Asianet Suvarna News Asianet Suvarna News

ಎಲ್‌ಐಸಿಯಿಂದ ಹೊಸ ವಿಮಾ ಯೋಜನೆ ‘ಆರೋಗ್ಯ ರಕ್ಷಕ್‌’

  • ಭಾರತೀಯ ಜೀವ ವಿಮಾ ನಿಗಮದಿಂದ(ಎಲ್‌ಐಸಿ) ಆರೋಗ್ಯ ರಕ್ಷಕ್‌ ಎಂಬ ನೂತನ ಆರೋಗ್ಯ ವಿಮಾ ಯೋಜನೆ
  • ಆರೋಗ್ಯ ಸಂಬಂಧಿ ತುರ್ತು ಸಮಯಗಳಲ್ಲಿ ಪಾಲಿಸಿದಾರರು ಮತ್ತು ಅವರ ಕುಟುಂಬದವರಿಗೆ ಈ ಪಾಲಿಸಿ ನೆರವು
LIC introduced New Policy Arogya rakshak snr
Author
Bengaluru, First Published Jul 22, 2021, 10:25 AM IST

  ಬೆಂಗಳೂರು (ಜು.22):  ಭಾರತೀಯ ಜೀವ ವಿಮಾ ನಿಗಮವು(ಎಲ್‌ಐಸಿ) ಆರೋಗ್ಯ ರಕ್ಷಕ್‌ ಎಂಬ ನೂತನ ಆರೋಗ್ಯ ವಿಮಾ ಯೋಜನೆಯನ್ನು ಜು.19 ರಿಂದ ಪರಿಚಯಿಸಿದೆ. ಆರೋಗ್ಯ ಸಂಬಂಧಿ ತುರ್ತು ಸಮಯಗಳಲ್ಲಿ ಪಾಲಿಸಿದಾರರು ಮತ್ತು ಅವರ ಕುಟುಂಬದವರಿಗೆ ಈ ಪಾಲಿಸಿಯು ನೆರವಿಗೆ ಬರಲಿದೆ ಎಂದು ನಿಗಮ ತಿಳಿಸಿದೆ.

ಈ ಪಾಲಿಸಿಯು ನಿಯಮಿತ ಪ್ರೀಮಿಯಂನ ವೈಯಕ್ತಿಕ ಆರೋಗ್ಯ ವಿಮೆಯಾಗಿದೆ. ಆರೋಗ್ಯ ರಕ್ಷಕ್‌ ಯೋಜನೆಯು ಕೆಲವು ನಿರ್ದಿಷ್ಟಆರೋಗ್ಯ ಅಪಾಯಗಳಿಗೆ ಸ್ಥಿರ-ಲಾಭದ ಆರೋಗ್ಯ ವಿಮೆಯನ್ನು ನೀಡುತ್ತದೆ. ವಿಮೆ ಮಾಡಿಸಿದವರಿಗೆ ಮತ್ತು ಅವರ ಕುಟುಂಬಕ್ಕೆ ಸಂಕಷ್ಟದ ಸಮಯದಲ್ಲಿ ಆರ್ಥಿಕ ನೆರವು ಒದಗಿಸುತ್ತದೆ.

ಸಿಹಿ ಸುದ್ದಿ: ಎಲ್‌ಐಸಿಯಿಂದ ಸರಳ ಪೆನ್ಷನ್‌ ಪಾಲಿಸಿ ಆರಂಭ

ವ್ಯಕ್ತಿಯು ತನ್ನ ಪತಿ/ಪತ್ನಿ, ಮಕ್ಕಳು ಮತ್ತು ಪೋಷಕರನ್ನು ಒಂದೇ ಪಾಲಿಸಿಯಡಿ ತರಲು ಅವಕಾಶವಿದೆ. 18 ರಿಂದ 65 ವರ್ಷದವರೆಗಿನ ವಯೋಮಾನದವರು ಪಾಲಿಸಿ ಮಾಡಿಸಬಹುದಾಗಿದ್ದು 91 ದಿವಸದಿಂದ 20 ವರ್ಷದವರೆಗಿನ ಮಕ್ಕಳನ್ನು ಯೋಜನೆ ವ್ಯಾಪ್ತಿಗೆ ಸೇರಿಸಬಹುದು. ವ್ಯಕ್ತಿಯ ಪತಿ/ಪತ್ನಿ ಮತ್ತು ಪೋಷಕರು 80 ವರ್ಷದವರೆಗೆ ಮತ್ತು ಮಕ್ಕಳು 25 ವರ್ಷದವರೆಗೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.

ಇಷ್ಟವಾದ ಆರೋಗ್ಯ ಸೇವೆಯ ಆಯ್ಕೆಯ ಜೊತೆಗೆ ಅನುಕೂಲಕರ ಪ್ರೀಮಿಯಂ ಪಾವತಿಗೆ ಅವಕಾಶವಿದೆ. ಆಸ್ಪತ್ರೆಗೆ ದಾಖಲಾದಾಗ ಅಥವಾ ಶಸ್ತ್ರಚಿಕಿತ್ಸೆ ಅಗತ್ಯವಿದ್ದಾಗ ಆರ್ಥಿಕ ರಕ್ಷಣೆ ಒದಗಿಸುತ್ತದೆ. ವೈದ್ಯಕೀಯ ವೆಚ್ಚದಲ್ಲಿ ಭಾರೀ ಮೊತ್ತದ ಉಳಿತಾಯವಾಗುತ್ತದೆ. ಪಾಲಿಸಿದಾರರಿಗೆ ಆ್ಯಂಬ್ಯುಲೆನ್ಸ್‌ , ಆರೋಗ್ಯ ತಪಾಸಣಾ ಸೌಲಭ್ಯವಿದೆ. ಪಾಲಿಸಿಯು ಬಹು ಸದಸ್ಯರನ್ನು ಹೊಂದಿದ್ದು ವಿಮೆ ಮಾಡಿಸಿದವರು ದುರದೃಷ್ಟವಶಾತ್‌ ನಿಧನರಾದರೆ ಇತರ ವಿಮಾದಾರರ ಪ್ರೀಮಿಯಂ ಪಾವತಿಯಿಂದ ವಿನಾಯತಿ ದೊರೆಯುತ್ತದೆ ಎಂದು ನಿಗಮ ತಿಳಿಸಿದೆ.

Follow Us:
Download App:
  • android
  • ios