Asianet Suvarna News Asianet Suvarna News

ಆಸಕ್ತಿಕರವಾಗಿದೆ 107 ವರ್ಷದಿಂದ ಮಾರ್ಕೆಟ್‌ನಲ್ಲಿರುವ ಸೋಪ್ ಇತಿಹಾಸ

ಶ್ರೀಗಂಧ, ಅರಿಶಿನ, ಗುಲಾಬಿ, ಅಲೋವೇರಾ ಹೀಗೆ ನಾನಾ ಬಗೆಯ ಸೋಪುಗಳನ್ನು ನಾವೀಗ ಬಳಸ್ತಿದ್ದೇವೆ. ಆದ್ರೆ ನಮ್ಮ ದೇಶಕ್ಕೆ ಮೊದಲು ಬಂದ ಸೋಪ್ ಯಾವುದು ಅಂತಾ ನಿಮಗೆ ಗೊತ್ತಾ? ಆ ಸೋಪಿನ ಇತಿಹಾಸ ಇಲ್ಲಿದೆ.
 

Karnataka Mysore Sandal Soap 107 years Success Story roo
Author
First Published Aug 20, 2023, 5:39 PM IST

ಈಗ ಮಾರುಕಟ್ಟೆಯಲ್ಲಿ ಹತ್ತಿಪ್ಪತ್ತು ಬ್ರ್ಯಾಂಡ್ ನ ಸೋಪುಗಳನ್ನು ನಾವು ನೋಡ್ಬಹುದು. ಒಂದೊಂದು ಸೋಪನ್ನು ಒಂದೊಂದಕ್ಕೆ ಬಳಸೋದಿದೆ. ಹಿಂದೆ ಕಾಲ ಹೀಗಿರಲಿಲ್ಲ. ಆರಂಭದಲ್ಲಿ ಜನರಿಗೆ ಸೋಪಿನ ಪರಿಚಯವೇ ಇರಲಿಲ್ಲ.  ಸ್ನಾನಕ್ಕೆ ಮುಲ್ತಾನಿ ಮಿಟ್ಟಿ, ಕಡಲೆ ಹಿಟ್ಟು ಸೇರಿದಂತೆ ನಿಸರ್ಗದಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಸ್ನಾನ ಮಾಡ್ತಿದ್ದರು. ಆ ಕಾಲದಲ್ಲಿ ಸೋಪು ಕಂಡು ಹಿಡಿಯೋದು ಸುಲಭವಾಗಿರಲಿಲ್ಲ. ಆದ್ರೆ ಆಗ ಸಾಧನೆ ಮಾಡಿ, ಈಗ್ಲೂ ತನ್ನ ಬ್ರ್ಯಾಂಡ್ ಉಳಿಸಿಕೊಂಡ ಸೋಪೊಂದಿದೆ. ಕಳೆದ 107 ವರ್ಷಗಳಿಂದ ಜನರ ಆಯ್ಕೆಯಾಗಿ ಉಳಿದಿರುವ ದೇಶದ ಮೊದಲ ಸಾಬೂನಿನ ಕಥೆಯನ್ನು ನಾವು ಹೇಳ್ತೇವೆ.
 
ನಾವು ಹೇಳ ಹೊರಟಿರೋದು ಮತ್ತ್ಯಾವ ಸೋಪು ಅಲ್ಲ ನಮ್ಮ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ (Mysore Sandal Soap). ಈ ಸೋಪು ಮಾರುಕಟ್ಟೆಯಲ್ಲಿ ನೂರು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ರಾಜ (King) ನಿಂದ ಪ್ರಾರಂಭವಾದ ಈ ಸೋಪು  ನಂತ್ರ ಸರ್ಕಾರದ ಅಧೀನಕ್ಕೆ ಹೋಯ್ತು. ಗುಲಾಮಗಿರಿ ಹಾಗೂ ಸ್ವತಂತ್ರ ಹೋರಾಟವನ್ನು ಕಂಡ ಮೈಸೂರು ಸ್ಯಾಂಡಲ್ ಸೋಪುನ್ನು ಪ್ರಸ್ತುತ  ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ಸ್ ಲಿಮಿಟೆಡ್ ತಯಾರಿಸಿ ಮಾರಾಟ ಮಾಡ್ತಿದೆ.

Instagram ನಲ್ಲಿ ಆನ್‌ಲೈನ್‌ ಸ್ಟೇಟಸ್‌ ಹೈಡ್‌ ಮಾಡೋದು ಹೇಗೆ ನೋಡಿ..

 ಮೈಸೂರು ಸ್ಯಾಂಡಲ್ ಸೋಪ್ ಆರಂಭವಾಗಿದ್ದು ಹೇಗೆ? : ಮೈಸೂರು ರಾಜರು ಈ ಸೋಪನ್ನು ಆರಂಭಿಸಿದ್ರು. ಮೈಸೂರಿನ ಶ್ರೀಗಂಧಕ್ಕೆ ಆಗ ಬಹುಬೇಡಿಕೆ ಇತ್ತು. ಅದನ್ನು ಜರ್ಮನಿ, ಫ್ರಾನ್ಸ್ ಸೇರಿದಂತೆ ಯುರೋಪ್ ನ ಹಲವು ದೇಶಗಳಿಗೆ ಕಳುಹಿಸಲಾಗುತ್ತದೆ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಇದ್ದ ಕಾಲವದು. ಮೈಸೂರನ್ನು ನಾಲ್ವಡಿ ಕೃಷ್ಣರಾಜ ಒಡೆಯರು ಆಳುತ್ತಿದ್ದರು. ಮೊದಲ ಮಹಾಯುದ್ಧ ಶುರುವಾದ ನಂತ್ರ ಶ್ರೀಗಂಧದ ರಫ್ತು ಸ್ಥಗಿತಗೊಂಡಿತು. ರಫ್ತು ಸ್ಥಗಿತದಿಂದಾಗಿ ಶ್ರೀಗಂಧದ ಮರಗಳ ಸಂಕ್ಯೆ ಹೆಚ್ಚಾಯ್ತು. ರಾಜರು, ದಿವಾನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರಿಗೆ ಪರಿಹಾರ ಹುಡುಕಲು ಕೇಳಿದ್ದರು. ನಿಮಗೆ ತಿಳಿದಂತೆ ವಿಶ್ವೇಶ್ವರಯ್ಯನವರು ಖ್ಯಾತ ಇಂಜಿನಿಯರ್, ಆಡಳಿತಗಾರ ಮತ್ತು ರಾಜಕಾರಣಿ. 1912 ರಿಂದ 1918 ರವರೆಗೆ ಅವರು ಮೈಸೂರು ಸಂಸ್ಥಾನದ ದಿವಾನರಾಗಿದ್ದರು.

ನೀವು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸೋ ಮುನ್ನ ಈ 6 ನಕಲಿ ವೆಬ್‌ಸೈಟ್‌ಗಳ ಬಗ್ಗೆ ಇರಲಿ ಎಚ್ಚರ..!

ರಾಜನ ಆದೇಶದ ಮೇರೆಗೆ ವಿಶ್ವೇಶ್ವರಯ್ಯನವರು ಶ್ರೀಗಂಧದ ಎಣ್ಣೆ ತೆಗೆಯಲು ನಿರ್ಧರಿಸಿದರು. ಇದಕ್ಕಾಗಿ ಇಟಲಿಯಿಂದ ಯಂತ್ರ ತರಿಸಲಾಯ್ತು. ಮೈಸೂರಿನಲ್ಲಿಯೇ ಶ್ರೀಗಂಧದಿಂದ ಎಣ್ಣೆ ತೆಗೆಯುವ ಕೆಲಸ ಆರಂಭವಾಗಿದೆ. ತೈಲದ ನಂತರ ಸಾಬೂನು ಮಾಡುವ ಮಾರ್ಗವನ್ನು ಹುಡುಕಲಾಯ್ತು. ಫ್ರಾನ್ಸ್ ನಿಂದ ಬಂದಿದ್ದ ಇಬ್ಬರು ಅತಿಥಿಗಳು ಶ್ರೀಗಂಧದ ಮರದಿಂದ ಮಾಡಿದ ಸೋಪನ್ನು ರಾಜನಿಗೆ ತೋರಿಸಿದ್ರು. ಇದ್ರಿಂದ ಪ್ರಭಾವಿತರಾದ ರಾಜರು, ವಿಶ್ವೇಶ್ವರಯ್ಯನವರಿಗೆ ಸೂಚಿಸಿದರು. ಕೈಗಾರಿಕಾ ರಸಾಯನಶಾಸ್ತ್ರಜ್ಞ ಎಸ್.ಜಿ.ಶಾಸ್ತ್ರಿ ಲಂಡನ್‌ಗೆ ತೆರಳಿ ತಂತ್ರವನ್ನು ಕಲಿತು ಭಾರತಕ್ಕೆ ವಾಪಸ್ ಬಂದ್ಮೇಲೆ 1918 ರಲ್ಲಿ ಶ್ರೀಗಂಧದ ಎಣ್ಣೆಯಿಂದ ದೇಶದ ಮೊದಲ ಸ್ವದೇಶಿ ಸಾಬೂನು ಸಿದ್ಧವಾಯ್ತು. ಈ ಸೋಪನ್ನು ಮೊದಲು ಮಹಾರಾಜರು ಬಳಕೆ ಮಾಡ್ತಿದ್ದರು. ನಂತ್ರ ಸಾರ್ವಜನಿಕರಿಗೆ ನೀಡಲಾಯ್ತು. 

ಮೈಸೂರು ಸ್ಯಾಂಡಲ್ ಸೋಪ್ ಅನ್ನು 1980 ರವರೆಗೆ ಮೈಸೂರು ಮಹಾರಾಜರು ತಯಾರಿಸಿದ್ದರು.1982 ರಲ್ಲಿ ಅದನ್ನು ಸರ್ಕಾರದೊಂದಿಗೆ ವಿಲೀನಗೊಳಿಸಲಾಯಿತು. ಅಂದಿನಿಂದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ಲಿಮಿಟೆಡ್ ಈ ಸಾಬೂನನ್ನು ತಯಾರಿಸುತ್ತಿದೆ. ಅನೇಕ ಪ್ಲೇವರ್ ನಲ್ಲಿ ಈಗ ಸೋಪು ಲಭ್ಯವಿದೆ. ಸ್ಯಾಂಡಲ್ ಸೋಪಿನ ಜಾಹೀರಾತು ಜನರನ್ನು ಸೆಳೆಯುತ್ತಿದೆ. ಆದ್ರೆ ಬೇರೆ ಸೋಪುಗಳಿಗೆ ಹೋಲಿಕೆ ಮಾಡಿದ್ರೆ ಈ ಸೋಪಿನ ಬೆಲೆ ಹೆಚ್ಚಿರುವ ಕಾರಣ ಅನೇಕರು ಇದನ್ನು ಖರೀದಿ ಮಾಡಲು ಹಿಂದೇಟು ಹಾಕ್ತಿದ್ದಾರೆ ಎಂಬ ಸಮೀಕ್ಷೆಯೂ ಇದೆ. 2016ರಲ್ಲಿ ಮೈಸೂರ್ ಸ್ಯಾಂಡಲ್ ಸೋಪ್ 100 ವರ್ಷ ಪೂರೈಸಿದೆ. 
 

Follow Us:
Download App:
  • android
  • ios