ಜಗತ್ತಿನ ಶ್ರೀಮಂತರಾದ ಎಲಾನ್ ಮಸ್ಕ್, ಜೆಫ್ ಬೆಜೋಸ್, ಬಿಲ್ ಗೇಟ್ಸ್, ಮುಕೇಶ್ ಅಂಬಾನಿ ಆಸ್ತಿಗಳಿಗೆ ಹೋಲಿಸಿದರೆ ಈ ಸಿಇಒ ಆಸ್ತಿ ದುಪ್ಪಟ್ಟು. ಅರ್ಧ ಭಾರತ ಹಾಗೂ ಅಮೆರಿಕ ಖರೀದಿಸುವ ಆಸ್ತಿ ಈ ಉದ್ಯಮಿ ಬಳಿದೆ. ಆದರೂ ಯಾವುದೇ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವಿಲ್ಲ.
ನವದೆಹಲಿ(ಜ.26) ಜಗತ್ತಿನ ಶ್ರೀಮಂತರ ಪಟ್ಟಿ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ ಆದರೆ ಎಲಾನ್ ಮಸ್ಕ್, ಜೆಫ್ ಬೆಜೋಸ್, ಬಿಲ್ ಗೇಟ್ಸ್, ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಹಲವು ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಕೇವಲ ಸ್ಥಾನಗಳು ಬದಲಾಗಬಹುದು. ಆದರೆ ಶ್ರೀಮಂತರ ಲಿಸ್ಟ್‌ನಲ್ಲಿ ಸ್ಥಾನ ಇದ್ದೇ ಇರುತ್ತದೆ. ಆದರೆ ಇವರೆಲ್ಲರನ್ನು ಮೀರಿಸುವ ಶ್ರೀಮಂತಿಕೆಯ ಉದ್ಯಮಿ ಇದ್ದಾರೆ. ಈತನ ಆಸ್ತಿ ಎಷ್ಟಿದೆ ಎಂದರೆ ಅರ್ಧ ಭಾರತ ಹಾಗೂ ಅಮೆರಿಕ ಖರೀದಿಸಬಹುದು. ಫೋರ್ಬ್ಸ್ ಸೇರಿದಂತೆ ಹಲವು ಅಧ್ಯಯನ ವರದಿಗಳಲ್ಲಿ ಸ್ಥಾನ ಪಡೆದಿರುವ ಉದ್ಯಮಿಗಳ ಆಸ್ತಿ ಈತನ ಮುಂದೆ ಲೆಕ್ಕಕ್ಕಿಲ್ಲ. ಆದರೂ ಈ ಉದ್ಯಮಿ ಯಾವುದೇ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಈ ಉದ್ಯಮಿಯ ಹೆಸರು ಲ್ಯಾರಿ ಫಿಂಕ್.
ಬ್ಲಾಕ್‌ರಾಕ್ ಕಂಪನಿ ಸಿಇಒ ಲ್ಯಾರಿ ಫಿಂಕ್ ಆಸ್ತಿಊಹೆಗೂ ನಿಲುಕದ್ದು. ಬ್ಲಾಕ್‌ರಾಕ್ ಕಂಪನಿಯ ಮಾರುಕಟ್ಟೆ ಬಂಡವಾಳ ಬರೋಬ್ಬರಿ 12.808 ಟ್ರಿಲಿಯನ್ ಡಾಲರ್. ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಗಳ ಪೈಕಿ 102ನೇ ಸ್ಥಾನದಲ್ಲಿದೆ. ಅಸೆಟ್ ಮ್ಯಾನೇಜ್ಮೆಂಟ್, ಮ್ಯೂಚ್ಯುಲ್ ಫಂಡ್ ಸೇರಿದಂತೆ ಹಲವು ಉದ್ಯಮಗಳಲ್ಲಿ ಲ್ಯಾರಿ ಫಿಂಕ್ ಬಂಡವಾಳ ಹೂಡಿಕೆ ಮಾಡಿದ್ದಾರೆ.
ನಾರಾಯಣ ಮೂರ್ತಿಗಿಂತ ಶ್ರೀಮಂತ ಈ ಇನ್ಫೋಸಿಸ್ ಸಹ ಸಂಸ್ಥಾಪಕ, ಇಲ್ಲಿದೆ ಧನಿಕರ ಪಟ್ಟಿ!
ಬ್ಲಾಕ್‌ರಾಕ್ ಕಂಪನಿಯ ಒಟ್ಟು ವ್ಯವಹಾರ, ಮೌಲ್ಯ ಹಾಗೂ ಬಂಡವಾಳ ಹಲವು ದೇಶಗಳ ಜಿಡಿಪಿಗಿಂತ ಹೆಚ್ಚಿದೆ. ಆದರೆ ಲ್ಯಾರಿ ಫಿಂಕ್ ಕುರಿತು ಹೆಚ್ಚಿನವರಿಗೆ ಗೊತ್ತಿಲ್ಲ. ಶ್ರೀಮಂತರ ಪಟ್ಟಿಯಲ್ಲಿ ಲ್ಯಾರಿ ಫಿಂಕ್ ಹೆಸರಿಲ್ಲ. ವಾಶಿಂಗ್ಟನ್ ಹಾಗೂ ವಾಲ್‌ಸ್ಟ್ರೀಟ್ ನಿವಾಸಿಗಳಿಗೆ ಲ್ಯಾರಿ ಫಿಂಕ್ ಬಗ್ಗೆ ಗೊತ್ತಿರಬಹುದು. ಇನ್ನುಳಿದವರಿಗೆ ಲ್ಯಾರಿ ಫಿಂಕ್ ಕುರಿತು ಮಾಹಿತಿ ಗೊತ್ತಿಲ್ಲ. ಈತನ ಕಂಪನಿ ಬಗ್ಗೆಯೂ ಮಾಹಿತಿ ಇಲ್ಲ.
2010ರಲ್ಲಿ ಪ್ರಕಟವಾದ ವ್ಯಾನಿಟಿ ಫೇರ್ ಲೇಖನ ಪ್ರಕಾರ, ಅಮೆರಿಕ ಆರ್ಥಿಕ ಹಿಂಜರಿತ ಅನುಭವಿಸಿದಾಗ ಹಲವು ದಿಗ್ಗಜರು ಪಾತಾಳಕ್ಕೆ ಕುಸಿದಿದ್ದರು. ಈ ವೇಳೆ ಲ್ಯಾರಿ ಫಿಂಕ್ ಸಲಹೆ ಪಡೆದಿದ್ದರು ಎಂದು ವರದಿ ಮಾಡಿತ್ತು. ಇಷ್ಟೇ ಅಲ್ಲ ಉದ್ಯಮ ಜಗತ್ತಿನ ಹಲವು ಒಪ್ಪಂದಗಳ ವೇಳೆ ಲ್ಯಾರಿ ಫಿಂಕ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಆದರೆ ಎಲ್ಲೂ ಕೂಡ ಲ್ಯಾರಿ ಫಿಂಕ್ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ತಮ್ಮ ಆಸ್ತಿಗಳ ಕುರಿತು ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಹಲವರ ಪ್ರಕಾರ, ಲ್ಯಾರಿ ಫಿಂಕ್ ತಮ್ಮ ಆಸ್ತಿಗಳನ್ನು ಹಲವು ರೀತಿಯಲ್ಲಿ ವಿಂಗಡಿಸಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ಯಾರ ಕಣ್ಣಿಗೆ ಬೀಳುವುದಿಲ್ಲ ಎನ್ನುತ್ತಾರೆ.
ಲ್ಯಾರಿ ಫಿಂಕ್ ಅಮೆರಿಕ ಸರ್ಕಾರದ ಪರ ನಿಂತು ಹಲವು ಒಪ್ಪಂದಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಇದೇ ಕಾರಣ ಲ್ಯಾರಿ ಫಿಂಕ್ ಹೆಸರು ಎಲ್ಲೂ ಬಹಿರಂಗವಾಗುವುದಿಲ್ಲ ಅನ್ನೋ ವಾದವೂ ಇದೆ. ಅತೀ ದೊಡ್ಡ ಕಂಪನಿ, ಪ್ರತಿ ದಿನ ಕೋಟಿ ಕೋಟಿ ರೂಪಾಯಿ ಆದಾಯಗಳಿಸುತ್ತಿರುವ ಲ್ಯಾರಿ ಫಿಂಕ್ ವ್ಯವಹಾರಗಳನ್ನು ಗೌಪ್ಯವಾಗಿ ಮಾಡಿ ಮುಗಿಸುತ್ತಾರೆ.
ನೀತಾ ಅಂಬಾನಿಯ ಪಾಪ್ ಕಾರ್ನ್ ಶೈಲಿಯ ಬ್ಯಾಗ್ ಬೆಲೆಗೆ 2 ಕಾರು ಖರೀದಿಸಬಹುದು!
