7.5 ಲಕ್ಷ ಕೋಟಿ ರು ದಾನ: ಜೆಮ್‌ಶೆಡ್ ಜೀ ವಿಶ್ವ ನಂ.1
- 7.5 ಲಕ್ಷ ಕೋಟಿ ರು ದಾನ: ಜೆಮ್‌ಶೆಡ್ ಜೀ ವಿಶ್ವ ನಂ.1
- ಶತಮಾನಗಳಿಂದ ನಡೆದು ಬಂದ ದಾನ
ಮುಂಬೈ(ಜೂ.24): ವಿಶ್ವದ ಅತಿದೊಡ್ಡ ದಾನಿಗಳ ಪಟ್ಟಿಬಂದಾಗಲೆಲ್ಲಾ ಕೆಲ ವಿದೇಶಿ ಎನ್‌ಜಿಒಗಳು ಮತ್ತು ಉದ್ಯಮಿಗಳು ಹೆಸರು ಕೇಳಿಬರುವುದೇ ಹೆಚ್ಚು. ಆದರೆ ಹುರೂನ್ ಮತ್ತು ಎಡೆಲ್‌ಗೀವ್ ಫೌಂಡೇಷನ್ ಸಿದ್ಧಪಡಿಸಿರುವ ಶತಮಾನದ ಅತಿದೊಡ್ಡ ದಾನಿಗಳ ಪೈಕಿ, ಟಾಟಾ ಸಮೂಹದ ಸಂಸ್ಥಾಪಕರಾದ ಜೆಮ್‌ಶೆಡ್ ಜೀ ಟಾಟಾ ವಿಶ್ವದಲ್ಲೇ ನಂ.1 ಆಗಿ ಹೊರಹೊಮ್ಮಿದ್ದಾರೆ.
ಅಮೆರಿಕ ಮತ್ತು ಯುರೋಪ್‌ನ ಹಲವು ಉದ್ಯಮಗಳು ಇತ್ತೀಚಿನ ದಶಕಗಳಲ್ಲಿ ದಾನದ ಕೆಲಸಕ್ಕೆ ಮುಂದಾಗಿವೆ. ಆದರೆ ಟಾಟಾ ಸಂಸ್ಥೆಯನ್ನು ಹುಟ್ಟುಹಾಕಿದ್ದ ಜೆಮ್‌ಶೆಡ್ ಜೀ ಟಾಟಾ ಅವರು 1892ರಲ್ಲೇ ಅವರು ಇಂಥ ದಾನದ ಕೆಲಸ ಆರಂಭಿಸಿದ್ದರು. ಅಂದಿನಿಂದ ಇಂದಿನವರೆಗೆ ಟಾಟಾ ಸಮೂಹವು ಶಿಕ್ಷಣ, ಆರೋಗ್ಯ ಮತ್ತಿತರೆ ವಲಯಕ್ಕೆ ನೀಡಿರುವ ದಾನದ ಮೊತ್ತ 7.2 ಲಕ್ಷ ಕೋಟಿಗೂ. ಹೆಚ್ಚು. ಈ ಮೂಲಕ ಅದು ವಾರನ್ ಬಫೆಟ್ ಸೇರಿದಂತೆ ಇನ್ನಿತರ ವಿಶ್ವದ ಬೃಹತ್ ಕಂಪನಿಗಳಿಗಿಂತಲೂ ಮುಂದಿದೆ ಎಂದು ವಿಶ್ವದ 50 ಅತಿದೊಡ್ಡ ದಾನಿಗಳ ಕಂಪನಿಗಳ ವರದಿಯಲ್ಲಿ ಹೇಳಲಾಗಿದೆ.
ವರದಿ ಅನ್ವಯಬಿಲ್‌ಗೇಟ್ಸ್ ಮತ್ತು ಅವರ ವಿಚ್ಛೇದಿತ ಪತ್ನಿ ಮೆಲಿಂದಾ ಸಂಸ್ಥೆಯು 5.5 ಲಕ್ಷ ಕೋಟಿ (74.6 ಬಿಲಿಯನ್ ಡಾಲರ್), ವಾರನ್ ಬಫೆಟ್ 2.7 ಲಕ್ಷ ಕೋಟಿ (37.4 ಬಿಲಿಯನ್ ಡಾಲರ್), ಜಾಜ್‌ರ್ ಸೋರಸ್ 2.5 ಲಕ್ಷ ಕೋಟಿ (34.8 ಬಿಲಿಯನ್ ಡಾಲರ್) ಮತ್ತು ಜಾನ್ ಡಿ ರಾಕ್‌ಫೆಲ್ಲರ್ 1.9 ಲಕ್ಷ ಕೋಟಿ (26.8 ಬಿಲಿಯನ್ ಡಾಲರ್) ನೀಡಿವೆ.