ಇಸ್ರೇಲ್‌ನಲ್ಲಿ ಕರೆನ್ಸಿ ಕುಸಿತ, ಭಾರತೀಯ ರೂಪಾಯಿ ಮೌಲ್ಯವೂ ಕುಸಿತ!
ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದ ಪರಿಣಾಮ ಆ ಎರಡು ದೇಶಗಳ ಕರೆನ್ಸಿ ಮಾತ್ರವಲ್ಲ, ಅಲ್ಲಿನ ಭಾರತೀಯ ಕರೆನ್ಸಿ ಮೌಲ್ಯ ಕೂಡ ಕುಸಿತ ಕಂಡಿದೆ.
ಸಂದೀಪ್ ವಾಗ್ಲೆ
ಮಂಗಳೂರು (ಅ.11): ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದ ಪರಿಣಾಮ ಆ ಎರಡು ದೇಶಗಳ ಕರೆನ್ಸಿ ಮಾತ್ರವಲ್ಲ, ಅಲ್ಲಿನ ಭಾರತೀಯ ಕರೆನ್ಸಿ ಮೌಲ್ಯ ಕೂಡ ಕುಸಿತ ಕಂಡಿದೆ. ಯುದ್ಧ ಆರಂಭ ಆಗುವ ಮೊದಲು ರುಪಾಯಿ ವಿನಿಮಯ ದರ 21.51 ಇತ್ತು. ಎರಡೇ ದಿನದಲ್ಲಿ 21.05ಕ್ಕೆ ಕುಸಿದಿದೆ. ಯುದ್ಧ ಅಥವಾ ಯುದ್ಧದ ಪರಿಣಾಮದಿಂದ ರುಪಾಯಿ ಮೌಲ್ಯ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಅಲ್ಲಿನ ಭಾರತೀಯರು ತಿಳಿಸಿದ್ದಾರೆ.
ಅಂಬಾನಿ, ಟಾಟಾ, ಪೆಪ್ಸಿಕೋ, ಕೋಕಾಕೋಲಾಗೆ ಎದುರಾಳಿ 7000 ಕೋಟಿ ರೂ. ಕಂಪನಿಗೆ ವಾರಸುದಾರೆ ಈಕೆ
50 ವರ್ಷ ಹಿಂದೆಯೂ ಹಬ್ಬದಂದೇ ದಾಳಿ!: ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಸಂಘರ್ಷ ನಿರಂತರ ಆಗಿದ್ದರೂ ಇಸ್ರೇಲ್‌ನ ಯಹೂದಿಗಳ ಹಬ್ಬದ ದಿನ(ಸೂಪರ್‌ನೋವಾ ಫೆಸ್ಟಿವಲ್)ವನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದು ಇದೇ ಮೊದಲಲ್ಲ. 50 ವರ್ಷಗಳ ಹಿಂದೆ ಇದೇ ಹಬ್ಬದ ದಿನವೇ ಇಸ್ರೇಲ್ ಮೇಲೆ ದಾಳಿ ನಡೆಸಲಾಗಿತ್ತು. ಯಹೂದಿಗಳ ಹಬ್ಬ ಕೆಲ ದಿನಗಳ ಕಾಲ ನಡೆಯುತ್ತದೆ. ಈ ಬಾರಿ ಹಬ್ಬದ ಕೊನೆಯ ದಿನ ದಾಳಿ ನಡೆದಿದ್ದರೆ, 50 ವರ್ಷಗಳ ಹಿಂದೆ ಹಬ್ಬದ ಆರಂಭದ ದಿನ ಇಸ್ರೇಲನ್ನು ಟಾರ್ಗೆಟ್ ಮಾಡಿ ದಾಳಿ ನಡೆದಿತ್ತು ಎಂದು ಹಲವು ಸಮಯ ಇಸ್ರೇಲ್‌ನಲ್ಲಿ ವಾಸವಾಗಿದ್ದ, ಬೆಳ್ತಂಗಡಿಯ ಆಂಟನಿ ಫರ್ನಾಂಡಿಸ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಕರಾವಳಿಗರೆಲ್ಲರೂ ಸೇಫ್: ಇಸ್ರೇಲ್‌ನಲ್ಲಿರುವ ಕರಾವಳಿ ಮೂಲದವರು ಹೆಚ್ಚಿನವರು ಪರಸ್ಪರ ಸಂಪರ್ಕದಲ್ಲಿದ್ದು, ಯಾರೂ ಅಪಾಯಕ್ಕೆ ಸಿಲುಕಿಲ್ಲ. ಎಲ್ಲರೂ ಸೇಫ್ ಆಗಿದ್ದಾರೆ. ಯುದ್ಧ ನಡೆಯುತ್ತಿರುವುದು ಗಡಿ ಪ್ರದೇಶದಲ್ಲಿ, ಅಲ್ಲಿ ಕರಾವಳಿಯವರು ಇಲ್ಲ. ಹೆಚ್ಚಿನವರು ಇಸ್ರೇಲ್‌ನ ಮಧ್ಯ ಪ್ರದೇಶದ ವಿವಿಧ ಭಾಗಗಳಲ್ಲಿ ವಾಸವಾಗಿದ್ದಾರೆ.
ಸ್ಟೋರ್ ಮ್ಯಾನೇಜರ್ ವೃತ್ತಿ ಬದುಕಿನಿಂದ ವಿದೇಶಿ ಕಂಪೆನಿ ಸಿಇಓ ಹುದ್ದೆಗೇರಿದ ಚೆನ್ನೈ ಮಹಿಳೆಯ ತಿಂಗಳ ವೇತನ 11 ಕೋಟಿ!
ಅಂಗಡಿ ಎಲ್ಲ ಓಪನ್, ಜನ ಓಡಾಡಲ್ಲ: ‘ಗಡಿ ಪ್ರದೇಶ ಹೊರತುಪಡಿಸಿ ಇಸ್ರೇಲ್‌ನ ಇತರ ಪ್ರದೇಶಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೂ ಎಚ್ಚರಿಕೆ ಕ್ರಮವಾಗಿ ಮನೆಯಿಂದ ಅನಗತ್ಯವಾಗಿ ಹೊರಬಾರದಂತೆ ಸರ್ಕಾರ ತಿಳಿಸಿದೆ. ಹಲ್ಪರ್‌ಸ್ಟ್ರೀಟ್ ಪ್ರದೇಶದಲ್ಲಿ ಯುದ್ಧದ ಮೊದಲ ದಿನ ಸರ್ಕಾರದ ಎಚ್ಚರಿಕೆಯ ಸೈರನ್‌ಗಳು ಕೇಳುತ್ತಿದ್ದವು. ನಂತರ ಆ ಪರಿಸ್ಥಿತಿ ಇರಲಿಲ್ಲ. ಹೊರಗೆ ಅಂಗಡಿಗಳೆಲ್ಲ ತೆರೆದಿವೆ. ಸರ್ಕಾರ ಮುನ್ನೆಚ್ಚರಿಕೆ ನೀಡಿದ್ದರಿಂದ ರಸ್ತೆಗಳಲ್ಲಿ ಜನಸಂಚಾರ ಮಾತ್ರ ತೀರ ಕಡಿಮೆಯಾಗಿದೆ’ ಎಂದು ಬೆಳ್ತಂಗಡಿ ಮೂಲದ ಪ್ರೇಮ್ ಜೈಸನ್ ವೇಗಸ್ ಹೇಳಿದರು. ನನ್ನ ಸಂಪರ್ಕದಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಇದ್ದಾರೆ. ಯಾರೂ ತೊಂದರೆಯಲ್ಲಿಲ್ಲ ಎಂದೂ ಅವರು ತಿಳಿಸಿದ್ದಾರೆ.