Asianet Suvarna News Asianet Suvarna News

Kolkata Cartoonist Coffee: ಇಂಟರ್ನೆಟ್ ಸೆನ್ಸೇಷನ್ ಆಗಿರೋ ಈ ಕಾಫಿ ಶಾಪ್ ವಿಶೇಷ ಏನು ಗೊತ್ತಾ?

ವ್ಯವಹಾರದ ಜೊತೆ ಕಲೆ ಬೆರೆತಾಗ ಅದು ವಿಶೇಷ ಆಕರ್ಷಣೆ ಪಡೆಯುತ್ತದೆ. ಎರಡನ್ನೂ ಸೇರಿಸುವ ಕಲೆ ಗೊತ್ತಿರಬೇಕು. ಕೊಲ್ಕತ್ತಾ ವ್ಯಕ್ತಿಯೊಬ್ಬ ಜನರ ಮುಖದಲ್ಲಿ ನಗುತರಿಸಲು ಮಾಡಿದ ಕೆಲಸ ಅಧ್ಬುತವಾಗಿದೆ. 

Kolkata Cartoonist Coffee Stall Hit On Internet Video Viral roo
Author
First Published Dec 30, 2023, 12:54 PM IST

ಜಗತ್ತಿನ ಮೂಲೆ ಮೂಲೆಯಲ್ಲಿ ಕಲಾವಿದರಿದ್ದಾರೆ. ಆದ್ರೆ ಎಲ್ಲ ಕಲಾವಿದರನ್ನು ಗುರುತಿಸೋದು ಕಷ್ಟ. ಕೆಲವರು ರಾತ್ರೋರಾತ್ರಿ ಪ್ರಸಿದ್ಧಿಗೆ ಬರ್ತಾರೆ. ಮತ್ತೆ ಕೆಲವರು ಅದೆಷ್ಟೇ ಪ್ರಯತ್ನ ನಡೆಸಿದ್ರೂ ಹೆಸರು, ಹಣ ಎರಡೂ ಮಾಡೋದು ಕಷ್ಟ. ಇನ್ನು ಕೆಲ ಕಲಾವಿದರು ತಮ್ಮ ಪ್ರತಿಭೆಯನ್ನು ಅತ್ಯಂತ ಆಕರ್ಷಕವಾಗಿ ಬಳಸಿಕೊಳ್ತಾರೆ. ತಮ್ಮ ಕಲೆ ಮೂಲಕವೇ ಜನರನ್ನು ಸೆಳೆಯುವುದಲ್ಲದೆ ಹಣ ಸಂಪಾದನೆ ಮಾಡುತ್ತಾರೆ, ಪ್ರಸಿದ್ಧಿ ಪಡೆಯುತ್ತಾರೆ. ಈಗಿನ ದಿನಗಳಲ್ಲಿ ಕಲಾವಿದರಿಗೆ ಸೂಕ್ತ ಸ್ಥಾನ ಸಿಗ್ತಿಲ್ಲ ಎನ್ನುವ ಕೂಗು ಕೇಳಿ ಬರ್ತಿದೆ. ಅವರ ಕಲೆಗೆ ತಕ್ಕಂತೆ ಬೆಲೆ ನೀಡುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಕೊರೊನಾ, ಲಾಕ್ ಡೌನ್ ಸೇರಿದಂತೆ ಅನೇಕ ಸಮಸ್ಯೆಗಳು ಕಲಾವಿದರ ಪರಿಸ್ಥಿಯನ್ನು ಬದಲಿಸಿವೆ. ಸ್ಥಿತಿ ಏನೇ ಇರಲಿ, ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಜನರಿಗೆ ಗೊತ್ತಿರಬೇಕು. ಕೋಲ್ಕತ್ತಾದ ಟೋಲಿಗಂಜ್ ಮೆಟ್ರೋ ನಿಲ್ದಾಣದ ಬಳಿ ಇರುವ ವಿಶಿಷ್ಟ ಕಾಫಿ ಶಾಪ್ ಮಾಲೀಕರು ಇದನ್ನು ಅರಿತಿದ್ದಾರೆ.  

ಈ ಕಾಫಿ ಶಾಪ್ (Coffee Shop) ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕಾಫಿ ಶಾಪ್‌ನ ವಿಶೇಷತೆ ಎಂದರೆ ಅದರ ಮಾಲೀಕರ ಸೃಜನಶೀಲತೆ ಮತ್ತು ಅದರ ಅಲಂಕಾರ. ಈ ಅಂಗಡಿಯು ವೃತ್ತಿಪರ (Professional) ಕಾರ್ಟೂನಿಸ್ಟ್ ಮತ್ತು ಸ್ಕೆಚ್ ಆರ್ಟಿಸ್ಟ್ ಆಗಿರುವ ಶ್ಯಾಮ ಪ್ರಸಾದ್ ಡೇ ಅವರಿಗೆ ಸೇರಿದೆ. ಅವರ ಇಡೀ ಅಂಗಡಿ, ಕಾಫಿ ಕಪ್‌ಗಳು ಸಹ ಕಾರ್ಟೂನ್ (Cartoon) ನಿಂದ ಕೂಡಿದೆ. ಇಂದು ಜನರು ಕೆಲಸದಲ್ಲಿ ಬ್ಯುಸಿಯಾಗಿರ್ತಾರೆ. ಸದಾ ಒತ್ತಡದಲ್ಲಿ ಕೆಲಸ ಮಾಡ್ತಾರೆ. ಜನರು ನೆಮ್ಮದಿಯಿಂದ ಇರಬೇಕು, ಅವರ ಮುಖದಲ್ಲಿ ನಗು ಮೂಡಬೇಕು ಎನ್ನುವ ಕಾರಣಕ್ಕೆ ಶ್ಯಾಮ ಪ್ರಸಾದ್ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ತಮ್ಮ ಶಾಪ್ ನಲ್ಲಿ ಸಿಗುವ ಕಪ್ ಮೂಲಕವೇ ಜನರನ್ನು ನಗಿಸಲು ನಾನು ಬಯಸುತ್ತೇನೆ ಎಂದು ಶ್ಯಾಮಾ ಹೇಳುತ್ತಾರೆ. ಶ್ಯಾಮ ಪ್ರಸಾದ್, ಬೆಳಿಗ್ಗೆ 4 ರಿಂದ 11 ರವರೆಗೆ ಕಾಫಿ ಮಾರಾಟ ಮಾಡುತ್ತಾರೆ.

Made In India ಸ್ಮಾರ್ಟ್‌ ಪೋನ್‌ ಖರೀದಿ ಮಾಡಿರುವ ವಿಶ್ವದ ಟಾಪ್‌-10 ದೇಶಗಳು!

ಇನ್‌ಸ್ಟಾಗ್ರಾಮ್ ವ್ಲಾಗರ್ ಆರಾಧನಾ ಚಟರ್ಜಿ ಈ ಬಗ್ಗೆ ವೀಡಿಯೊ ಮಾಡಿದ್ದಾರೆ. ಶ್ಯಾಮ ಪ್ರಸಾದ್ ವಿಡಿಯೋ ವೈರಲ್ ಆಗ್ತಿದ್ದಂತೆ ಜನರಿಗೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿದೆ. ಡೇ ಅವರ ನೀಲಿ ಬಣ್ಣದ ಅಂಗಡಿಯ ಪ್ರತಿಯೊಂದು ಮೂಲೆಯನ್ನು ಅವರು ಕಾರ್ಟೂನ್‌ಗಳಿಂದ ಅಲಂಕರಿಸಿದ್ದಾರೆ. ಇದರಲ್ಲಿ ಕ್ಯಾಲಿಗ್ರಾಫಿಕ್ ಉಲ್ಲೇಖಗಳು, ಕಾರ್ಟೂನ್‌ಗಳು ಮತ್ತು ಸಂಕೀರ್ಣ ರೇಖಾಚಿತ್ರಗಳು ಸೇರಿವೆ. ಇಷ್ಟು ಒಳ್ಳೆ ಕಾರ್ಟೂನ್ ಕಲಾಕಾರನಿಗೆ ಕಾಫಿ ಶಾಪ್ ಶುರು ಮಾಡುವ ಅಗತ್ಯವೇನಿತ್ತು ಎಂದು ಎಲ್ಲರೂ ಪ್ರಶ್ನೆ ಮಾಡಿದ್ದಾರೆ. 

 

ಸುಕನ್ಯಾ ಸಮೃದ್ಧಿ, 3 ವರ್ಷದ ಠೇವಣಿಗೆ ಬಡ್ಡಿ ದರ ಏರಿಸಿದ ಕೇಂದ್ರ ಸರ್ಕಾರ!

ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಕಷ್ಟ ಎದುರಿಸಿದಂತೆ ಶ್ಯಾಮ್ ಪ್ರಸಾದ್ ಡೇ ಕೂಡ ಸಂಕಷ್ಟದಲ್ಲಿದ್ದರು. ಸಂಸಾರ ನಡೆಸುವುದು ಕಷ್ಟವಾಗಿತ್ತು. ಕಾರ್ಟೂನ್ ಗೆ ಸಂಬಂಧಿಸಿದ ಯಾವುದೇ ಕೆಲಸ ಅವರಿಗೆ ಸಿಗ್ತಿರಲಿಲ್ಲ. ಹಾಗಾಗಿ ಅವರು ಕಾಫಿ ಶಾಪ್ ಶುರು ಮಾಡಿದ್ರು. ಈಗ ಶ್ಯಾಮ್ ಪ್ರಸಾದ್ ಕಾಫಿ ಶಾಪ್ ನಲ್ಲಿ ಬರೀ ಕಾಫಿ ಮಾತ್ರ ಸಿಗೋದಿಲ್ಲ. ಕಾರ್ಟೂನ್ ಹಾಗೂ ಸ್ಯ್ನಾಕ್ಸ್ ಕೂಡ ಖರೀದಿ ಮಾಡ್ತಾರೆ. ಕಾಫಿ ಶಾಪ್ ಗೆ ಬಂದ ಗ್ರಾಹಕರು, ಶ್ಯಾಮ್ ಪ್ರಸಾದ್ ಡೇ ಬಿಡಿಸಿದ ಕಾರ್ಟೂನ್ ಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ತಾರೆ. ಶ್ಯಾಪ್ ಪ್ರಸಾದ್ ಕಾಫಿ ಶಾಪ್ ನಲ್ಲಿ ಸಿಗುವ ಕಾಫಿ ತುಂಬಾ ರುಚಿಯಾಗಿರುತ್ತೆ ಎನ್ನುತ್ತಾರೆ ಗ್ರಾಹಕರು. ಶ್ಯಾಮಾ ಅವರ ಕಾರ್ಟೂನ್‌ಗಳು ಕೋಲ್ಕತ್ತಾದ ರೋಮಾಂಚಕ ಕಥೆಯನ್ನು ಹೇಳುತ್ತವೆ.

Latest Videos
Follow Us:
Download App:
  • android
  • ios