ನವದೆಹಲಿ[ಜ.20]: ವಕೀಲರಿಗೆ ಸೇವಾ ತರಿಗೆಯಿಂದ ವಿನಾಯಿತಿ ನೀಡಲಾಗಿದ್ದು, ಅವರ ಮೇಲೆ ತೆರಿಗೆ ಹೇರುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೆಲವು ವಕೀಲರಿಗೆ ಅವರ ಆದಾಯ ತೆರಿಗೆ ಮತ್ತು ಸೇವಾ ತೆರಿಗೆ ವಿವರಗಳನ್ನು ಪ್ರತ್ಯೇಕವಾಗಿ ಸಲ್ಲಿಸುವಂತೆ ನೋಟಿಸ್‌ ಜಾರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಕೀಲರು ಹಣಕಾಸು ಸಚಿವಾಲಯದ ಬಳಿ ಈ ವಿಷಯ ಪ್ರಸ್ತಾಪಿಸಿದ್ದರು.

ನಿಮಗೆಷ್ಟು ಧೈರ್ಯ?: ತಾಯಿಯ ಕೋಪದ ಕಂಗಳಲ್ಲಿ ಕಂಡಳು ನಿರ್ಭಯಾ!

ಕೆಲವು ವಕೀಲರು ಚಾರ್ಟೆಡ್‌ ಅಕೌಂಟೆಂರ್ಟ್‌ ಅಥವಾ ಇನ್ನಾವುದೋ ಸೇವೆ ನೀಡುತ್ತಿದ್ದ ಕಾರಣಕ್ಕೆ ನೋಟಿಸ್‌ ಜಾರಿ ಆಗಿರುವ ಸಾಧ್ಯತೆ ಇದೆ. ವಕೀಲರಿಗೆ ಸೇವಾ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಜಿಎಸ್‌ಟಿ ಆಡಳಿತದಲ್ಲೂ ವಕೀಲರು ಇದೇ ಸೌಲಭ್ಯವನ್ನು ಪಡೆದಿದ್ದಾರೆ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.