Asianet Suvarna News Asianet Suvarna News

ITR Filing:ತೆರಿಗೆದಾರರೇ ಗಮನಿಸಿ, ಐಟಿಆರ್ ಸಲ್ಲಿಕೆಗೆ ನಾಳೆ ಕೊನೆಯ ದಿನ; ತಪ್ಪಿದ್ರೆ ಬೀಳುತ್ತೆ 5000ರೂ. ದಂಡ

*2022-23ನೇ ಮೌಲ್ಯಮಾಪನ ವರ್ಷದ ಐಟಿಆರ್ ಸಲ್ಲಿಕೆಗೆ ಜು.31 ಅಂತಿಮ ಗಡುವು
*ಅವಧಿ ವಿಸ್ತರಣೆ ಅಸಂಭವ ಎಂದಿರುವ ಆದಾಯ ತೆರಿಗೆ ಇಲಾಖೆ
*ವಿಳಂಬ ಐಟಿಆರ್ ಸಲ್ಲಿಕೆಗೆ ಡಿ.31ರ ತನಕ ಅವಕಾಶ

ITR Filing AY 2022 23 Rs 5000 Penalty if you Miss Income Tax FY22 Deadline Know Details
Author
Bangalore, First Published Jul 30, 2022, 4:04 PM IST

Business Desk:2022-23ನೇ  ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ನಾಳೆ (ಜು.31) ಕೊನೆಯ ದಿನ. ತೆರಿಗೆದಾರರು ಸಾಮಾಜಿಕ ಜಾಲತಾಣದಲ್ಲಿ ಐಟಿಆರ್ ಸಲ್ಲಿಕೆ ಗಡುವು ವಿಸ್ತರಣೆ ಮಾಡುವಂತೆ ಒತ್ತಡ ಹೇರಿದರು ಕೂಡ ಆದಾಯ ತೆರಿಗೆ ಇಲಾಖೆ ಇದಕ್ಕೆ ಮನ್ನಣೆ ನೀಡಿಲ್ಲ. ಅಲ್ಲದೆ, ಐಟಿಆರ್ ಸಲ್ಲಿಕೆ ಗಡುವು ವಿಸ್ತರಣೆ ಮಾಡೋದಿಲ್ಲ ಎಂದು ಕೂಡ ಈಗಾಗಲೇ ಸ್ಪಷ್ಟಪಡಿಸಿದೆ.  ಐಟಿಆರ್ ಸಲ್ಲಿಕೆಗೆ ಜು.31 ಅಂತಿಮ ದಿನಾಂಕವಾಗಿದ್ದು, ಅವಧಿ ವಿಸ್ತರಣೆ ಮಾಡಲಾಗೋದಿಲ್ಲ. ಹೀಗಾಗಿ ಆದಷ್ಟು ಶೀಘ್ರದಲ್ಲಿ ಐಟಿಆರ್ ಫೈಲ್ ಮಾಡುವಂತೆ ಆದಾಯ ತೆರಿಗೆ ಇಲಾಖೆ ಟ್ವಿಟರ್ ಮೂಲಕ ತೆರಿಗೆದಾರರಿಗೆ ಮಾಹಿತಿ ನೀಡಿದೆ. ಇನ್ನು ಎಸ್ಎಂಎಸ್ ಹಾಗೂ ಇ-ಮೇಲ್ ಮುಖಾಂತರ ಕೂಡ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಐಟಿಆರ್ ಸಲ್ಲಿಕೆ ಮಾಡುವಂತೆ ನೆನಪಿಸುತ್ತಿದೆ. '2022ರ ಜುಲೈ 26ರ ತನಕ 3.4 ಕೋಟಿಗೂ ಅಧಿಕ ಐಟಿಆರ್ ಗಳು ಫೈಲ್ ಆಗಿವೆ. ಜುಲೈ 26ರಂದು ಒಂದೇ ದಿನ ಸುಮಾರು 30ಲಕ್ಷ ಐಟಿಆರ್ ಗಳು ಫೈಲ್ ಆಗಿವೆ. 2022-23 ನೇ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಕೆಗೆ 2022ರ ಜುಲೈ  31 ಅಂತಿಮ ದಿನಾಂಕ. ಈ ತನಕ ನೀವು ಐಟಿಆರ್ ಫೈಲ್ ಮಾಡಡಿದ್ರೆ ತಕ್ಷಣ ಮಾಡಿ. ವಿಳಂಬ ಶುಲ್ಕದಿಂದ ತಪ್ಪಿಸಿಕೊಳ್ಳಿ' ಎಂದು ಆದಾಯ ತೆರಿಗೆ ಇಲಾಖೆ ಜುಲೈ 27ರಂದು ಟ್ವೀಟ್ ಮೂಲಕ ತೆರಿಗೆದಾರರಿಗೆ ಮಾಹಿತಿ ನೀಡಿದೆ. ಹೀಗಾಗಿ ದಂಡದಿಂದ ತಪ್ಪಿಸಿಕೊಳ್ಳಲು ತೆರಿಗೆದಾರರಿಗೆ ನಾಳೆ ಕೊನೆಯ ಅವಕಾಶ. ಆದಷ್ಟು ಬೇಗ ಐಟಿಆರ್ ಫೈಲ್ ಮಾಡಿಬಿಡಿ.

ಅಂತಿಮ ಗಡುವೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೆ ಏನಾಗುತ್ತೆ?
ನೀವು ಜು.31ರೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೆ ಇನ್ನೊಂದು ಅವಕಾಶವಿದ್ರೂ ಕೂಡ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇನೆಂದ್ರೆ ಈ ವರ್ಷ ನೀವು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ನೀವು ಗಳಿಸೋ ಲಾಭಕ್ಕೆ ಸರಿಹೊಂದಿಸೋ (Setoff) ಅವಕಾಶವನ್ನು ನೀವು ಕಳೆದುಕೊಳ್ಳುತ್ತೀರಿ. ಇನ್ನು ನಿಮ್ಮ ಆದಾಯದಿಂದ ಈಗಾಗಲೇ ಹೆಚ್ಚುವರಿಯಾಗಿ ಕಡಿತಗೊಂಡ ತೆರಿಗೆಗೆ ನೀವು ಸೂಕ್ತ ದಾಖಲೆಗಳನ್ನು ಒದಗಿಸಿದ್ರೆ ಅದನ್ನು ಆದಾಯ ತೆರಿಗೆ ಇಲಾಖೆ ನಿಮಗೆ ಮರುಪಾವತಿ (Refund) ಮಾಡುತ್ತದೆ. ಆದ್ರೆ ನೀವು ಜು.31ರೊಳಗೆ ಐಟಿಆರ್ ಫೈಲ್ ಮಾಡದಿದ್ರೆ ನಿಮಗೆ ತೆರಿಗೆ ಮರುಪಾವತಿ ಮಾಡಲಾಗೋದಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ನೀವು ಈ ತನಕ ಪಾವತಿ ಮಾಡಿದ ತೆರಿಗೆ ಆದಾಯ ತೆರಿಗೆ ಇಲಾಖೆ ಲೆಕ್ಕ ಹಾಕಿದ ತೆರಿಗೆಗಿಂತ ಕಡಿಮೆ ಇದ್ರೆ ಬಾಕಿ ತೆರಿಗೆ ಪಾವತಿಸೋ ಜೊತೆಗೆ ಅದಕ್ಕೆ ಬಡ್ಡಿಯನ್ನು (Interest) ಕೂಡ ಕಟ್ಟಬೇಕಾಗುತ್ತದೆ. 

ಐಟಿಆರ್‌ ಸಲ್ಲಿಕೆಗೆ ಎರಡೇ ದಿನ ಅವಕಾಶ: ಡೆಡ್‌ಲೈನ್‌ ವಿಸ್ತರಣೆ ಅಸಂಭವ ಎಂದ ಕೇಂದ್ರ ಸರ್ಕಾರ

5,000ರೂ. ದಂಡ
ಜು.31ರೊಳಗೆ ಐಟಿಆರ್ ಸಲ್ಲಿಕೆ ಮಾಡಲು ಸಾಧ್ಯವಾಗದವರಿಗೆ ವಿಳಂಬ ಐಟಿಆರ್  (belated ITR) ಸಲ್ಲಿಕೆಗೆ ಡಿ.31ರ ತನಕ ಅವಕಾಶವಿದೆ. ಆದರೆ, ವಿಳಂಬ ಐಟಿಆರ್ ಸಲ್ಲಿಕೆಗೆ ದಂಡ ಪಾವತಿಸಬೇಕಾಗುತ್ತದೆ. ತಡವಾಗಿ ಐಟಿಆರ್ ಸಲ್ಲಿಕೆ ಮಾಡಿದ್ರೆ ಆದಾಯ ತೆರಿಗೆ ಕಾಯ್ದೆ ( Income Tax Act) ಸೆಕ್ಷನ್ 234 ಎಫ್ (Section 234F) ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ. ಸೆಕ್ಷನ್ 234 ಎಫ್ (Section 234F) ಅನ್ವಯ ಒಟ್ಟು 5ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ತೆರಿಗೆದಾರರು (Taxpayers) ಜು.31ರ ಬಳಿಕ ವಿಳಂಬ ಐಟಿಆರ್ ಸಲ್ಲಿಕೆ ಮಾಡಿದ್ರೆ 5,000ರೂ. ದಂಡ ಪಾವತಿಸಬೇಕು. ವಾರ್ಷಿಕ ಒಟ್ಟು ಆದಾಯ  5ಲಕ್ಷ ರೂ. ಗಿಂತ ಕಡಿಮೆಯಿದ್ರೆ 1,000ರೂ. ದಂಡ ಪಾವತಿಸಬೇಕು. 

Dollar Vs Rupee:ಡಾಲರ್ ಎದುರು ಚೇತರಿಸಿದ ರೂಪಾಯಿ; ಎರಡು ತಿಂಗಳಲ್ಲೇ ಗರಿಷ್ಠ ಗಳಿಕೆ

 

Follow Us:
Download App:
  • android
  • ios