ಐಟಿ ರಿಟರ್ನ್ ಫಾರ್ಮ್‌ನಲ್ಲಿ ಭಾರೀ ಬದಲಾವಣೆ: ಹೊಸ ಅಂಶಗಳ ಸೇರ್ಪಡೆ!
ಐಟಿ ರಿಟರ್ನ್ ಫಾರ್ಮ್‌ನಲ್ಲಿ ಭಾರೀ ಬದಲಾವಣೆ: ಹೊಸ ಅಂಶಗಳ ಸೇರ್ಪಡೆ!| ಪಾಸ್‌ಪೋರ್ಟ್, ವಿದ್ಯುತ್ ಬಿಲ್ ಮಾಹಿತಿ ಕಡ್ಡಾಯದ ಹೊಸ ಆದಾಯ ತೆರಿಗೆ ಫಾರ್ಮ್ ರೆಡಿ| ಫಾಮ್‌ರ್‍ಗಳಿಗೆ ಸಿಬಿಟಿಡಿ ಅನುಮೋದನೆ| ಪಾಸ್‌ಪೋರ್ಟ್ ಸಂಖ್ಯೆ, ಹಣದ ವ್ಯವಹಾರ, ವಿದ್ಯುತ್ ಬಿಲ್ ನಮೂದಿಸಬೇಕು
ನವದೆಹಲಿ[ಜ.06]: ಹೊಸ ಅಂಶಗಳನ್ನು ಒಳಗೊಂಡ 2020-21ನೇ ಸಾಲಿನ ಐಟಿಆರ್-1 ‘ಸಹಜ್’ ಹಾಗೂ ಐಟಿಆರ್-4 ‘ಸುಗಮ್’ ರಿಟರ್ನ್ ಫಾಮ್‌ರ್‍ಗಳಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ), ಒಪ್ಪಿಗೆ ಸೂಚಿಸಿದೆ. ಐಟಿಆರ್-1 ಸಹಜ್ ಫಾಮ್‌ರ್‍ಗಳು 50 ಲಕ್ಷ ರು.ವರೆಗೆ ಆದಾಯ ಹೊಂದಿದವರಿಗೆ ಇರುವ ಫಾರ್ಮ್ ಆಗಿದೆ.
ವೇತನದಾರರು, ಒಂದು ಮನೆಯ ಏಕೈಕ ಮಾಲೀಕ, ಬಡ್ಡಿಯಿಂದ ಬರುವ ಆದಾಯ, ಕೌಟುಂಬಿಕ ಪಿಂಚಣಿ ಹೊಂದಿದವರಿಗೆ ಇದು ಅನ್ವಯ. ಐಟಿಆರ್-4 ಸುಗಮ್ ಫಾಮ್‌ರ್‍ಗಳು ಕೂಡ 50 ಲಕ್ಷ ರು.ವರೆಗೆ ಆದಾಯ ಹೊಂದಿದವರಿಗೆ ಇರುವ ಫಾಮ್‌ರ್‍ಗಳಾದರೂ ಅನ್ಯ ರೀತಿಯ ಆದಾಯ ಬರುವವರಿಗೆ ಸೇರಿದ ಫಾಮ್‌ರ್‍ಗಳಾಗಿವೆ. ವ್ಯಾಪಾರದ ಮೂಲಕ ಆದಾಯ ಹೊಂದಿದವರಿಗೆ ಇದು ಅನ್ವಯವಾಗುತ್ತದೆ.
ಐಟಿ ರಿಟರ್ನ್ಸ್ ಬಂದಿಲ್ಲ ಅಂದ್ರೆ ಏನ್ಮಾಡಬೇಕು?: ಸಿಂಪಲ್ ಸ್ಟೆಪ್ಸ್!
ಯಾವ ಹೊಸ ಅಂಶಗಳು?:
ಐಟಿಆರ್-1 ಸಹಜ್ ಫಾರ್ಮ್‌ನಲ್ಲಿ ‘ನೀವು ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದೀರಾ? ಹೊಂದಿದ್ದರೆ ಪಾಸ್‌ಪೋರ್ಟ್ ನಂಬರ್ ತಿಳಿಸಿ’ ಎಂಬ ಹೊಸ ಅಂಶ ಹೊಂದಿದೆ.
ಇನ್ನು ಐಟಿಆರ್-4 ಸಹಜ್ ಫಾರ್ಮ್‌ನಲ್ಲಿ ‘1 ಕೋಟಿ ರು.ಗಿಂತ ಹೆಚ್ಚು ಹಣವನ್ನು ಕಳೆದ ವರ್ಷ ಚಾಲ್ತಿ ಖಾತೆಯಲ್ಲಿ ಠೇವಣಿ ಇಟ್ಟಿದ್ದೀರಾ? ಹಾಗಿದ್ದರೆ ಎಷ್ಟು ಠೇವಣಿ ಇರಿಸಿದ್ದೀರಿ ತಿಳಿಸಿ’ ಎಂಬ ಪ್ರಶ್ನೆಯಿದೆ. ವಿದೇಶ ಪ್ರವಾಸಕ್ಕೆ .2 ಲಕ್ಷಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದ್ದರೆ ಅ ಮೊತ್ತವನ್ನೂ ನಮೂದಿಸಬೇಕು. 1 ಲಕ್ಷ ರು.ಗಿಂತ ಹೆಚ್ಚಿನ ವಿದ್ಯುತ್ ಬಿಲ್ ತುಂಬಿದ್ದರೆ, ವಿದ್ಯುತ್ ಬಿಲ್ ಮೊತ್ತವನ್ನೂ ಅರ್ಜಿಯಲ್ಲಿ ನಮೂದಿಸಬೇಕು.
ಟ್ಯಾಕ್ಸ್ ರಿಫಂಡ್ ಸ್ಟೇಟಸ್ ತಿಳಿಯೋದು ಹೀಗೆ: ಒಂದು ಕ್ಲಿಕ್‌ನ ಸೇವೆ ನಿಮಗೆ!