ಚಾಂಪಿಯನ್ಸ್ ಟ್ರೋಫಿ, ಐಪಿಎಲ್ ಟೂರ್ನಿಗಾಗಿ ಜಿಯೋ ಇದೀಗ ಭರ್ಜರಿ ಆಫರ್ ಘೋಷಿಸಿದೆ. ಉಚಿತ ಜಿಯೋಹಾಟ್‌ಸ್ಟಾರ್ ಸದಸ್ಯತ್ವ ಪ್ಲಾನ್ ಘೋಷಿಸಿದೆ. ಇದೇ ಪ್ಲಾನ್‌ನಲ್ಲಿ ಪ್ರತಿ ದಿನ 2ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್ ಸೇರಿದಂತೆ ಹಲವು ಸೌಲಭ್ಯಗಳಿದೆ.

ಬೆಂಗಳೂರು(ಫೆ.18) ರಿಲಯನ್ಸ್ ಜಿಯೋ ಹಲವು ಆಫರ್ ಮೂಲಕ ಈಗಾಗಲೇ ಗ್ರಾಹಕರಿಗೆ ಉಚಿತ ಸೌಲಭ್ಯ ನೀಡಿದೆ. ಇದೀಗ ಚಾಂಪಿಯನ್ಸ್ ಟ್ರೋಫಿ ಹಾಗೂ ಐಪಿಎಲ್ ಟೂರ್ನಿ ಆನಂದಿಸಲು ಸಜ್ಜಾಗಿರುವ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ. ಲೈವ್ ಸ್ಟ್ರೀಮ್ ಮೂಲಕ ಕ್ರಿಕೆಟ್ ವೀಕ್ಷಿಸಲು ಹಾಗೂ ಜಿಯೋಹಾಟ್‌ಸ್ಟಾರ್ ಮೂಲಕ ಇತರ ಮನೋರಂಜನೆ ಕಾರ್ಯಕ್ರಮ ವೀಕ್ಷಿಸಲು ಇದೀಗ ಜಿಯೋ ಉಚಿತ ಜಿಯೋಹಾಟ್‌ಸ್ಟಾರ್ ಸದಸ್ಯತ್ವ ಪ್ಲಾನ್ ಘೋಷಿಸಿದೆ. ಈ ಪ್ಲಾನ್ ಮೂಲಕ ಗ್ರಾಹಕರು ಉಚಿತವಾಗಿ ಜಿಯೋಹಾಟ್‌ಸ್ಟಾರ್ ಸದಸ್ಯತ್ವ ಪಡೆಯಲು ಸಾಧ್ಯವಿದೆ.

ಜಿಯೋಹಾಟ್‌ಸ್ಟಾರ್ ಸಾಮಾನ್ಯವಾಗಿ ತಿಂಗಳ ರೀಚಾರ್ಜ್ ಅಥವಾ ವಾರ್ಷಿಕ ರೀಚಾರ್ಜ್ ಮೂಲಕವೂ ಲೈವ್ ಸ್ಟ್ರೀಮ್ ವೀಕ್ಷಿಸಲು ಸಾಧ್ಯವಾಗಲಿದೆ. ಆದರೆ ಹೊಸ ಪ್ಲಾನ್ ರೀಚಾರ್ಜ್ ಮಾಡಿದರೆ ಇತರ ಪ್ಲಾನ್‌ಗಳಂತೆ ಪ್ರತಿ ದಿನ 2 ಜಿಬಿ ಡೇಟಾ, ಅನ್‌ಲಿಮಿಟೆಡ್ ಕರೆ, 100 ಎಸ್ಎಂಎಸ್ ಉಚಿತ ಸೇರಿದಂತೆ ಹಲವು ಸೌಲಭ್ಯಗಳು ಸಿಗಲಿದೆ. ಚಾಂಪಿಯನ್ಸ್ ಟ್ರೋಫಿ ಹಾಗೂ ಐಪಿಎಲ್ ಟೂರ್ನಿ ಆರಂಭಕ್ಕೂ ಮೊದಲೇ ಜಿಯೋ ಮಾಡಿದ ಘೋಷಣೆ ಹಲವರ ಸಂಭ್ರಮ ಡಬಲ್ ಮಾಡಿದೆ.

ಐಪಿಎಲ್ ಆರಂಭಕ್ಕೂ ಮುನ್ನ ಜಿಯೋ ಹಾಟ್‌ಸ್ಟಾರ್ ಪ್ಲಾನ್,ಜಾಹೀರಾತು ರಹಿತ ಸ್ಟ್ರೀಮಿಂಗ್

ಜಿಯೋ ಉಚಿತ ಡೇಟಾ, ಕಾಲ್ ಜೊತೆಗೆ ಜಿಯೋಹಾಟ್‌ಸ್ಟಾರ್ ಪ್ಲಾನ್‌ಗೆ 949 ರೂಪಾಯಿ ರೀಚಾರ್ಜ್ ಮಾಡಲು ಜಿಯೋ ಸೂಚಿಸಿದೆ. ವಿಶೇಶ ಅಂದರೆ ಇದರ ವ್ಯಾಲಿಟಿಡಿ 3 ತಿಂಗಳು ಅಂದರೆ 90 ದಿನ. ಅಂದರೆ ತಿಂಗಳಿಗೆ 300 ರೂಪಾಯಿ ಪಾವತಿಸಿದಂತೆ ಆಗಲಿದೆ. ಇದರಲ್ಲಿ ಭರ್ಜರಿ ಆಫರ್ ಸಿಗಲಿದೆ.ಇಲ್ಲಿ ಉಚಿತ ಜಿಯೋಹಾಟ್‌ಸ್ಟಾರ್ ಸದಸ್ಯತ್ವ ಪ್ಲಾನ್ 90 ದಿನ ಇದ್ದರೆ, ಉಚಿತ ಕರೆ, ಪ್ರತಿ ದಿನ 2 ಜಿಬಿ ಡೇಟಾ, ಉಚಿತ ಸಂದೇಶ ಪ್ಲಾನ್ 84 ದಿನ ಇರಲಿದೆ. 949 ರೂಪಾಯಿ ಪ್ಲಾನ್ ಮೂಲಕ ಮತ್ತಷ್ಟು ಸೌಲಭ್ಯಗಳು ಲಭ್ಯವಾಗಲಿದೆ. ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್ ಸರ್ವೀಸ್ ಆ್ಯಕ್ಸೆಸ್ ಕೂಡ ಲಭ್ಯವಾಗಲಿದೆ. 

ಈ ಪ್ಲಾನ್ ಹೊರತುಪಡಿಸಿ ಜಿಯೋಹಾಟ್‌ಸ್ಟಾರ್ ಸದಸ್ಯತ್ವದ ಪ್ರತ್ಯೇಕ ವಾರ್ಷಿಕ ಪ್ಲಾನ್ ಪಡೆಯಲು 499 ರೂಪಾಯಿ ರೀಚಾರ್ಜ್ ಮಾಡಿದರೆ ಸಾಕು. ಆದರೆ ಈ ಪ್ಲಾನ್‌ನಲ್ಲಿ ಜಿಯೋಹಾಟ್‌ಸ್ಟಾರ್ ಉಚಿತ ಸದಸ್ಯತ್ವ ಮಾತ್ರ ಲಭ್ಯವಾಗಲಿದೆ. ಇದರಲ್ಲಿ ಕರೆ, ಡೇಟಾ ಸೇರಿದಂತೆ ಇತರ ಸೌಲಭ್ಯಗಳು ಲಭ್ಯವಾಗುವುದಿಲ್ಲ. 

ಜಿಯೋ ಇದೀಗ ಹತ್ತು ಹಲವು ಪ್ಲಾನ್ ಮೂಲಕ ಗ್ರಾಹಕರ ಸೆಳೆಯಲು ಮುಂದಾಗಿದೆ. ಬೆಲೆ ಏರಿಕೆಯಿಂದ ಜಿಯೋ ತೀವ್ರ ಹೊಡೆತ ಅನುಭವಿಸಿತ್ತು. ಗ್ರಾಹಕರು ಇತರ ನೆಟ್‌ವರ್ಕ್‌ಗಳಿಗೆ ಪೋರ್ಟ್ ಆಗಿದ್ದರು. ಇದನ್ನು ತಡೆಯಲು ಜಿಯೋ ಕೆಲ ಜನಪ್ರಿಯ ಪ್ಲಾನ್ ಘೋಷಿಸಿತ್ತು. 

ಜಿಯೋ ಪ್ಲಾನ್‌ನಲ್ಲಿ ಮಹತ್ವದ ಬದಲಾವಣೆ, ಹಿಂದಿನಂತೆ ರೀಚಾರ್ಜ್ ಮಾಡಿ ನಿರಾಳರಾದರೆ ಆಪತ್ತು