2023ರಲ್ಲಿ ಸಿಗಲ್ಲ Johnson & Johnson ಬೇಬಿ ಪೌಡರ್; ವಿಶ್ವಾದ್ಯಂತ ಮಾರಾಟ ಸ್ಥಗಿತ ನಿರ್ಧಾರ ಪ್ರಕಟಿಸಿದ ಕಂಪನಿ
*2020ರಲ್ಲಿ ಅಮೆರಿಕ ಹಾಗೂ ಕೆನಡಾದಲ್ಲಿ ಟಾಲ್ಕ್ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಸಿದ ಜಾನ್ಸನ್ ಮತ್ತು ಜಾನ್ಸನ್
*ಜಾನ್ಸನ್ ಮತ್ತು ಜಾನ್ಸನ್ ಬೇಬಿ ಪೌಡರ್ ಸುರಕ್ಷತೆ ಪ್ರಶ್ನಿಸಿ ಅನೇಕ ದೂರುಗಳನ್ನು ದಾಖಲಿಸಿದ್ದ ಗ್ರಾಹಕರು
*ಕಂಪನಿಯ ವಿರುದ್ಧ ದಾಖಲಾಗಿತ್ತು ಸುಮಾರು 38,000 ಪ್ರಕರಣಗಳು
ನ್ಯೂ ಜೆರ್ಸಿ (ಜು.12): ಜಾನ್ಸನ್ ಮತ್ತು ಜಾನ್ಸನ್ 2023ರಲ್ಲಿ ಜಗತ್ತಿನಾದ್ಯಂತ ಟಾಲ್ಕ್ ಬೇಬಿ ಪೌಡರ್ ಮಾರಾಟವನ್ನು ನಿಲ್ಲಿಸಲಿದೆ ಎಂದು ಕಂಪನಿ ಗುರುವಾರ ತಿಳಿಸಿದೆ. ಅಮೆರಿಕದಲ್ಲಿ ಪೌಡರ್ ಮಾರಾಟವನ್ನು ನಿಲ್ಲಿಸಿದ ಎರಡು ವರ್ಷಕ್ಕೂ ಅಧಿಕ ಸಮಯದ ಬಳಿಕ ಜಾನ್ಸನ್ ಮತ್ತು ಜಾನ್ಸನ್ ಈ ನಿರ್ಧಾರ ಕೈಗೊಂಡಿದೆ. ಈ ಕಂಪನಿಯ ವಿರುದ್ಧ ಸುಮಾರು 38,000 ಪ್ರಕರಣಗಳು ದಾಖಲಾಗಿವೆ. ಇನ್ನು ಮುಂದೆ ಜೋಳದ ಗಂಜಿ ಆಧಾರಿತ ಪೌಡರ್ ಉತ್ಪಾದನೆ ಮಾಡಲಾಗುವುದು ಎಂದು ತಿಳಿಸಿರುವ ಕಂಪನಿ, ಜೋಳದ ಗಂಜಿ ಆಧಾರಿತ ಬೇಬಿ ಪೌಡರ್ ಅನ್ನು ಈಗಾಗಲೇ ಜಗತ್ತಿನಾದ್ಯಂತ ವಿವಿಧ ರಾಷ್ಟ್ರಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಬೇಬಿ ಪೌಡರ್ ನಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶಗಳು ಕಂಡುಬಂದಿವೆ ಎಂದು ಯುಎಸ್ ನಿಯಂತ್ರಕರು ಈ ಹಿಂದೆ ತಿಳಿಸಿದ್ದರು. ಬೇಬಿ ಪೌಡರ್ ಬಳಕೆಯ ಸುರಕ್ಷತೆಯ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಲಾಗಿದೆ ಎಂಬ ಕಾರಣದಿಂದ ಅಮೆರಿಕ ಹಾಗೂ ಕೆನಡದಲ್ಲಿ ಬೇಡಿಕೆ ತಗ್ಗಿತ್ತು. ಅಲ್ಲದೆ, ಇದೇ ಸಮಯದಲ್ಲಿ ಕಂಪನಿ ವಿರುದ್ಧ ಸಾವಿರಾರು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ 2020ರಲ್ಲಿ ಜಾನ್ಸನ್ ಮತ್ತು ಜಾನ್ಸನ್ ಅಮೆರಿಕ ಹಾಗೂ ಕೆನಡಾದಲ್ಲಿ ಬೇಬಿ ಪೌಡರ್ ಮಾರಾಟವನ್ನು ಸ್ಥಗಿತಗೊಳಿಸಿತ್ತು.
ಜಾನ್ಸನ್ ಮತ್ತು ಜಾನ್ಸನ್ (Johnson and Johnson) ಕಂಪನಿ ಮಾತ್ರ ತನ್ನ ಬೇಬಿ ಪೌಡರ್ (Baby Powder) ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದೆ. ದಶಕಗಳ ವೈಜ್ಞಾನಿಕ ಪರೀಕ್ಷೆಗಳು ಹಾಗೂ ನಿಯಂತ್ರಕರ ಅನುಮೋದನೆ ಟಾಲ್ಕ್ ಬೇಬಿ ಪೌಡರ್ ಸುರಕ್ಷಿತ ಹಾಗೂ ಅದರಲ್ಲಿ ಕಲ್ನಾರಿನ (asbestos) ಅಂಶಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ ಎಂದು ಕಂಪನಿ ಹೇಳಿದೆ. ಗುರುವಾರ ಉತ್ಪನ್ನ ಸ್ಥಗಿತಗೊಳಿಸಲಾಗುತ್ತಿದೆ ಎಂಬ ಘೋಷಣೆ ಸಂದರ್ಭದಲ್ಲಿ ಕೂಡ ಈ ಹೇಳಿಕೆಯನ್ನೇ ಕಂಪನಿ ಪುನರುಚ್ಚರಿಸಿದೆ ಕೂಡ.
ಅಟಲ್ ಪಿಂಚಣಿ ಯೋಜನೆ ನಿಯಮ ಬದಲಾವಣೆ;ಇವರಿಗಿಲ್ಲ ಫಲಾನುಭವಿಯಾಗೋ ಭಾಗ್ಯ
ಜಾನ್ಸನ್ ಮತ್ತು ಜಾನ್ಸನ್ ಕಂಪನಿ ದಿವಾಳಿ (bankruptcy) ಪ್ರಕರಣ ಕೂಡ ಫೈಲ್ ಮಾಡಿದೆ. ಕಂಪನಿ ವಿರುದ್ಧದ ಪ್ರಕರಣಗಳ ವಿಚಾರಣೆ ಹಾಗೂ ಸೆಟ್ಲೆಂಟ್ ಗೆ ಸಾಕಷ್ಟು ವೆಚ್ಚವಾಗಿತ್ತು. ಒಂದು ಪ್ರಕರಣದಲ್ಲಿ 22 ಮಹಿಳೆಯರಿಗೆ 2 ಬಿಲಿಯನ್ ಗಿಂತಲೂ ಹೆಚ್ಚಿನ ಪರಿಹಾರ ಪಾವತಿಸುವಂತೆ ಕೋರ್ಟ್ ಸೂಚಿಸಿತ್ತು. ಈ ಎಲ್ಲ ಅಂಶಗಳನ್ನು ಕಂಪನಿ ತಾನು ದಿವಾಳಿಯಾಗಿರುವ ಕುರಿತು ಸಲ್ಲಿಸಿರುವ ದಾಖಲೆಗಳಲ್ಲಿ ನಮೂದಿಸಿದೆ.
ಏನಿದು ಟಾಲ್ಕ್?
ಅತ್ಯಂತ ಮೃದುವಾದ ಖನಿಜವನ್ನು ಹೋ ಟಾಲ್ಕ್ (talc) ಎನ್ನುತ್ತಾರೆ. ಇದನ್ನು ಕಾಗದ, ಪ್ಲಾಸ್ಟಿಕ್ ಮತ್ತು ಔಷಧಿ ಸೇರಿದಂತೆ ಅನೇಕ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಅನೇಕ ಟಾಲ್ಕ್ಗಳು ಕಲ್ನಾರಿನ ಮಿಶ್ರಣಗಳನ್ನು ಹೊಂದಿರುತ್ತವೆ. ಇದು ಕಾನ್ಸರ್ ನಂತಹ ಮಾರಾಕ ಕಾಯಿಲೆಗಳಿಗೆ ಕಾರಣವಾಗಬಲ್ಲದು. ಅನೇಕ ಮಹಿಳೆಯರು ಜಾನ್ಸನ್ ಮತ್ತು ಜಾನ್ಸನ್ ಕಂಪನಿಯ ಟಾಲ್ಕ ಬೇಬಿ ಪೌಡರ್ ಬಳಸಿ ತಮಗೆ ಕ್ಯಾನ್ಸರ್ ಬಂದಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು.
Bank Holidays:ಬ್ಯಾಂಕ್ ಕೆಲಸವಿದ್ರೆ ಮುಂದೂಡಿ; ಇಂದಿನಿಂದ 5 ದಿನ ರಜೆ
ರಾಯ್ಟರ್ಸ್ (Reuters) ಸಂಸ್ಥೆ 2018ರಲ್ಲಿ ನಡೆಸಿದ ತನಿಖೆಯಲ್ಲಿ ಜಾನ್ಸನ್ ಮತ್ತು ಜಾನ್ಸನ್ ಕಂಪನಿಗೆ ಟಾಲ್ಕ್ (talc) ಬೇಬಿ ಪೌಡರ್ ನಲ್ಲಿ (Baby powder) ಕಲ್ನಾರು ಇರುವ ಅಂಶ ದಶಕಗಳಿಂದ ತಿಳಿದಿತ್ತು. ಕಂಪನಿಯ ಆಂತರಿಕ ದಾಖಲೆಗಳಲ್ಲಿ 1971ರಿಂದ 2000ರ ಪ್ರಾರಂಭದ ತನಕ ನಡೆದ ತನಿಖೆಯಲ್ಲಿ ಟಾಲ್ಕ್ ಬೇಬಿ ಪೌಡರ್ ನಲ್ಲಿ ಸಣ್ಣ ಪ್ರಮಾಣದಲ್ಲಿ ಕಲ್ನಾರು ಇರೋದು ಪತ್ತೆಯಾಗಿದೆ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾದ ಮೇಲೆ ಕೂಡ ಜಾನ್ಸನ್ ಮತ್ತು ಜಾನ್ಸನ್ ಕಂಪನಿ ತನ್ನ ಟಾಲ್ಕ್ ಉತ್ಪನ್ನ ಸುರಕ್ಷಿತವಾಗಿದ್ದು, ಕ್ಯಾನ್ಸರ್ ಉಂಟು ಮಾಡೋದಿಲ್ಲಎಂದೇ ವಾದಿಸಿತ್ತು.