ಭಾರತದಲ್ಲಿ ಕಾರು ಖರೀದಿಸಿದ ಮೊದಲಿಗ ಜಮ್‌ಶೆಡ್ ಜಿ ಟಾಟಾ, ಇದರ ಹಿಂದಿದೆ ರೋಚಕ ಕತೆ!
ಭಾರತದಲ್ಲೀಗ ಕಾರು ಮಾಲೀಕರಾಗುವುದು ಅಸಾಧ್ಯದ ಕೆಲಸವಲ್ಲ. ಆದರೆ ಭಾರತದ ಮೇಲೆ ಪರಕೀಯರ ದಾಳಿ, ಬ್ರಿಟಿಷರು ಕೊಳ್ಳೆ ಹೊಡೆದ ಬಳಿಕ ಅತೀವ ಬಡ ರಾಷ್ಟ್ರವಾದ ಭಾರತ ಎಲ್ಲದ್ದಕ್ಕೂ ಬ್ರಿಟಿಷರ ಅನುಮತಿ ಪಡೆಯಬೇಕಿತ್ತು. ಇದರ ನಡುವೆ ಭಾರತದಲ್ಲಿ ಮೊದಲ ಕಾರು ಖರೀದಿಸಿದ ಹೆಗ್ಗಳಿಕೆಗೆ ಟಾಟಾ ಗ್ರೂಪ್ ಸಂಸ್ಥಾಪಕ ಜೆಮ್‌ಶೆಡ್ ಜಿ ಟಾಟಾಗೆ ಸಲ್ಲಲಿದೆ. ಭಾರತದಲ್ಲಿ ಮೊದಲ ಕಾರು ಮಾಲೀಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿರುವ ಜಮ್‌ಶೆಡ್ ಜಿ ರೋಚಕ ಕತೆ ಇಲ್ಲಿದೆ.
ಮುಂಬೈ(ಮಾ.15) ಭಾರತ ಇದೀಗ ಅತೀ ದೊಡ್ಡ ಆಟೋಮೊಬೈಲ್ ಹಬ್. ವಿಶ್ವದ ಬಹುತೇಕ ಆಟೋ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ಪಾಲು ಹೊಂದಲು ತುದಿಗಾಲಲ್ಲಿ ನಿಂತಿದೆ. ಸದ್ಯ ಭಾರತದಲ್ಲಿ ಟಾಟಾ ಮೋಟಾರ್ಸ್ , ಮಹೀಂದ್ರ ಸೇರಿದಂತೆ ಹಲವು ಭಾರತೀಯ ಕಂಪನಿಗಳು ಅಧಿಪತ್ಯ ಸಾಧಿಸಿದೆ. ವಿದೇಶಗಳಲ್ಲೂ ಛಾಪು ಮೂಡಿಸಿದೆ. ಭಾರತದಲ್ಲಿ ಕಾರು, ದುಬಾರಿ, ಐಷಾರಾಮಿ ವಾಹನಗಳು ಅಚ್ಚರಿಯಲ್ಲ. ಆದರೆ ಬ್ರಿಟಿಷರ ಕಾಲದಲ್ಲಿ ಭಾರತದಲ್ಲಿ ಮೊದಲು ಕಾರು ಖರೀದಿಸಿದ, ಕಾರು ಮಾಲೀಕರಾದ ಹೆಗ್ಗಳಿಕೆಗೆ ಉದ್ಯಮಿ ಜಮ್‌ಶೆಡ್ ಜಿ ಪಾತ್ರರಾಗಿದ್ದಾರೆ.
ಭಾರತದ ಕೈಗಾರಿಕಾ ಪಿತಾಮಹ ಅನ್ನೋ ಬಿರುದುಪಡೆದಿರುವ ಜಮ್‌ಶೆಡ್ ಜಿ ಟಾಟಾ ಕಾರು ಖರೀದಿಸಿದ ಮೊದಲ ಭಾರತೀಯ. 1897ರಲ್ಲಿ ಜೆಮ್‌ಶೆಡ್ ಜಿ ಟಾಟಾ ಇಂಗ್ಲೆಂಡ್‌ನಿಂದ ಕಾರು ಖರೀದಿಸಿ ಭಾರತಕ್ಕೆ ಆಮದು ಮಾಡಿದ್ದರು. ಆ ಕಾಲದಲ್ಲಿ ಈ ಸಾಹಸ ದೂರದ ಮಾತು, ಯೋಚನೆ ಮಾಡುವ ಪರಿಸ್ಥಿತಿಯಲ್ಲೂ ಭಾರತೀಯರು ಇರಲಿಲ್ಲ. ಆದರೆ ಉದ್ಯಮಿ ಜೆಮ್‌ಶೆಡ್ ಜಿ ಟಾಟಾ, ಭಾರತೀಯರಿಗೆ ಎಲ್ಲವೂ ಸಾಧ್ಯ ಅನ್ನೋ ಸ್ಪಷ್ಟ ಸೂಚನೆಯನ್ನು ಬ್ರಟಿಷರಿಗೆ ನೀಡಿದ್ದರು.
ಇದೇ ಮೊದಲ ಬಾರಿಗೆ ಟಾಟಾ ಹ್ಯಾರಿಯರ್ ಕಾರಿನಲ್ಲಿ ರತನ್ ಟಾಟಾ ಪ್ರಯಾಣ, ವಿಡಿಯೋ ವೈರಲ್!
ಕ್ರಾಂಪ್ಟನ್ ಗ್ರೇವಿಯಸ್ ಅನ್ನೋ ಬ್ರಿಟಿಷ್ ಕಾರನ್ನು ಜಮ್‌ಶೆಡ್ ಜಿ ಟಾಟಾ ಖರೀದಿಸಿ ಭಾರತಕ್ಕೆ ತಂದಿದ್ದರು. ಫಾಸ್ಟರ್ ಈ ಕಂಪನಿಯ ಮಾಲೀಕ. ಈತ ಭಾರತದಲ್ಲಿ ಆಡಳಿತ ಕೆಲಸದಲ್ಲಿ ನಿಯೋಜನೆಗೊಂಡಿದ್ದ ಅಧಿಕಾರಿ. ಈತನ ಫಾಸ್ಟರ್ ಕ್ರಾಂಪ್ಟನ್ ಗೇವಿಯಸ್ ಕಂಪನಿಯ ಕಾರನ್ನು ಜೆಮ್‌ಶೆಡ್ ಜಿ ಟಾಟಾ ಖರೀದಿಸಿ ಭಾರತಕ್ಕೆ ತಂದಿದ್ದರು. ಜೆಮ್‌ಶೆಡ್ ಜಿ ಟಾಟಾ ಕಾರು ಖರೀದಿಸಿದ, ಭಾರತದಲ್ಲಿ ಕಾರಿನ ಮಾಲೀಕರಾದ ಮೊದಲಿಗೆ. ಆದರೆ ಭಾರತದಲ್ಲಿ ಮೊದಲ ಕಾರು ಹೊಂದಿದ ವ್ಯಕ್ತಿ ಇದೇ ಫಾಸ್ಟರ್. 1896ರಲ್ಲಿ ಈತ ತನ್ನದೇ ಕಂಪನಿಯ ಕಾರನ್ನು ಭಾರತಕ್ಕೆ ತಂದಿದೆ. ಮರು ವರ್ಷ ಇದೇ ಕಂಪನಿಯ ಕಾರನ್ನು ಜೆಮ್‌ಶೆಡ್ ಜಿ ಟಾಟಾ ಖರೀದಿಸಿದ್ದರು.
ಜಮ್‌ಶೆಡ್ ಜಿ ಟಾಟಾ ತಮ್ಮ 29ನೇ ವಯಸ್ಸಿಗೆ ಉದ್ಯಮ ಕ್ಷೇತ್ರಕ್ಕೆ ಇಳಿದು ಭಾರತದ ಯಶಸ್ವಿಯಾಗಿ ಉದ್ಯಮಿಯಾಗಿ ಹೊರಹೊಮ್ಮಿದ್ದರು. ಆರಭದಲ್ಲಿ ಹಲವು ಏರಿಳಿತ ಕಂಡ ಟಾಟಾ ಅಷ್ಟೇ ವೇಗದಲ್ಲಿ ನಾಲ್ಕು ಯೋಜನೆ ಕೈಗೆತ್ತಿಕೊಂಡು ದೇಶದ ಇತಿಹಾಸ ಬದಲಿಸಿದರು. ಸ್ಟೀಲ್, ಹೊಟೆಲ್, ಶಿಕ್ಷಣ ಹಾಗೂ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಕೈಗೆತ್ತಿಕೊಂಡು ಭಾರತವನ್ನು ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದರು.
ಟಾಟಾ ಗ್ರೂಪ್ ಹುಟ್ಟುಹಾಕಿದ ಜೆಮ್‌ಶೆಡ್ ಜಿ ಭಾರತದಲ್ಲಿ ಆಟೋಮೊಬೈಲ್ ಇಂಡಸ್ಟ್ರಿ ಆರಂಭಕ್ಕೆ ನಾಂದಿ ಹಾಡಿದರು. ಇದೀಗ ಟಾಟಾ ಗ್ರೂಪ್ ವಿಶ್ವದ ಹಲವು ದೇಶಗಳಲ್ಲಿ ಕೈಗಾರಿಕೆ, ವ್ಯವಹಾರಗಳನ್ನು ಹೊಂದಿದೆ. ಟಾಟಾ ಮೋಟಾರ್ಸ್ ವಿಶ್ವದ ಅತ್ಯುತ್ತಮ ಆಟೋಮೊಬೈಲ್ ಉತ್ಪನ್ನಗಳ ಪಟ್ಟ ಗಿಟ್ಟಿಸಿಕೊಂಡಿದೆ.
ಮಳೇಲಿ ಕಾರು ಕೆಳಗೆ ಆಶ್ರಯ ಪಡೆಯೋ ಬೆಕ್ಕು, ನಾಯಿ ಬಗ್ಗೆ ಇರಲಿ ಕಾಳಜಿ, ರತನ್ ಟಾಟಾ ಮನವಿ!