿಕ ಸಂಕಷ್ಟದ ಸಮಯದಲ್ಲಿ ಪಾಲಿಸಿದಾರರಿಗೆ ಹಣಕಾಸಿನ ನೆರವು ಒದಗಿಸುತ್ತದೆ.
LIC Jeevan Umang Policy: ತಿಂಗಳಿಗೆ ಕೇವಲ ರೂ. 1,302 ಕಟ್ಟಿ, ರೂ. 28 ಲಕ್ಷ ರಿಟರ್ನ್ ಗ್ಯಾರಂಟಿ!
ಕನಿಷ್ಠ ಎಷ್ಟು ಮೊತ್ತ ಸಿಗುತ್ತೆ?
ಈ ಪಾಲಿಸಿ ಅಡಿಯಲ್ಲಿ ಕನಿಷ್ಠ 75,000ರೂ. ಮೂಲ ಮೊತ್ತದ ಭರವಸೆ ನೀಡಲಾಗಿದೆ. ಗರಿಷ್ಠ ಮೂಲ ಮೊತ್ತ 3 ಲಕ್ಷ ರೂ. ಅಂದ್ರೆ ಎಲ್ ಐಸಿ ಆಧಾರ್ ಶಿಲಾ ಪಾಲಿಸಿಯಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 3 ಲಕ್ಷ ರೂ. ಹೂಡಿಕೆ (Invest) ಮಾಡಬಹುದು. ಈ ಪಾಲಿಸಿಯ ಮಚ್ಯುರಿಟಿ ಅವಧಿ 10 ವರ್ಷಗಳಿಂದ 20 ವರ್ಷಗಳು. ಇನ್ನು ಪ್ರೀಮಿಯಂ (Premium) ಅನ್ನು ತಿಂಗಳು, ಮೂರು ತಿಂಗಳು, 6 ತಿಂಗಳು ಅಥವಾ ವರ್ಷಕ್ಕೊಮ್ಮೆ ಇವುಗಳಲ್ಲಿ ಯಾವುದಾದರೂ ಒಂದು ಅವಧಿಯನ್ನು ಆರಿಸಿಕೊಂಡು ಪಾವತಿಸಬಹುದು.
ಮೆಚ್ಯುರಿಟಿ ಬಳಿಕ 4ಲಕ್ಷ ಪಡೆಯೋದು ಹೇಗೆ?
ಉದಾಹರಣೆಗೆ ನೀವು ದಿನಕ್ಕೆ 29ರೂ. ಉಳಿತಾಯ ಮಾಡುತ್ತೀರಿ ಎಂದು ಭಾವಿಸೋಣ. ಅಂದ್ರೆ ವರ್ಷಕ್ಕೆ ನೀವು 10,959 ರೂ. ಎಲ್ಐಸಿ ಆಧಾರ್ ಶಿಲಾ ಪ್ಲ್ಯಾನ್ ನಲ್ಲಿ ಠೇವಣಿಯಿಡಬಹುದು. ಹೀಗೆ ನೀವು 30ನೇ ವಯಸ್ಸಿಗೆ ಈ ಯೋಜನೆಯಲ್ಲಿ ಹೂಡಿಕೆ ಪ್ರಾರಂಭಿಸಿ ನಿರಂತರ 20 ವರ್ಷಗಳ ತನಕ ವರ್ಷಕ್ಕೆ 10,959 ರೂ. ಹೂಡಿಕೆ ಮಾಡುತ್ತೀರಿ. ಅಂದ್ರೆ 20 ವರ್ಷಕ್ಕೆ ನೀವು 2,14,696 ರೂ. ಹೂಡಿಕೆ ಮಾಡುತ್ತೀರಿ. ಮೆಚ್ಯುರಿಟಿ ಅವಧಿಯಲ್ಲಿ ನೀವು 3,97,000 ರೂ. ರಿಟರ್ನ್ ಗಳಿಸುತ್ತೀರಿ.
Post Office Scheme:ತಿಂಗಳಿಗೆ ರೂ.10,000 ಹೂಡಿಕೆ ಮಾಡಿ, ರೂ.16 ಲಕ್ಷ ಗಳಿಸಿ!
ಯಾರು ಅರ್ಹರು?
8 ರಿಂದ 55 ವರ್ಷ ವಯಸ್ಸಿನ ಯಾವುದೇ ಮಹಿಳೆ ಈ ಯೋಜನೆಯಲ್ಲಿ ಹೂಡಿಕೆ (Invest) ಮಾಡಬಹುದು. ಪಾಲಿಸಿಯ ಮೆಚ್ಯುರಿಟಿ ಪ್ರಯೋಜನಗಳನ್ನು ಒಮ್ಮೆಗೆ ಪಡೆಯೋ ಬದಲು ಆಯ್ದ 5 ವರ್ಷ ಅಥವಾ 10 ವರ್ಷಗಳು ಅಥವಾ 15 ವರ್ಷಗಳ ಅವಧಿಯಲ್ಲಿ ಕಂತುಗಳಲ್ಲಿ ಪಡೆಯಲು ಅವಕಾಶವಿದೆ. ಪಾಲಿಸಿದಾರರು (Policy holders) ಎರಡು ವರ್ಷಗಳ ಪೂರ್ಣ ಪ್ರೀಮಿಯಂ (Premium) ಪಾವತಿಸಿದ ಬಳಿಕ ಯಾವುದೇ ಸಮಯದಲ್ಲಿ ಪಾಲಿಸಿಯನ್ನು ಒಪ್ಪಿಸಿ ಸರೆಂಡರ್ ವ್ಯಾಲ್ಯೂ (Surrender Value) ಪಡೆಯಬಹುದು.
