* 40ರಿಂದ 80 ವರ್ಷದೊಳಗಿನ ಯಾರಿಗೆ ಬೇಕಾದರೂ ಪಿಂಚಣಿ* ಕನಿಷ್ಠ 12 ಸಾವಿರ ರು. ಪಾವತಿ * ‘ಸರಳ ಪೆನ್ಷನ್‌’ ಎಂಬ ಯೋಜನೆ ಜು. 1ರಿಂದ ಪ್ರಾರಂಭ 

ಬೆಂಗಳೂರು(ಜು.02): ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ನೂತನವಾಗಿ ‘ಸರಳ ಪೆನ್ಷನ್‌’ ಎಂಬ ಯೋಜನೆಯನ್ನು 2021ರ ಜುಲೈ 1ರಿಂದ ಪ್ರಾರಂಭಿಸಿದೆ. ಇದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಮಾರ್ಗಸೂಚಿಗಳ ಪ್ರಕಾರ ಪ್ರಾಮಾಣೀಕರಿಸಿರುವ ಯೋಜನೆಯಾಗಿದ್ದು, ಎಲ್ಲ ಜೀವ ವಿಮೆದಾರರಿಗೂ ಒಂದೇ ರೀತಿಯ ನಿಯಮಗಳು ಮತ್ತು ಷರತ್ತು ಅನ್ವಯವಾಗಲಿದೆ. 

ಎರಡು ವರ್ಷಗಳ ಅವಧಿಯ ಈ ಯೋಜನೆಯಲ್ಲಿ ವಾರ್ಷಿಕವಾಗಿ ಒಂದೇ ಕಂತಿನಲ್ಲಿ ಪಾವತಿ, ಖರೀದಿ ಮಾಡಬಹುದಾಗಿದೆ. ಅಲ್ಲದೆ, ಯಾವುದೇ ಇತರೆ ಖಾತೆಗಳೊಂದಿಗೆ ಸೇರ್ಪಡೆಯಾಗುವುದಿಲ್ಲ.

ಎಲ್‌ಐಸಿ ಪಾಲಿಸಿದಾರರಿಗೆ ಸಂತಸದ ಸುದ್ದಿ..!

ಈ ಪಾಲಿಸಿಯನ್ನು 40ರಿಂದ 80 ವರ್ಷದವರಿಗಾಗಿ ಪರಿಚಯಿಸಿದ್ದು, ಕನಿಷ್ಠ 12 ಸಾವಿರ ರು. ಪಾವತಿ ಮಾಡಬೇಕಾಗಿದೆ. ಇನ್ನುಳಿದಂತೆ ಗರಿಷ್ಠ 50 ಸಾವಿರದವರೆಗೂ ಒಂದೇ ಕಂತಿನಲ್ಲಿ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಆಫ್‌ಲೈನ್‌ ಮತ್ತು ಆನ್‌ಲೈನ್‌ ಮೂಲಕ ಪಾವತಿ ಮಾಡಲು ಅವಕಾಶವಿದೆ. ಅಲ್ಲದೆ, ಪಾಲಿಸಿ ಪ್ರಾರಂಭವಾದ ಆರು ತಿಂಗಳ ನಂತರ ಸಾಲ ಸೌಲಭ್ಯಗಳು ಲಭ್ಯವಿರಲಿವೆ ಎಂದು ಎಲ್‌ಐಸಿ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ www.licindia.in ಭೇಟಿ ನೀಡಬಹುದಾಗಿದೆ.