ರಿಲಾಯನ್ಸ್ ರಿಟೇಲ್ ದಿನಸಿ ಮಳಿಗೆಯ ಬಹುನಿರೀಕ್ಷಿತ ಮೆಗಾ ಸೇಲ್ ಫೆಸ್ಟಿವಲ್| ಜಿಯೋಮಾರ್ಟ್‌ನಿಂದ “ಫುಲ್ ಪೈಸಾ ವಸೂಲ್ ಸೇಲ್ ಜನವರಿ 2021” ಆರಂಭ| ಭಾರೀ ರಿಯಾಯಿತಿ
ಬೆಂಗಳೂru(ಜ.22) ರಿಲಾಯನ್ಸ್ ರಿಟೇಲ್ ದಿನಸಿ ಮಳಿಗೆಯು ತನ್ನ ಬಹುನಿರೀಕ್ಷಿತ ಮೆಗಾ ಸೇಲ್ ಫೆಸ್ಟಿವಲ್ ಫುಲ್ ಪೈಸಾ ವಸೂಲ್ ಸೇಲ್ (ಎಫ್‌ಪಿವಿಎಸ್) ಅನ್ನು ಜನವರಿ 23 ರಿಂದ 26 ರ ವರೆಗೆ ನಡೆಸಲಿದೆ. ಕಂಪನಿಯ ಹೊಸ ಮತ್ತು ಆಕರ್ಷಕ ಡಿಜಿಟಲ್ ಪ್ಲಾಟ್‌ಫಾರಂ ಜಿಯೋಮಾರ್ಟ್ ಈ ಸೇಲ್‌ನಲ್ಲಿ ಮುಂಚೂಣಿಯಲ್ಲಿರಲಿದ್ದು, ಸ್ಮಾರ್ಟ್ ಸೂಪರ್ ಸ್ಟೋರ್‌ಗಳು, ಸ್ಮಾರ್ಟ್ ಪಾಯಿಂಟ್ ಮತ್ತು ರಿಲಾಯನ್ಸ್ ಫ್ರೆಶ್‌ನಲ್ಲೂ ಈ ಸೇಲ್ ನಡೆಯಲಿದೆ.
ಜಿಯೋಮಾರ್ಟ್, ರಿಲಾಯನ್ಸ್ ಫ್ರೆಶ್ ಮತ್ತು ರಿಲಾಯನ್ಸ್ ಸ್ಮಾರ್ಟ್ ಸ್ಟೋರ್‌ಗಳಲ್ಲಿ ದಿನಸಿ ಸಾಮಗ್ರಿಗಳು, ಪ್ಯಾಕೇಜ್ಡ್ ಆಹಾರ, ಮನೆ ಮತ್ತು ವೈಯಕ್ತಿಕ ಆರೈಕೆ ಸಾಮಗ್ರಿಗಳು, ಹಣ್ಣು ಮತ್ತು ತರಕಾರಿಗಳು, ಡೈರಿ, ಸಾಮಾನ್ಯ ಸಾಮಗ್ರಿಗಳು ಮತ್ತು ಉಡುಪಿನ ಮೇಲೆ “ಫುಲ್ ಪೈಸಾ ವಸೂಲ್ ಸೇಲ್ಸ್ 2021” ಭಾರಿ ರಿಯಾಯಿತಗಳನ್ನು ನೀಡಲಿದೆ. ಇದರ ಜೊತೆಗೆ, ಜಿಯೋಮಾರ್ಟ್‌ನಲ್ಲಿ ಶಾಪಿಂಗ್ ಮಾಡುವ ಗ್ರಾಹಕರಿಗೆ ಮನೆಗೆ ಉಚಿತವಾಗಿ ಯಾವುದೇ ಕನಿಷ್ಠ ಶಾಪಿಂಗ್ ಮಿತಿ ಇಲ್ಲದೇ ಡೆಲಿವರಿ ಮಾಡಲಾಗುತ್ತದೆ.
ಲಾಕ್‌ಡೌನ್‌ನ 58 ದಿನದಲ್ಲಿ 1.68 ಲಕ್ಷ ಕೋಟಿ ರೂ ಸಂಗ್ರಹಿಸಿ ದಾಖಲೆ ಬರೆದ ರಿಲಾಯನ್ಸ್!
ವಿಶಿಷ್ಟ ಮತ್ತು ನವೀನ ಜಾಹೀರಾತು ಕ್ಯಾಂಪೇನ್‌ಗಳಿಗೆ ಎಫ್‌ಪಿವಿಎಸ್ ಫೆಸ್ಟಿವಲ್ ಹೆಸರಾಗಿದೆ. ಈ ಹಿಂದಿನ ಆವೃತ್ತಿಯಲ್ಲಿ, ಎಫ್‌ಪಿವಿಎಸ್ ಅಂಬಾಸಿಡರ್ ಜೀನಿ ಅನ್ನು ಪರಿಚಯಿಸಲಾಗಿತ್ತು. ಗ್ರಾಹಕರಿಗೆ ಮನರಂಜನೆಯನ್ನು ಒದಗಿಸುತ್ತಲೇ ಕೊಡುಗೆಗಳನ್ನೂ ಇದು ಒದಗಿಸುತ್ತಿತ್ತು. ರಿಲಾಯನ್ಸ್ ರಿಟೇಲ್ ಪರವಾಗಿ ಜನಪ್ರಿಯ ಮಹಿಳಾ ಸೆಲೆಬ್ರಿಟಿ ರಶ್ಮಿ ದೇಸಾಯಿ ಮತ್ತು ಜೀನಿ ಇರಲಿದ್ದು, ಅವರು ಎಲ್ಲ 13 ಟಿವಿಸಿಗಳು ಮತ್ತು ಡಿಜಿಟಲ್ ಕಂಟೆಂಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬ್ರಾಂಡ್‌ನ 360 ಡಿಗ್ರಿ ಕ್ಯಾಂಪೇನ್ ಟಿವಿಸಿಗಳನ್ನು ಒಳಗೊಂಡಿರುತ್ತದೆ ಮತ್ತು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲೂ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಸಂವಹನದ ಧ್ವನಿಯು ಅತಿ ಲಘು, ಖುಷಿ ಮತ್ತು ಸ್ನೇಹಪರವಾಗಿರುತ್ತದೆ. ಜ.18 ರಿಂದ ಕ್ಯಾಂಪೇನ್ ಆರಂಭವಾಗಲಿದ್ದು, ಸೇಲ್ ಫೆಸ್ಟಿವಲ್‌ನ ಕೊನೆಯ ದಿನ ಜನವರಿ 26ರ ವರೆಗೆ ನಡೆಯಲಿದೆ.
ದಿನಸಿ ಸಾಮಗ್ರಿಗಳ ಮೇಲೆ ಹೋಲಿಸಲಾಗದ ಡೀಲ್‌ಗಳು ಮತ್ತು ಬೆಲೆಗಳನ್ನು ಫುಲ್ ಪೈಸಾ ವಸೂಲ್ ಸೇಲ್ ಹೊಂದಿದ್ದು, ಅಡುಗೆ ಮನೆಗೆ ಅಗತ್ಯವಿರುವ ಎಲ್ಲ ಸಾಮಗ್ರಿಗಳನ್ನೂ ಒಳಗೊಂಡಿದೆ. ಕೋಲ್ಡ್ ಡ್ರಿಂಕ್‌ಗಳು, ಬಿಸ್ಕಿಟ್‌ಗಳು, ಡ್ರೈ ಫ್ರೂಟ್‌ಗಳು, ಶಾಂಪೂ, ಸೋಪ್‌ಗಳು, ಮಸಾಲಾ ಮತ್ತು ಉಡುಪುಗಳು ಇತ್ಯಾದಿಯ ಮೇಲೆ ಭಾರಿ ರಿಯಾಯಿತಿಯನ್ನು ಜಿಯೋಮಾರ್ಟ್ ಪೈಸಾ ವಸೂಲ್ ಸೇಲ್ ಒದಗಿಸುತ್ತದೆ. ಸದ್ಯ ಜಿಯೋಮಾರ್ಟ್ ಭಾರತದ 200 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 22, 2021, 5:09 PM IST