ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 15ನೇ ಬಜೆಟ್ ಮಂಡಿಸಿದ್ದಾರೆ. ಈ ಕುರಿತು ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಬಿಜೆಪಿ ನಾಯಕರು ಈ ಬಜೆಟ್‌ನಲ್ಲಿ ಏನಿಲ್ಲ , ಏನಿಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ ಅಲ್ಪಸಂಖ್ಯಾತರ ಒಲೈಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದ್ದಾರೆ. 

ಬೆಂಗಳೂರು(ಫೆ.16) ಸಿದ್ದರಾಮಯ್ಯ ಬಜೆಟ್ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಕರ್ನಾಟಕದ ಮುಜುರಾಯಿ ಇಲಾಖೆಯಿಂದ ಸಂಗ್ರಹವಾಗುವ ಸರಿಸುಮಾರು 500 ಕೋಟಿ ರೂಪಾಯಿ ಆದಾಯದಲ್ಲಿ 330 ಕೋಟಿ ರೂಪಾಯಿ ಹಣವನ್ನು ಹಜ್ ಭವನ ನಿರ್ಮಾಣ, ವಕ್ಫ್ ಬೋರ್ಡ್, ಕ್ರಿಶ್ಚಿಯನ್ ಸಮುದಾಯಕ್ಕೆ ಅನುದಾನ ನೀಡಲಾಗಿದೆ ಎಂಬ ಆರೋಪಗಳು ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಹಿಂದೂ ದೇವಾಲಯಗಳನ್ನು ಸರ್ಕಾರದಿಂದ ಮುಕ್ತಿಗೊಳಿಸುವ ಹೋರಾಟ ಮತ್ತೆ ಮುನ್ನಲೆಗೆ ಬಂದಿದೆ. 

ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಅಬಿವೃದ್ಧಿ ನಿಗದಮಕ್ಕೆ 393 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಇದರಲ್ಲಿ ಪ್ರಮುಖವಾಗಿ ವಕ್ಫ್ ಆಸ್ತಿಗಳ ರಕ್ಷಣೆಗಾಗಿ 100 ಕೋಟಿ ರೂಪಾಯಿ ಅನುದಾನವನ್ನು ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ನೀಡಿದ್ದಾರೆ. ಇನ್ನು ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಇತ್ತ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಬಂಪರ್; ವಕ್ಫ್‌ಗೆ 100 ಕೋಟಿ, ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ರೂ!

ಅಲ್ಪಸಂಖ್ಯಾತ ಮಹಿಳಾ ಸ್ವ ಸಹಾಯ ಗುಂಪುಗಳಿಗೆ 10 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಸರಿಸುಮಾರು ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ 330 ಕೋಟಿ ರೂಪಾಯಿ ಅನುದಾನವನ್ನು ಬಜೆಟ್‌ನಲ್ಲಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವಸ್ಥಾನಗಳಿಂದ ಬರುವ ಆದಾಯದ ಹಣದಲ್ಲಿ ಬಹುಪಾಲವನ್ನು ಹಿಂದೂಯೇತರರ ಅಭಿವೃದ್ಧಿಗೆ ಮೀಸಲಿಡಲಾಗಿದೆ ಅನ್ನೋ ಆರೋಪವನ್ನು ಬಿಜೆಪಿಯ ಕೆಲ ನಾಯಕರು ಮಾಡಿದ್ದಾರೆ.

Scroll to load tweet…

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಸಿದ್ದರಾಮಯ್ಯ ಬಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ದೇವಾಲಯಗಳಿಂದ ಬಂದ ಹಣವನ್ನು ಹಿಂದೂಯೇತರ ಧರ್ಮಗಳ ಧಾರ್ಮಿಕ ಸಂಸ್ಥೆಗಳಿಗೆ ಧನಸಹಾಯಕ್ಕೆ ನೀಡುವುದು ಸಿದ್ದರಾಮಯ್ಯನಂತಹ ಜಾತ್ಯಾತೀತ ನಾಯಕರ ಎಸ್ಒಪಿಯಾಗಿದೆ. ಸಿದ್ದರಾಮಯ್ಯನವರ ಸೆಕ್ಯುಲರಿಸಂ ಕೇವಲ ಹಿಂದೂವನ್ನು ಹೊಡೆಯುವ ಕೋಲು ಮಾತ್ರವಲ್ಲ, ಹಿಂದೂಗಳ ಹಣದಲ್ಲಿ ಇತರರನ್ನು ಆರ್ಥಿಕವಾಗಿ ಶ್ರೀಮಂತಗೊಳಿಸುವ ಸಾಧನವೂ ಆಗಿದೆ ಎಂದು ತೇಜಸ್ವಿ ಸೂರ್ಯ ಆಕ್ರೋಶ ಹೊರಹಾಕಿದ್ದಾರೆ.

Scroll to load tweet…

ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ಅಡಿಯಲ್ಲಿ ಎ ಹಾಗೂ ಬಿ ಕೆಟಗರಿಯಲ್ಲಿ ಸರಿಸುಮಾರು 400 ಹಿಂದೂ ದೇವಸ್ಥಾನಗಳಿವೆ. 2021-22ರ ಆಡಿಟ್ ವರದಿಯಂತೆ ಈ 400 ದೇವಸ್ಥಾನಗಳಿಂದ ಸರ್ಕಾರ 450 ಕೋಟಿ ರೂಪಾಯಿ ಆದಾಯ ಪಡೆಯುತ್ತಿದೆ. ಈ ಪೈಕಿ ದಕ್ಷಿಣ ಕನ್ನಡದಲ್ಲಿರುವ ದೇವಸ್ಥಾನಗಳಿಂದ ಅತೀ ಹೆಚ್ಚು ಹಣ ಸರ್ಕಾರದ ಬೊಕ್ಕಸ ಸೇರುತ್ತಿದೆ. ದಕ್ಷಿಣ ಕನ್ನಡದಲ್ಲಿರುವ 80 ಹಿಂದೂ ದೇವಸ್ಥಾನಗಳಿಂದ ವಾರ್ಷಿಕ 155 ಕೋಟಿ ರೂಪಾಯಿ ಆದಾಯ, ಉಡುಪಿಯಲ್ಲಿರುವ 43 ದೇವಸ್ಥಾನಗಳಿಂದ 75.7 ಕೋಟಿ ರೂಪಾಯಿ, ಬೆಂಗಳೂರು ನಗರದ 37 ದೇವಸ್ಥಾನದಿಂದ 16.6 ಕೋಟಿ ರೂಪಾಯಿ, ಉತ್ತರ ಕನ್ನಡದ 16 ದೇವಸ್ಥಾನಗಳಿಂದ 6 ಕೋಟಿ ರೂಪಾಯಿ, ತುಮಕೂರಿನ 16 ದೇವಸ್ಥಾನಗಳಿಂದ 37.1 ಕೋಟಿ ರೂಪಾಯಿ ಆದಾಯ ಸರ್ಕಾರದ ಬೊಕ್ಕಸ ಸೇರುತ್ತಿದೆ. 

ಬಸವಾದಿ ಶರಣರ ಕಾಯಕ, ಡಾ.ರಾಜ್ ಹಾಡು ಸ್ಮರಿಸಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ!

450 ಕೋಟಿ ರೂಪಾಯಿ ಆದಾಯದಲ್ಲಿ 330 ಕೋಟಿ ರೂಪಾಯಿ ಹಜ್ ಭವನ, ವಕ್ಫ್ ಆಸ್ತಿ ರಕ್ಷಣೆ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ನೀಡಿದ್ದಾರೆ ಅನ್ನೋ ಆರೋಪಗಳೇ ಈ ಆಕ್ರೋಶಕ್ಕೆ ಕಾರಣ. ಹಿಂದೂ ದೇವಸ್ಥಾನಗಳನ್ನು ಸರ್ಕಾರದಿಂದ ಮುಕ್ತಗೊಳಿಸಿ, ಇಲ್ಲದಿದ್ದರೆ ಎಲ್ಲಾ ಸಮುದಾಯದ ಧಾರ್ಮಿಕ ಕೇಂದ್ರಗಳನ್ನು ಸರ್ಕಾರದ ವ್ಯಾಪ್ತಿಗೆ ತನ್ನಿ ಎಂಬ ಆಗ್ರಹ ಕೇಳಿಬರುತ್ತಿದೆ.