ವಿಳಂಬ ಐಟಿಆರ್ ಸಲ್ಲಿಕೆ ಮಾಡೋರಿಗೆ ಡಬಲ್ ಶಾಕ್; ದಂಡದ ಜೊತೆಗೆ ಪರಿಶೀಲನೆ ಅವಧಿಯೂ ಇಳಿಕೆ

*2022-2023ನೇ ಮೌಲ್ಯಮಾಪನ ವರ್ಷದ ಐಟಿಆರ್ ಸಲ್ಲಿಕೆಗೆ ಜು.31 ಅಂತಿಮ ಗಡುವು
*ಆ.1ರಿಂದ ಐಟಿಆರ್ ಸಲ್ಲಿಕೆ ಮಾಡೋರಿಗೆ ಪರಿಶೀಲನೆ ಅವಧಿ 120ರಿಂದ 30 ದಿನಗಳಿಗೆ ಇಳಿಕೆ
*ಜು.31ರ ಮುನ್ನ ಸಲ್ಲಿಕೆ ಮಾಡಿರೋರಿಗೆ ಹಿಂದಿನಂತೆ 120 ದಿನಗಳ ಕಾಲಾವಕಾಶ

ITR V submission Time limit for verifying ITR reduced to 30 days

ನವದೆಹಲಿ (ಜು.1): 2022-2023ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ (ಐಟಿಆರ್ ) ಅನ್ನು ಆಗಸ್ಟ್  1ರಿಂದ ಸಲ್ಲಿಕೆ ಮಾಡೋರಿಗೆ ಐಟಿಆರ್ ಪರಿಶೀಲನೆಗೆ ನೀಡಿರುವ ಸಮಯಾವಧಿಯನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) 120 ದಿನಗಳಿಂದ 30 ದಿನಗಳಿಗೆ ಇಳಿಕೆ ಮಾಡಿದೆ. ಹೀಗಾಗಿ 20222 ರ ಜುಲೈ 31ರ ತನಕ ಐಟಿಆರ್ ಫೈಲ್ ಮಾಡಿದವರಿಗೆ ಪರಿಶೀಲನೆಗೆ 120 ದಿನಗಳ ಕಾಲಾವಕಾಶವನ್ನೇ ನೀಡಲಾಗಿದೆ. ಆದರೆ, ಅಂತಿಮ ಗಡುವಾದ ಜುಲೈ 31ರ ಬಳಿಕ ಸಲ್ಲಿಕೆ ಮಾಡಿದವರಿಗೆ ಮಾತ್ರ ಸಮಯ ಮಿತಿಯನ್ನು120 ದಿನಗಳಿಂದ  30 ದಿನಗಳಿಗೆ ಇಳಿಕೆ ಮಾಡಲಾಗಿದೆ ಎಂದು ಜುಲೈ  29ರ ಸಿಬಿಡಿಟಿ ಅಧಿಸೂಚನೆ ತಿಳಿಸಿದೆ. ಆಗಸ್ಟ್ 1 ರಂದು ಹೊರಡಿಸಲಾಗಿರುವ ಈ ಅಧಿಸೂಚನೆ ಅನುಷ್ಠಾನದ ದಿನಾಂಕದಿಂದ ಇ-ಪರಿಶೀಲನೆ ಅಥವಾ ITR-V ಸಲ್ಲಿಸೋರಿಗೆ ಕೇವಲ  30 ದಿನಗಳ ಕಾಲಾವಕಾಶ ಮಾತ್ರ ಇದೆ ಎಂದು ಸಿಬಿಡಿಟಿ ತಿಳಿಸಿದೆ. ಹೀಗಾಗಿ ಆ.1 ಅಥವಾ ಆ ಬಳಿಕ ಐಟಿಆರ್ ಸಲ್ಲಿಕೆ ಮಾಡಿರೋರು ತಪ್ಪದೇ 30 ದಿನಗಳಲ್ಲಿ ಇ-ಪರಿಶೀಲನೆ ನಡೆಸಬೇಕು.

ಐಟಿಆರ್ ದತ್ತಾಂಶವನ್ನು ಎಲೆಕ್ಟ್ರಾನಿಕ್ ಸ್ವರೂಪದಲ್ಲೇ ವರ್ಗಾವಣೆ ಮಾಡಿ ಹಾಗೂ ಇ-ದೃಢೀಕರಣ ಅಥವಾ ದತ್ತಾಂಶ ವರ್ಗಾವಣೆಯಾದ 30 ದಿನಗಳಲ್ಲಿ ಐಟಿಆರ್ -ವಿ ಸಲ್ಲಿಕೆ ಮಾಡಿದ್ದರೆ, ಆಗ ಇಂಥ ಪ್ರಕರಣಗಳಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ದತ್ತಾಂಶ ವರ್ಗಾವಣೆಯಾದ ದಿನಾಂಕವನ್ನೇ ಆದಾಯ ರಿಟರ್ನ್ ನೀಡುವ ದಿನಾಂಕವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಈ ಅಧಿಸೂಚನೆ ಜಾರಿಗೆ ಬರುವ ಮುನ್ನವೇ ಐಟಿಆರ್ ಸಲ್ಲಿಕೆ ಮಾಡಿರೋದಿಗೆ ಪರಿಶೀಲನೆಗೆ ಈ ಹಿಂದಿನಂತೆಯೇ 120 ದಿನಗಳ ಸಮಯಾವಕಾಶ ಸಿಗಲಿದೆ ಎಂಬುದನ್ನು ಕೂಡ ಸ್ಪಷ್ಟಪಡಿಸಲಾಗಿದೆ. ಐಟಿಆರ್ ಇ-ಪರಿಶೀಲನೆ ಮಾಡಬಹುದು ಇಲ್ಲವೆ ITR-V ಅರ್ಜಿಯನ್ನು ಸ್ಪೀಡ್ ಪೋಸ್ಟ್ ಮೂಲಕ ಸೆಂಟ್ರಲೈಸ್ಡ್ ಪ್ರೊಸೆಸಿಂಗ್ ಸೆಂಟರ್, ಆದಾಯ ತೆರಿಗೆ ಇಲಾಖೆ, ಬೆಂಗಳೂರು -560500, ಕರ್ನಾಟಕ ಇಲ್ಲಿಗೆ ಕಳುಹಿಸಬೇಕು.ಆದಾಯ ತೆರಿಗೆ ರಿಟರ್ನ್ ಇ-ಪರಿಶೀಲನೆ (e-verification) ಮಾಡಲು ಆರು ವಿಧಾನಗಳನ್ನು ಅನುಸರಿಸಬಹುದು.  ನೆಟ್ ಬ್ಯಾಂಕಿಂಗ್, ಬ್ಯಾಂಕ್ ಎಟಿಎಂ, ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಒಟಿಪಿ, ಡಿಮ್ಯಾಟ್ ಖಾತೆ, ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ. ಇ-ದೃಢೀಕರಣಗೊಳ್ಳದ ಐಟಿ ರಿಟರ್ನ್ ಗಳನ್ನು ಆದಾಯ ತೆರಿಗೆ ಇಲಾಖೆ (Incme Tax Department) ಪರಿಗಣಿಸೋದಿಲ್ಲ.

ಮೊಸರು, ಲಸ್ಸಿ, ಗೋಧಿ ಮೇಲಿನ ಜಿಎಸ್ ಟಿ ಬಡವರಿಗೆ ಹೊರೆಯಾಗದು: ನಿರ್ಮಲಾ ಸೀತಾರಾಮನ್

30 ದಿನಗಳ ಬಳಿಕ ಐಟಿಆರ್ ಸಲ್ಲಿಕೆ ಮಾಡಿದ್ರೆ ಏನಾಗುತ್ತೆ?
ಒಂದು ವೇಳೆ ITR-V ಅನ್ನು ನಿಗದಿತ ಅವಧಿ ಬಳಿಕ ಸಲ್ಲಿಕೆ ಮಾಡಿದರೆ, ರಿಟರ್ನ್ ಗಾಗಿ ಸಲ್ಲಿಕೆ ಮಾಡಿರುವ ITR-V ಸಲ್ಲಿಕೆ ಆಗಿಯೇ ಇಲ್ಲ ಎಂದು ಪರಿಗಣಿಸಲಾಗುತ್ತದೆ. ಆ ಬಳಿಕ ಮತ್ತೆ 30 ದಿನಗಳೊಳಗೆ ಹೊಸ ITR-V ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.

ಐಟಿಆರ್ ಸಲ್ಲಿಕೆ ವಿಳಂಬವಾದ್ರೆ ಏನಾಗುತ್ತೆ?
ನೀವು  2022-2023ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಕೊನೆಯ ದಿನವಾದ ಜು.31ಕ್ಕೆ ಅಥವಾ ಅದರೊಳಗೆ  ಐಟಿಆರ್ ಸಲ್ಲಿಕೆ ಮಾಡದಿದ್ರೂ ವಿಳಂಬ ಐಟಿಆರ್ (Belated ITR) ಸಲ್ಲಿಕೆಗೆ ಅವಕಾಶವಿದೆ. ಆದರೆ, ಇದ್ರಿಂದ ತೆರಿಗೆದಾರರು (Taxpayers) ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಈ ವರ್ಷ ತೆರಿಗೆದಾರರು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಅವರು ಗಳಿಸೋ ಲಾಭಕ್ಕೆ (Profit) ಸರಿಹೊಂದಿಸೋ (Setoff) ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಇನ್ನು ತೆರಿಗೆದಾರರ ಆದಾಯದಿಂದ ಈಗಾಗಲೇ ಹೆಚ್ಚುವರಿಯಾಗಿ ಕಡಿತಗೊಂಡ ತೆರಿಗೆಗೆ ಸೂಕ್ತ ದಾಖಲೆಗಳನ್ನು ಒದಗಿಸಿದ್ರೆ ಅದನ್ನು ಆದಾಯ ತೆರಿಗೆ ಇಲಾಖೆ ಮರುಪಾವತಿ (Refund) ಮಾಡುತ್ತದೆ. ಆದ್ರೆ ಅಂತಿಮ ಗಡುವಿನೊಳಗೆ  ಐಟಿಆರ್ (ITR) ಫೈಲ್ (File) ಮಾಡದ ತೆರಿಗೆದಾರರಿಗೆ ಮರುಪಾವತಿ ಮಾಡೋದಿಲ್ಲ. 

ಜಗತ್ತಿನ ಶ್ರೀಮಂತ ವ್ಯಕ್ತಿಗಳ ಸರಳ ಅಭ್ಯಾಸಗಳಿವು, ಅಳವಡಿಸಿಕೊಂಡರೆ ಜೀವನ ಬಿಂದಾಸ್!

 

Latest Videos
Follow Us:
Download App:
  • android
  • ios