ಉದ್ಯೋಗ ಕಡಿತ ಬೇಡ: ಮೋದಿ ಸಲಹೆಗೆ ಹಣ ಎಲ್ಲಿದೆ ಎನ್ನುತ್ತಿರುವ ಉದ್ಯಮಿಗಳು!

ಉದ್ಯೋಗ, ವೇತನ ಕಡಿತದ ಕುರಿತ ವರದಿ ಶೀಘ್ರ ಮೋದಿಗೆ| ಇಪಿಎಫ್‌ಒ, ಎಸ್‌ಐಸಿಯಿಂದ ಈ ಕುರಿತ ಮಾಹಿತಿ ಕ್ರೋಢೀಕರಣ| ಕ್ರೋಢೀಕರಣಗೊಂಡ ಬಳಿಕ ಪ್ರಧಾನಿ ಕಾರ್ಯಾಲಯಕ್ಕೆ ರವಾನೆ| ಉದ್ಯೋಗ ಕಡಿತ ಬೇಡ: ಮೋದಿ ಸಲಹೆಗೆ ಹಣ ಎಲ್ಲಿದೆ ಎನ್ನುತ್ತಿರುವ ಉದ್ಯಮಿಗಳು!| ಪ್ಯಾಕೇಜ್‌ ಇಲ್ಲದೆ ಬಿಸಿನೆಸ್‌ ಕಷ್ಟ: ಉದ್ಯಮಿಗಳ ಅಸಹಾಯಕತೆ|  3 ತಿಂಗಳಲ್ಲಿ 1.5 ಲಕ್ಷ ಐಟಿ ಉದ್ಯೋಗಿಗಳಿಗೆ ಕುತ್ತು ಸಂಭವ|  ಶೇ.35ರಷ್ಟುಬಿಪಿಒ ನೌಕರರ ಕೆಲಸ ಹೋಗುವ ನಿರೀಕ್ಷೆ

Labour Ministry to share data on layoffs salary cuts with PMO

ನವದೆಹಲಿ(ಏ.18):  ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಉದ್ಯೋಗ, ವೇತನ ಕಡಿತ ಮಾಡಲಾಗುತ್ತಿದೆ, ವೇತನ ಪಾವತಿಯಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, ಈ ಕುರಿತ ಮಾಹಿತಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ರವಾನಿಸಲು ಕೇಂದ್ರ ಕಾರ್ಮಿಕ ಸಚಿವಾಲಯ ಅಣಿಯಾಗುತ್ತಿದೆ.

ದೇಶಾದ್ಯಂತ ವೇತನ ಕಡಿತ, ವೇತನ ವಿಳಂಬ ಹಾಗೂ ಉದ್ಯೋಗ ಕಳೆದುಕೊಂಡ ನೌಕರರ ಸಂಖ್ಯೆ ಕ್ರೋಢೀಕರಿಸುವಂತೆ ಕೇಂದ್ರ ಕಾರ್ಮಿಕ ಇಲಾಖೆ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಹಾಗೂ ಕಾರ್ಮಿಕರ ರಾಜ್ಯ ವಿಮಾ ಕಾರ್ಪೊರೇಷನ್‌(ಇಎಸ್‌ಐಸಿ) ಸಂಸ್ಥೆಗಳಿಗೆ ಕಾರ್ಮಿಕ ಸಚಿವಾಲಯ ಸೂಚನೆ ನೀಡಿದೆ. ಎಲ್ಲಾ ರಾಜ್ಯಗಳ ಮಾಹಿತಿ ಕ್ರೋಢೀಕರಣಗೊಂಡ ಬಳಿಕ ಅದನ್ನು ಪ್ರಧಾನಿ ಕಾರ್ಯಾಲಯಕ್ಕೆ ರವಾನಿಸಲಾಗುತ್ತದೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಕೊರೋನಾ ವೈರಸ್‌ ಅಬ್ಬರಕ್ಕೆ ದೇಶದ ಆರ್ಥಿಕತೆಯ ಕುಸಿತ ಸೇರಿದಂತೆ ಇನ್ನಿತರ ಸಮಸ್ಯೆಗಳು ಮನೆ ಮಾಡಿದೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಯಾವುದೇ ನೌಕರರನ್ನು ಉದ್ಯೋಗಪತಿಗಳು ಕೆಲಸದಿಂದ ತೆಗೆದು ಹಾಕಬಾರದು. ಅಲ್ಲದೆ, ಎಲ್ಲ ನೌಕರರ ವೇತನದಲ್ಲಿ ಯಾವುದೇ ಕಡಿತ ಮಾಡದೆ, ಪೂರ್ಣ ವೇತನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, ಕೇಂದ್ರ ಕಾರ್ಮಿಕ ಸಚಿವಾಲಯ, ನೌಕರರ ಮಾಹಿತಿಯನ್ನು ಕ್ರೋಢೀಕರಿಸುವಂತೆ ಸೂಚಿಸಿದೆ.

ಅಮೆರಿಕ ಸಂಸತ್‌ನಲ್ಲಿ ಮಂಡನೆಯಾಯ್ತು ಈ ಮಸೂದೆ, ಚೀನಾಗೆ ಶಾಕ್!

ದೇಶಾದ್ಯಂತ ವಿವಿಧ ವಲಯಗಳಲ್ಲಿ ಸುಮಾರು 50 ಕೋಟಿ ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಶೇ.10ರಷ್ಟುಅಂದರೆ, 5 ಕೋಟಿ ಮಂದಿ ಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಉದ್ಯೋಗ ಕಡಿತ ಬೇಡ: ಮೋದಿ ಸಲಹೆಗೆ ಹಣ ಎಲ್ಲಿದೆ ಎನ್ನುತ್ತಿರುವ ಉದ್ಯಮಿಗಳು!

ಕೊರೋನಾ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 40 ದಿನಗಳ ಲಾಕ್‌ಡೌನ್‌ನ ಅಡ್ಡಪರಿಣಾಮದ ಬಿಸಿ ತಟ್ಟಲು ಆರಂಭವಾಗಿದೆ. ಮೊದಲೇ ಆರ್ಥಿಕ ಹಿಂಜರಿತ ಅನುಭವಿಸಿದ್ದ ಉದ್ಯಮಿಗಳಿಗೆ ಲಾಕ್‌ಡೌನ್‌ ಡಬಲ್‌ ಹೊಡೆತದ ರೂಪದಲ್ಲಿ ಎದುರಾಗಿದೆ. ಹೀಗಾಗಿ ಕಂಪನಿಗಳು ನೌಕರರನ್ನು ಮನೆಗೆ ಕಳುಹಿಸುವ ಕೆಲಸವನ್ನು ಸದ್ದಿಲ್ಲದೆ ಆರಂಭಿಸಿವೆ.

ಲಾಕ್‌ಡೌನ್‌ ಘೋಷಿಸಿರುವ ಕಾರಣ ಯಾವುದೇ ಕಂಪನಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬಾರದು ಎಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಎರಡು ಬಾರಿ ಮನವಿ ಮಾಡಿದ್ದರೂ, ಉದ್ಯಮ ವಲಯ ಅಸಹಾಯಕತೆ ವ್ಯಕ್ತಪಡಿಸುತ್ತಿದೆ. ಸರ್ಕಾರ ಆರ್ಥಿಕ ಪ್ಯಾಕೇಜ್‌ ಘೋಷಿಸದ ಹೊರತು ವ್ಯವಹಾರ ನಡೆಸುವುದೇ ಕಷ್ಟಎಂದು ಹೇಳುತ್ತಿದೆ. ಮಾಹಿತಿ ತಂತ್ರಜ್ಞಾನ, ವೈಮಾನಿಕ, ಟ್ರಾವೆಲ್‌, ಮಾಧ್ಯಮ ಹಾಗೂ ಕಾರ್ಯಕ್ರಮ ಆಯೋಜನೆ ಕಂಪನಿಗಳಲ್ಲಿ ಈಗಾಗಲೇ ಸಹಸ್ರಾರು ಜನರನ್ನು ಮನೆಗೆ ಕಳುಹಿಸಲಾಗಿದೆ.

ಕೊರೋನಾ ವಿರುದ್ಧ ಹೋರಾಟ: ಸಿಎಂ ಪರಿಹಾರ ನಿಧಿಗೆ DCC ಬ್ಯಾಂಕ್‌ 1 ಕೋಟಿ ದೇಣಿಗೆ

ಗೋ ಏರ್‌ ಹಾಗೂ ಸ್ಪೈಸ್‌ಜೆಟ್‌ ಕಂಪನಿಗಳು ವಿದೇಶಿ ಪೈಲಟ್‌ಗಳ ಗುತ್ತಿಗೆಯನ್ನೇ ರದ್ದುಗೊಳಿಸಿವೆ. ಇತರೆ ವಿಮಾನಯಾನ ಕಂಪನಿಗಳು ಸಂಬಳ ಕಡಿತಗೊಳಿಸಿವೆ. ಜತೆಗೆ ಒಂದಷ್ಟುನೌಕರರನ್ನು ಸಂಬಳರಹಿತ ರಜೆ ಮೇಲೆ ಕಳುಹಿಸಿವೆ. ಏರ್‌ ಡೆಕ್ಕನ್‌ ಕಂಪನಿ ಎಲ್ಲ ನೌಕರರನ್ನು ವೇತನಸಹಿತ ರಜೆ ಹೆಸರಿನಲ್ಲಿ ಮನೆಗೆ ಅಟ್ಟಿದೆ.

ಐಟಿ ಉದ್ಯಮದ ಪ್ರಕಾರ, ಮುಂದಿನ 3-6 ತಿಂಗಳಲ್ಲಿ 1.5 ಲಕ್ಷ ಟೆಕಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಬಿಪಿಒ ಉದ್ಯೋಗಿಗಳ ಪೈಕಿ ಶೇ.30ರಿಂದ ಶೇ.35 ನೌಕರರು ವಜಾಗೊಳ್ಳಲಿದ್ದಾರೆ.

‘ಪ್ರತಿ ತಿಂಗಳು ನೌಕರರ ವೇತನಕ್ಕೆ 20 ಕೋಟಿ ರು. ವೆಚ್ಚ ಮಾಡಬೇಕು. ಆದರೆ ಒಂದು ತಿಂಗಳಿಂದ ಏನೂ ಉತ್ಪಾದಿಸಿಲ್ಲ. ಹೀಗಾದರೆ ಸಂಬಳ ಕೊಡೋದು ಹೇಗೆ’ ಎಂದು ಉತ್ಪಾದನಾ ಕಂಪನಿಯೊಂದರ ಹಿರಿಯ ಅಧಿಕಾರಿ ಅಸಹಾಯಕತೆ ತೋಡಿಕೊಂಡಿದ್ದಾರೆ.

ರಾಜ್ಯದಲ್ಲಿವೆ ಪ್ಲೇಗಮ್ಮ, ಸಿಡುಬಮ್ಮ, ಏಡ್ಸಮ್ಮ ಗುಡಿ: ಈಗ ‘ಕೊರೋನಮ್ಮ’ ಹೆಸರಲ್ಲೂ ಪೂಜೆ!

ಉದ್ಯೋಗಿಗಳನ್ನು ವಜಾಗೊಳಿಸಬೇಡಿ ಎಂದು ಪ್ರಧಾನಿ ಹೇಳಿರಬಹುದು. ಆದರೆ ಸಂಬಳ ಕೊಡಲು ಹಣ ಎಲ್ಲಿದೆ ಎಂದು ಮಣಿಪಾಲ್‌ ಗ್ಲೋಬಲ್‌ ಮುಖ್ಯಸ್ಥ ಮೋಹನದಾಸ ಪೈ ಹೇಳಿದ್ದಾರೆ.

Latest Videos
Follow Us:
Download App:
  • android
  • ios