Asianet Suvarna News Asianet Suvarna News

Karnataka Budget 2023-24: ರಾಜ್ಯದ ಸಾಲದ ಮೊತ್ತ 5,64,896 ಕೋಟಿ ರೂ.ಗೆ ಏರಿಕೆ: ಅಧಮ ಸರ್ಕಾರವೆಂದ ಸಿದ್ದರಾಮಯ್ಯ ಟೀಕೆ

ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿ ಸರ್ಕಾರ  2,54,760 ಕೋಟಿ ಸಾಲ ಮಾಡಿದೆ. ಸಾಲದ ಮೊತ್ತ 5,64,896 ಕೋಟಿ ರೂ. ತಲುಪಿದ್ದು, ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಲಾಗಿದೆ.

Karnataka State debt rises to Rs 564896 crore Siddaramaiah called bad government sat
Author
First Published Feb 17, 2023, 2:37 PM IST

ಬೆಂಗಳೂರು (ಫೆ.17): ರಾಜ್ಯದ ಮುಖ್ಯಮಂತ್ರಿ ಹಣಕಾಸು ಮಂತ್ರಿ ಕೂಡ ಆಗಿದ್ದು, 2023-24 ನೇ ಆರ್ಥಿಕ ವರ್ಷಕ್ಕೆ 3,09,187 ಕೋಟಿ ರೂ. ಗಾತ್ರದ ಮುಂಗಡ ಪತ್ರ ಮಂಡಿಸಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿ ಸರ್ಕಾರ  2,54,760 ಕೋಟಿ ಸಾಲ ಮಾಡಿದೆ. ಸಾಲದ ಮೊತ್ತ 5,64,896 ಕೋಟಿ ರೂ. ತಲುಪಿದ್ದು, ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಲಾಗಿದೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಆಯವ್ಯಯ ಬಿಜೆಪಿ ಸರ್ಕಾರದ ಚುನಾವಣಾ ಬಜೆಟ್ ಆಗಿದೆ. ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಯುತ್ತದೆ. ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್ ಕೂಡ ಆಗಿದೆ. ಬಜೆಟ್ ಗಾತ್ರ 3,09,187 ಕೋಟಿ ರೂ. ಗಾತ್ರದ್ದಾಗಿದೆ.  ಕಳೆದ ಬಜೆಟ್ ನಲ್ಲಿ 206 ಕಾರ್ಯಕ್ರಮ ಘೋಷಣೆ ಮಾಡಿದ್ದರು. ಅದರಲ್ಲಿ 56 ಕಾರ್ಯಕ್ರಮಗಳನ್ನ ಅನುಷ್ಠಾನ ಮಾಡಿಲ್ಲ. ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ 600 ಭರವಸೆ ನೀಡಿದ್ದರು. ಅದರಲ್ಲಿ ಶೇ.90 ಭರವಸೆ ಈಡೇರಿಸಿಲ್ಲ ಎಂದು ಟೀಕೆ ಮಾಡಿದರು.

Women in Karnataka Budget 2023-24 : ಮಹಿಳೆಯರಿಗೆ ಬಂಪರ್‌ ಗಿಫ್ಟ್: ಮಹಿಳೆ- ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ಪಾಸ್

ಬಿಜೆಪಿಯದ್ದು ಅಧಮ ಸರ್ಕಾರ: ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಾನು ಕೊನೆ ಬಜೆಟ್ ಮಂಡಿಸಿದಾಗ ಐದು ವರ್ಷ ಏನೇನು ಮಾಡಿದ್ದೆ ಎಂದು ಹೇಳಿದ್ದೆನು. ಆದರೆ, ಇವರು ಏನು ಮಾಡಿದ್ದಾರೆ ಎಂದು ಹೇಳಲೇ ಇಲ್ಲ. ಆಡದಯೇ ಮಾಡುವವನು ರೂಢಿಯೊಳು ಉತ್ತಮನು, ಆಡಿ ಮಾಡುವವರು ಮದ್ಯಮನು, ತಾನು ಆಡಿಯೂ ಮಾಡದವನು ಅಧಮನು ಎಂದು ಸರ್ವಜ್ಞ ಹೇಳಿದ್ದಾರೆ. ಈ ಮಾತು ಈ ಸರ್ಕಾರಕ್ಕೆ ಅನ್ವಯ ಆಗತ್ತದೆ. ಜನರಿಗೆ ಸುಳ್ಳಿನ ಭರವಸೆ ನೀಡಿ ಕನಸಿನ ಲೋಕದಲ್ಲಿ ತೇಲಾಡಿಸಿದ್ದಾರೆ. 

ನಾಲ್ಕು ವರ್ಷದಲ್ಲಿ 2.47 ಲಕ್ಷ ಕೋಟಿ ರೂ. ಸಾಲ: ರಾಜ್ಯದ ಈವರೆಗಿನ ಒಟ್ಟು ಸಾಲ 5,64,896 ಕೋಟಿ ಆಗತ್ತದೆ ಎಂದು ಸಿಎಂ ಹೇಳಿದ್ದಾರೆ. ನಾನು ಅಧಿಕಾರದಿಂದ ಇಳಿದಾದ 2,47,000 ಕೋಟಿ ರೂ. ಸಾಲ ಇತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ  41,914  ಕೋಟಿ ರೂಪಾಯಿ ಸಾಲ ಮಾಡಲಾಗಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರದ ನಂತರದ ಅವಧಿಯಿಂದ ಈವರೆಗೆ 3,22,000 ಕೋಟಿ ಸಾಲ ಹೆಚ್ಚಾಗಿದೆ. ನಾಲ್ಕು ವರ್ಷದಲ್ಲಿ 2,54,760 ಕೋಟಿ ಬಿಜೆಪಿ ಸರ್ಕಾರ ಸಾಲ ಮಾಡಿದೆ. ನಾವು ಐದು ವರ್ಷದ ಆಡಳಿತ ಅವಧಿಯಲ್ಲಿ ಕೇವಲ 1,16,512 ಕೋಟಿ ಸಾಲ ಮಾಡದ್ದೆವು. ಆದರೆ, ಇವರು ಕೇವಲ ನಾಲ್ಕು ವರ್ಷಕ್ಕೆ 2,54,760 ಕೋಟಿ ಸಾಲ ಮಾಡಿದ್ದಾರೆ. ಇವ್ರ ರಾಜ್ಯವನ್ನ ಸಾಲದ ಸುಳಿಗೆ ಸಿಲುಕಿಸಿದ್ದಾರೆ. ವಾರ್ಷಿಕ 34 ಸಾವಿರ ಕೋಟಿ ಬಡ್ಡಿ ಕಟ್ಟಬೇಕಾಗುತ್ತದೆ. ಯದ್ವಾ ತದ್ವಾ ಸಾಲ ಮಾಡಿ ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿದ್ದಾರೆ. 

Karnataka budget 2023-24: ನೀರಾವರಿಗೆ 11,236 ಕೋಟಿ ಕೊಡುಗೆ: 38 ಯೋಜನೆಗಳಿಗೆ ಅನುಮೋದನೆ

ಮುಂದಿನ ವರ್ಷಕ್ಕೆ 77,750 ಸಾಲ ಮಾಡುವ ಗುರಿ: ಕೊಟ್ಟ ಭರವಸೆ ಈಡೇರಿಸಿಲ್ಲ. ಸಾಲ ಹೆಚ್ಚು ಮಾಡಿದ್ದಾರೆ. ಹೆಚ್ಚು ಬಡ್ಡಿ ಕಟ್ಡಿದ್ದರೆ ಅಭಿವೃದ್ಧಿ ಆಗುವುದಿಲ್ಲ. 77,750 ಕೋಟಿ ರೂ. ಮುಂದಿನ ವರ್ಷ ಸಾಲ ಮಾಡುತ್ತೇವೆ ಅಂತ ಹೇಳಿದ್ದಾರೆ. ಸಾಲದ ಪ್ರಮಾಣ ಶೇ.95 ಹೆಚ್ಚಳ ಆಗತ್ತದೆ. ಹೀಗಿರುವಾಗ ರಾಜ್ಯದ ಅಭಿವೃದ್ಧಿ ಹೇಗಾಗುತ್ತದೆ. ಮಕ್ಕಳನ್ನ ಸಾಕುವ ಜವಾಬ್ದಾರಿ ಇಲ್ಲದೇ ಇದ್ದರೂ, ಎಷ್ಟು ಮಕ್ಕಳಾದ್ರೂ ಆಗಲೀ ಎಂಬಂತಿದೆ ಈ ಬಜೆಟ್. ನಮಗೆ ಸುಮಾರು ಕರ್ನಾಟಕದಿಂದ 4,75, 000 ಕೋಟಿ ತೆರಿಗೆ ವಸೂಲಿ ಆಗುತ್ತದೆ. ನಮಗೆ ಕೇಂದ್ರದಿಂದ ಈ ವರ್ಷ 34,596 ಅನುದಾನ ಬರಬಹುದು ಅಂತಿದ್ದಾರೆ. ಮುಂದಿವ ವರ್ಷ 37,512 ಕೋಟಿ ಅಂತಿದ್ದಾರೆ. ಕೇಂದ್ರ ಸರ್ಕಾರದ ಪರಿಷ್ಕೃತ ಮಾಹಿತಿ ಪ್ರಕಾರ ಕಡಿಮೆ ಅನುದಾನ ನೀಡಲಾಗುತ್ತಿದೆ ಎಂದರು.

Follow Us:
Download App:
  • android
  • ios