ತೆರಿಗೆ ರೀಫಂಡ್ ತಡವಾಗಲು ಈ ಹಿಂದಿನ ಬಾಕಿ ಕಾರಣ, ಬೇಗ ಪ್ರತಿಕ್ರಿಯಿಸಿ: ತೆರಿಗೆದಾರರಿಗೆ ಐಟಿ ಇಲಾಖೆ ಸೂಚನೆ

ಆದಾಯ ತೆರಿಗೆ ರೀಫಂಡ್ ನೀಡಲು ಆದಾಯ ತೆರಿಗೆ ಇಲಾಖೆ ನಿರಾಕರಿಸುತ್ತಿರುವ ಬಗ್ಗೆ ತೆರಿಗೆದಾರರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಐಟಿ ಇಲಾಖೆ, ಹಳೆಯ ತೆರಿಗೆ ಬಾಕಿ ಬಗ್ಗೆ ಬೇಗ ಪ್ರತಿಕ್ರಿಯಿಸುವಂತೆ ತೆರಿಗೆದಾರರನ್ನು ಒತ್ತಾಯಿಸಿದೆ. 
 

IT Refund IT Department Urges Taxpayers To Respond To Past Tax Demands Know How To Do It anu

ನವದೆಹಲಿ (ಸೆ.25):  ನ್ಯಾಯಸಮ್ಮತ ರೀಫಂಡ್  ನೀಡಲು ನಿರಾಕರಿಸುತ್ತಿರುವ ಆದಾಯ ತೆರಿಗೆ ಇಲಾಖೆ ವಿರುದ್ಧ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.  10-15 ವರ್ಷಗಳ ಹಿಂದಿನ ಬಾಕಿ ಬೇಡಿಕೆಗೆ ಸರಿಹೊಂದಿಸುವ ಮೂಲಕ ತೆರಿಗೆ ರೀಫಂಡ್ ನೀಡಲು ಆದಾಯ ತೆರಿಗೆ ಇಲಾಖೆ ನಿರಾಕರಿಸುತ್ತಿದೆ ಎಂಬುದು ತೆರಿಗೆದಾರರ ಆರೋಪವಾಗಿತ್ತು. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದ್ದು, ಕಳೆದ ವರ್ಷಗಳ ತೆರಿಗೆ ಬಾಕಿಗೆ ಸಂಬಂಧಿಸಿ ನೀಡಿರುವ ನೋಟಿಸ್ ಗೆ ಪ್ರತಿಕ್ರಿಯೆ ನೀಡುವಂತೆ ಎಕ್ಸ್ (ಟ್ವಿಟ್ಟರ್ ) ಪೋಸ್ಟ್ ಮೂಲಕ ತೆರಿಗೆದಾರರಲ್ಲಿ ಮನವಿ ಮಾಡಿದೆ. ತೆರಿಗೆದಾರರು ಒಂದೇ ಒಪ್ಪಿಕೊಳ್ಳಬೇಕು, ಇಲ್ಲವೇ ನಿರಾಕರಿಸಬೇಕು ಅಥವಾ ಬೇಡಿಕೆ ಸ್ಟೇಟಸ್ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಹೀಗಿರುವಾಗ ಈ ಹಿಂದಿನ ವರ್ಷಗಳಲ್ಲಿರುವ ಬೇಡಿಕೆ ಗಮನಿಸಿ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಇದು ತೆರಿಗೆದಾರರ ಸ್ನೇಹಿ ಕ್ರಮವಾಗಿದ್ದು, ನೈರ್ಸಗಿಕ ನ್ಯಾಯದ ನೀತಿಗಳಿಗೆ ಅನುಗುಣವಾಗಿ ಈ ಅವಕಾಶ ನೀಡಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ ಕೂಡ.

ಪ್ರಸ್ತುತವಿರುವ ಬೇಡಿಕೆಗೆ ರೀಫಂಡ್ ಹೊಂದಾಣಿಕೆ ಮಾಡುವ ಮುನ್ನ ಈ ಬಗ್ಗೆ ಸ್ಪಷ್ಟನೆ ನೀಡಲು ತೆರಿಗೆದಾರರಿಗೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 245(1) ಅಡಿಯಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ ತೆರಿಗೆದಾರರು ಈ ಅವಕಾಶ ಬಳಸಿಕೊಂಡು ಬಾಕಿಯಿರುವ ಬೇಡಿಕೆಗಳನ್ನು ಮರುಹೊಂದಾಣಿಕೆ ಮಾಡಬೇಕು ಹಾಗೂ ಆ ಮೂಲಕ ರೀಫಂಡ್ ಗಳನ್ನು ಸಮಯಕ್ಕೆ ಸರಿಯಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತೆರಿಗೆ ಇಲಾಖೆ ತಿಳಿಸಿದೆ. ಸರ್ಕಾರದ ಮಾಹಿತಿ ಅನ್ವಯ 2022-23ನೇ ಹಣಕಾಸು ಸಾಲಿಗೆ ಈ ತನಕ 7.09 ಕೋಟಿ ಆದಾಯ ತೆರಿಗೆ ರಿಟರ್ನ್ ಗಳನ್ನು ಫೈಲ್ ಮಾಡಲಾಗಿದೆ. 6.46 ಕೋಟಿ ರಿಟರ್ನ್ಸ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. ಹಾಗೆಯೇ 2.75 ಕೋಟಿ ರೀಫಂಡ್ ರಿಟರ್ನ್ಸ್ ವಿತರಿಸಲಾಗಿದೆ. 

ಆದಾಯ ತೆರಿಗೆ ರೀಫಂಡ್‌ಗೆ ಕಾಯ್ತಿದ್ದೀರಾ..? ನಿಮಗೂ ಈ ರೀತಿ ಸಂದೇಶ ಬರ್ಬೋದು ಎಚ್ಚರ!

ಬಾಕಿ ತೆರಿಗೆ ಬೇಡಿಕೆಗಳು ಅಂದ್ರೇನು?
ನೀವು ನಿಮ್ಮ ರಿಟರ್ನ್ಸ್ ಫೈಲ್ ಮಾಡಿದ ಬಳಿಕ ಆದಾಯ ತೆರಿಗೆ ಇಲಾಖೆ ನಿಮ್ಮ ತೆರಿಗೆ ಘೋಷಣೆಯನ್ನು ಪರಿಶೀಲಿಸುತ್ತದೆ. ಒಂದು ವೇಳೆ ಅದರಲ್ಲಿ ನಿಮ್ಮ ನೈಜ್ಯ ತೆರಿಗೆ ಜವಾಬ್ದಾರಿಗೆ ಯಾವುದೇ ಹೊಂದಾಣಿಕೆ ಕಂಡುಬಾರದಿದ್ದರೆ ಆಗ ನಿಮಗೆ ನೋಟಿಸ್ ನೀಡಲಾಗುತ್ತದೆ. 

ಬಾಕಿ ತೆರಿಗೆ ಬೇಡಿಕೆಗೆ ಪ್ರತಿಕ್ರಿಯಿಸೋದು ಹೇಗೆ?
ಆದಾಯ ತೆರಿಗೆ ಇಲಾಖೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಬಾಕಿ ಉಳಿದಿರುವ ತೆರಿಗೆ ಬೇಡಿಕೆಗಳಿಗೆ ಸ್ಪಂದಿಸೋದು ಹೇಗೆ ಎಂಬ ಬಗ್ಗೆ ನೋಟಿಸ್ ನೀಡಿದೆ. 
*ಮೊದಲಿಗೆ ತೆರಿಗೆದಾರರು ಆದಾಯ ತೆರಿಗೆ ಇಲಾಖೆ ಅಧಿಕೃತ  ಇ-ಫೈಲಿಂಗ್ ಪೋರ್ಟಲ್ https://www.incometax.gov.in/iec/foportal/ ಭೇಟಿ ನೀಡಿ.
*ಇ-ಫೈಲ್ ಮೆನು ಅಡಿಯಲ್ಲಿ ತೆರಿಗೆದಾರರು 'Response to Outstanding Demand'ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
*ಆಗ ಸ್ಕ್ರೀನ್ ಮೇಲೆ ತೆರಿಗೆದಾರರಿಗೆ ಪ್ರತಿಕ್ರಿಯೆ ಆಯ್ಕೆಗಳ ಪಟ್ಟಿ ಕಾಣಿಸುತ್ತದೆ. ಅವರು ಈ ಕೆಳಗಿನ ಆಯ್ಕೆಗಳಿಂದ ಆಯ್ಕೆ ಮಾಡಬಹುದು.
ಎ) ಬೇಡಿಕೆ ಸರಿಯಾಗಿದೆ
ಬಿ) ಬೇಡಿಕೆ ಭಾಗಶಃ ಸರಿಯಾಗಿದೆ
ಸಿ) ಬೇಡಿಕೆಗೆ ಸಮ್ಮತಿ ಇಲ್ಲ
ಡಿ) ಬೇಡಿಕೆ ಸರಿಯಾಗಿಲ್ಲ ಆದರೆ ಹೊಂದಾಣಿಕೆಗೆ ಸಮ್ಮತಿಯಿದೆ.

ಈ ವರ್ಷ ದಾಖಲೆಯ 6.5 ಕೋಟಿ ಐಟಿ ರಿಟರ್ನ್ಸ್‌ ಸಲ್ಲಿಕೆ: 14302 ಕೋಟಿ ಮೌಲ್ಯದ ಜಿಎಸ್ಟಿ ವಂಚನೆ ಪತ್ತೆ

ಪ್ರತಿಕ್ರಿಯೆ ಸಲ್ಲಿಕೆ ಮಾಡಿ: ಆಯ್ಕೆ ಮಾಡಿದ ಪ್ರತಿಕ್ರಿಯೆಗೆ ಅನುಗುಣವಾಗಿ, ತೆರಿಗೆದಾರರು ಪೋರ್ಟಲ್ ನಲ್ಲಿ ನೀಡಿರುವ ಸೂಚನೆಗಳನ್ನು ಅನುಸರಿಸಬೇಕು. ಒಂದು ವೇಳೆ ತೆರಿಗೆದಾರರು 'ಬೇಡಿಕೆ ಸರಿಯಾಗಿದೆ' ಎಂದು ಆಯ್ಕೆ ಮಾಡಿದರೆ, ಆಗ ಅವರು ತಮ್ಮ ಆಯ್ಕೆ ದೃಢೀಕರಿಸಲು 'Submit'ಬಟನ್ ಮೇಲೆ ಕ್ಲಿಕ್ ಮಾಡಬೇಕು ಹಾಗೂ ಪ್ರತಿಕ್ರಿಯೆ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. 

ಇನ್ನು ತೆರಿಗೆದಾರರು 'ಬೇಡಿಕೆ ಸರಿಯಾಗಿದೆ' ಎಂಬ ಆಯ್ಕೆ ಮಾಡಿದರೆ, ಆ ಬಳಿಕ ಬೇಡಿಕೆ ಜೊತೆಗೆ ಅಸಮ್ಮತಿ ಸೂಚಿಸಲು ಯಾವುದೇ ಆಯ್ಕೆ ಇರೋದಿಲ್ಲ. ಹಾಗೆಯೇ 'Pay Tax' ಆಯ್ಕೆ ಅಡಿಯಲ್ಲಿರುವ ಲಿಂಕ್ ಕ್ಲಿಕ್ ಮಾಡುವಾಗ ಮೂಲಕ ಬೇಡಿಕೆಯನ್ನು ಪಾವತಿಸಲು ಕೂಡ ಅವಕಾಶವಿದೆ.  
 

Latest Videos
Follow Us:
Download App:
  • android
  • ios