ಅತೀ ಹೆಚ್ಚು ನೆಟ್‌ವರ್ತ್ ಹೊಂದಿದ ವ್ಯಕ್ತಿಗಳ ವಿಶ್ವದ ಅತ್ಯಂತ ದುಬಾರಿ ನಗರ ಪಟ್ಟಿ ಪ್ರಕಟಗೊಂಡಿದೆ. ಈ ಪಟ್ಟಿಯಲ್ಲಿ ಸಿಂಗಾಪುರ ಮೊದಲ ಸ್ಥಾನ ಪಡೆದಿದೆ. ಭಾರತದ ಯಾವನಗರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ನವದೆಹಲಿ (ಜು.15) ನಗರ ಜೀವನ ಬಲು ದುಬಾರಿ ಅನ್ನೋದು ಹೊಸದೇನಲ್ಲ. ಬೆಂಗಳೂರು ಸೇರಿದಂತೆ ಬಹುತೇಕ ನಗರದಲ್ಲಿ ಜೀವನ, ಖರ್ಚು ವೆಚ್ಚಗಳು ಹೆಚ್ಚು. ಇದೀಗ ವಿಶ್ವದಲ್ಲೇ ಅತೀ ದುಬಾರಿ ನಗರ ಯಾವುದು? ಅತೀ ಹೆಚ್ಚು ಸಂಪತ್ತು ಹೊಂದಿರುವ ವ್ಯಕ್ತಿಗಳ ಅತೀ ದುಬಾರಿ ನಗರ ಯಾವುದು ಅನ್ನೋದು ಸ್ವಿಸ್ ಪ್ರೈವೇಟ್ ಬ್ಯಾಂಕ್ ಜ್ಯೂಲಿಯಸ್ ಬೇರ್ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ವಿಶೇಷ ಅಂದರೆ ಸಿಂಗಾಪೂರ ಸತತ 3ನೇ ಬಾರಿಗ ಈ ದುಬಾರಿ ನಗರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಜಾಗತಿಕವಾಗಿ ಯುದ್ಧ, ಆರ್ಥಿಕ ಸಂಕಷ್ಟ, ದ್ವಿಪಕ್ಷೀಯ ಸಮಸ್ಯೆಗಳ ನಡುವೆ ಸಿಂಗಾಪೂರದಲ್ಲಿ ಸ್ಥಿರ ಸರ್ಕಾರ, ಸುರಕ್ಷತೆ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರ ಪರಿಣಾಮ ಮೂರನೇ ಬಾರಿಗೆ ಸಿಂಗೂಪಾರು ಅತೀ ಹೆಚ್ಚು ಸಂಪತ್ತು ಹೊಂದಿದ ವ್ಯಕ್ತಿಗಳ ವಿಶ್ವದ ಅತ್ಯಂತ ದುಬಾರಿ ನಗರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಭಾರತದ ಯಾವ ನಗರಕ್ಕಿದೆ ಸ್ಥಾನ?

ವಿಶ್ವದ ಅತ್ಯಂತು ದುಬಾರಿ ನಗರ, ಅಂದರೆ ಅತೀ ಹೆಚ್ಚು ಸಂಪತ್ತು ಹೊಂದಿದ ವ್ಯಕ್ತಿಗಳು ನೆಲೆಸಿರುವ ಹಾಗೂ ಅತೀ ಹೆಚ್ಚು ಖರ್ಚು ವೆಚ್ಚ ಮಾಡುತ್ತಿರುವ ನಗರಗಳ ಪೈಕಿ ಸಿಂಗಾಪುರ ಮೊದಲ ಸ್ಥಾನದಲ್ಲಿದೆ. ಈ ಟಾಪ್ 20 ಪಟ್ಟಿಯಲ್ಲಿ ಭಾರತದ ಏಕೈಕ ನಗರ ಸ್ಥಾನ ಪಡೆದಿದೆ. ಅದು ಮುಂಬೈ ಮಹಾನಗರ. ಮುಂಬೈ 20ನೇ ಸ್ಥಾನ ಪಡೆದಿದೆ. ಭಾರತದ ನಗರಗಳಿಗೆ ಹೋಲಿಸಿದೆರೆ ಅತೀ ದುಬಾರಿ ನಗರವಾಗಿದೆ. ಇನ್ನು ಬೆಂಗಳೂರು ಸೇರಿದಂತೆ ಇತರ ನಗರಗಳು ನಂತರದ ಸ್ಥಾನದಲ್ಲಿದೆ.

ವಿಶ್ವದ ಅತೀ ದುಬಾರಿ ನಗರ ಪಟ್ಟಿ 2025

1) ಸಿಂಗಾಪುರ

2) ಲಂಡನ್

3) ಹಾಂಕಾಂಗ್

4) ಮೊನಾಕೋ

5) ಜ್ಯೂರಿಚ್

6) ಶಾಂಘೈ

7) ದುಬೈ

8 ) ನ್ಯೂಯಾರ್ಕ್

9) ಪ್ಯಾರಿಸ್

10 ) ಮಿಲನ್

ಅಮೆರಿಕ ವಿಶ್ವದ ದೊಡ್ಡಣ್ಣ ಎಂದು ಗುರುತಿಸಿಕೊಂಡರೂ ದುಬಾರಿ ನಗರಗಳ ಪೈಕಿ ನ್ಯೂಯಾರ್ಕ್ 8ನೇ ಸ್ಥಾನ ಪಡೆದುಕೊಂಡಿದೆ. ಟಾಪ್ 10 ಪಟ್ಟಿಯಲ್ಲಿ ಅಮೆರಿಕದ ಏಕೈಕ ನಗರ ಸ್ಥಾನ ಪಡೆದುಕೊಂಡಿದೆ. ವಾಶಿಂಗ್ಟನ್, ಕ್ಯಾಲಿಫೋರ್ನಿಯಾ ಸೇರಿದಂತೆ ಅತ್ಯಂತ ಮುಂದುವರಿದ ಹಾಗೂ ಅತೀ ಹೆಚ್ಚು ಶ್ರೀಮಂತರನ್ನು ಹೊಂದಿದ ನಗರಗಳಿದ್ದರೂ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.

2ನೇ ಸ್ಥಾನಕ್ಕೇರಿದ ಲಂಡನ್

ಲಂಡನ್ ನಗರ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಮೂರನೇ ಸ್ಥಾನದಲ್ಲಿದ್ದ ಲಂಡನ್ ಆರ್ಥಿಕತೆಯಲ್ಲಿ ಅಭಿವೃದ್ಧಿಯಾಗುತ್ತಿದೆ. ಇದರ ಪರಿಣಾಮ ಲಂಡನ್ ಅತೀ ದುಬಾರಿ ನಗರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. ಆದರೆ 2ನೇ ಸ್ಥಾನದಲ್ಲಿದ್ದ ಹಾಂಕಾಂಗ್ 3ನೇ ಸ್ಥಾನಕ್ಕೆ ಕುಸಿದಿದೆ. ಹಾಂಕಾಂಗ್ ಕಳೆದ ಕೆಲ ವರ್ಷಗಳಲ್ಲಿ ಹಾಂಕಾಂಗ್‌ನಲ್ಲಿ ಎದುರಾದ ಆರ್ಥಿಕ ಸಂಕಷ್ಟ ಎದುರಿಸಿತ್ತು. ಪ್ರಮುಖವಾಗಿ ಕೋವಿಡ್ ಹಲವು ಅಲೆಗಳು ಅಪ್ಪಳಿಸಿ ಆರ್ಥಿಕತೆ ಮೇಲೆ ಹೊಡೆತ ನೀಡಿತ್ತು.

ಬ್ಯಾಂಕಾಕ್ ಹಾಗೂ ಟೋಕಿಯೋಗೆ ಬಡ್ತಿ

ವಿಶ್ವದ ಅತೀ ದುಬಾರಿ ನಗರ ಪಟ್ಟಿಯಲ್ಲಿ ಬ್ಯಾಂಕಾಕ್ ಹಾಗೂ ಟೋಕಿಯೋ ನಗರ ಬಡ್ತಿ ಪಡೆದಿದೆ. ಎರಡು ನಗರಗಳು ಬರೋಬ್ಬರಿ 6 ಸ್ಥಾನ ಬಡ್ತಿ ಪಡೆದು ಈ ವರ್ಷ 11 ಹಾಗೂ 17ನೇ ಸ್ಥಾನ ಪಡೆದಿದೆ.