ನವದೆಹಲಿ[ಜು.08]: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವ್ಯಕ್ತಿಗಳು ಆಧಾರ್ ಸಂಖ್ಯೆಯನ್ನು ಮಾತ್ರವೇ ಹೊಂದಿದ್ದರೆ ಅಂಥವರಿಗೆ ತೆರಿಗೆ ಇಲಾಖೆ ಸ್ವಯಂ ಪ್ರೇರಿತವಾಗಿ ಪ್ಯಾನ್ ಕಾರ್ಡ್ ಮಂಜೂರು ಮಾಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪ್ಯಾನ್ ಸಂಖ್ಯೆ ಹೊಂದಿಲ್ಲದ ವ್ಯಕ್ತಿಗಳು ಆಧಾರ್ ಬಳಸಿ ತೆರಿಗೆ ರಿಟರ್ನ್ ಫೈಲ್ ಮಾಡಬಹುದು ಎಂಬ ಬಜೆಟ್ ಘೋಷಣೆಯಿಂದ ಇನ್ನು ಮುಂದೆ ಪ್ಯಾನ್ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ. ಪ್ಯಾನ್ ಸಂಖ್ಯೆ ಹೊಂದಿಲ್ಲದ, ಆಧಾರ್ ಕಾರ್ಡ್ ಮಾತ್ರ ಹೊಂದಿದ ವ್ಯಕ್ತಿಗಳಿಗೆ ಪರ‌್ಯಾಯ ಆಯ್ಕೆಯನ್ನು ಒದ ಗಿಸುವ ಪ್ರಯತ್ನ ಇದಾಗಿದೆ. ಪ್ಯಾನ್ ಕಾರ್ಡ್ ಮುಂದೆ ಯೂ ಚಾಲ್ತಿಯಲ್ಲಿರುತ್ತದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಮುಖ್ಯಸ್ಥ ಪ್ರಮೋದ್ ಚಂದ್ರ ಮೋಡಿ ತಿಳಿಸಿದ್ದಾರೆ. ಇಂತಹ ವ್ಯಕ್ತಿಗಳಿಗೆ ಸ್ವಯಂ ಪ್ರೇರಿತವಾಗಿ ಪ್ಯಾನ್ ಕಾರ್ಡ್ ಮಂಜೂರು ಮಾಡಿ, ಆಧಾರ್ ಜತೆ ಜೋಡಣೆ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ

ಪ್ಯಾನ್ ಕಾರ್ಡ್ ಇಲ್ಲದಿದ್ದರೂ ಪರವಾ ಗಿಲ್ಲ, ಆಧಾರ್ ಸಂಖ್ಯೆಯನ್ನೇ ನಮೂದಿಸಿ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಬಹುದು. ಎಲ್ಲೆಲ್ಲಿ ಪ್ಯಾನ್ ನಮೂದಿಸಬೇಕೋ ಅಲ್ಲೆಲ್ಲಾ ಆಧಾರ್ ಸಂಖ್ಯೆ ಕೊಟ್ಟರೆ ಸಾಕು ಎಂದು ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿ ಸಿದ್ದರು. ಈ ಹಿನ್ನೆಲೆಯಲ್ಲಿ ಪ್ಯಾನ್ ಬದಲಿಗೆ ಆಧಾರ್ ಅನ್ನು ಮಾತ್ರವೇ ಸರ್ಕಾರ ಮುಂದುವರಿಸಬಹುದು ಎಂಬ ವಾದಗಳು ಕೇಳಿಬಂದಿದ್ದವು.