ತಮ್ಮದೇ ಸೂರು ಕಟ್ಟಿಕೊಳ್ಳುವ ಕನಸು ಈಡೇರುವ ಅನುಭವ ಅವರ್ಣನೀಯ. ಕಟ್ಟಿಕೊಂಡ ಸೂರು ಸುದೀರ್ಘ ಕಾಲದವರೆಗೂ ಶಕ್ತಿಯುತವಾಗಿರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಹೊಣೆ. ಮನೆ ಮಾಲೀಕರು ಎದುರಿಸುವ ಸಮಸ್ಯೆ ಬಗ್ಗೆ ಮಾತನಾಡಿಸಿದಾಗ ಸಾಮಾನ್ಯವಾಗಿ ಬಂದ ಉತ್ತರ ಮನೆಯ ಗೋಡೆ ಮತ್ತು ಚಾವಣಿಗೆ ಹಾನಿಯಾಗದಂತೆ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು ಎಂದು ಉತ್ತರ ಬಂದಿವೆ. ಇದು ನೀರು ಲೀಕ್ ಆಗುವಂತೆ ಮಾಡಿ, ಮನೆ ಮಾಲೀಕರನ್ನು ಹೈರಾಣವಾಗುವಂತೆ ಮಾಡುತ್ತಿವೆ. ಮನೆ ಸೋರಿಕೆಯಿಂದ ಆದ ಕಲೆಗೆ ಕೇವಲ ಪೇಂಟ್ ಮಾಡುವುದು ಪರಿಹಾರವೇ ಎಂದು ನಮ್ಮ ಅನೇಕರ ಓದುಗರು ಪ್ರಶ್ನಿಸುತ್ತಾರೆ. ಕಲೆ ಮುಚ್ಚಲು ಪೇಂಟ್ ಹೊಡೆಯುವುದು ನೆರವಾಗಬಹುದು. ಆದರೆ, ನಮ್ಮ ಒಳಾಂಗಣ ತಜ್ಞರು ಇದಕ್ಕೆ ಹೇಳುವ ಉತ್ತರವೇ ಬೇರೆ. 

'ಗೋಡೆಯ ಪ್ಯಾಚ್ ಮತ್ತು ಕಲೆ ಮೇಲೆ ಬಣ್ಣ ಹೊಡೆಯುವುದು ಸಮಸ್ಯೆಗೆ ಕಂಡು ಕೊಳ್ಳುವ ತಾತ್ಕಾಲಿಕ ಪರಿಹಾರ. 
ಆದರಿದು ನೀರು ಸೋರುವುದನ್ನು ತಡೆಯುವುದಿಲ್ಲ. ಮನೆ ಮತ್ತಷ್ಟು ಹಾಳಾಗುವುದನ್ನು ನಿಲ್ಲಿಸುವುದಿಲ್ಲ.' ನೀರು ಸೋರಿ ಆದ ಕಲೆ ಮೇಲೆ ಪೇಂಟ್ ಮಾಡುವುದು ಸಮಸ್ಯೆಗೆ ಸಿಗೋ ತುರ್ತು ಚಿಕಿತ್ಸೆ. ಆದರಿದು ಸುದೀರ್ಘ ಕಾಲದವರೆಗೆ ಪರಿಹಾರವಾಗುವುದಿಲ್ಲ. ಗೋಡೆ ಹಿಗ್ಗುವಿಕೆ ಮತ್ತು ಸಂಕೋಚನಾ ಗುಣವೇ ನೀರು ಸೋರುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಮನೆಯೊಳಗೆ ಶಾಖ ಹೆಚ್ಚುವಂತೆ ಮಾಡುತ್ತದೆ. ಇದು ಏರ್ ಕಂಡೀಷನ್ ಮತ್ತು ಕೂಲರ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಅವೂ ಬೇಗ ಹಾಳಾಗುವಂತೆ ಮಾಡುತ್ತದೆ.  ಈ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಮನೆ ಗಟ್ಟಿಮುಟ್ಟಾಗಿರುವಂತೆ ನೋಡಿಕೊಳ್ಳುವುದು. ಮೊದಲು ಮನೆಯ ಬಿರುಕನ್ನು ಸರಿಪಡಿಸಬೇಕು. ಆಮೇಲೆ ಬಣ್ಣ ಹಚ್ಚುವ ಬಗ್ಗೆ ಯೋಚಿಸಬೇಕು. 

'ಮೋಲ್ಡ್‌ನಂಥ ಸಮಸ್ಯೆಗೆ ಬಣ್ಣ ಹಚ್ಚೋದರಿಂದ ಪ್ರಯೋಜನವಿಲ್ಲ.'
ಒಂದು ಕೋಟ್ ಬಣ್ಣ ಹಚ್ಚುವುದಿಂದ ಮನೆಗಾದ ಪ್ಯಾಚ್ ಅಥವಾ ಕಲೆಯನ್ನು ಮುಚ್ಚುವಂತೆ ಮಾಡಿ, ಸೌಂದರ್ಯ ಹೆಚ್ಚಿಸಬಹುದು. ಆದರೆ, ಗೋಡೆ ನೀರು ಎಳೆದುಕೊಂಡು, ಫಂಗಸ್ ಮೂಡುವಂತೆ ಮಾಡುವ ಸಮಸ್ಯೆಗೆ ಶಾಶ್ವತ ಪರಿಹಾರವಾಗಲಾರದು. ತೆಳು ಕೋಟಿಂಗ್ ಮಾಡುವ ಪೇಂಟ್ ಉತ್ಪನ್ನಗಳಿಗೆ ಹವಾಮಾನ ವೈಪರಿತ್ಯವನ್ನು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಸಣ್ಣ ಪುಟ್ಟ ನೀರು ಸೋರುವ ಸಮಸ್ಯೆ ಇದ್ದೇ ಇರುತ್ತದೆ. ಗೋಡೆ ನೀರಿನ ಪಸೆಯನ್ನು ಹೀರಿಕೊಂಡು, ಕೊಳಕಾಗದಂತೆ ತಡೆಯಲು ಅಗತ್ಯ ಫಂಗಲ್ ಹಾಗೂ ಬ್ಯಾಕ್ಟೀರಿಯಾ ಚಿಕಿತ್ಸೆ ಕೊಡಿಸಬೇಕು. 
'ಗೋಡೆ ಮತ್ತೆ ಮತ್ತೆ ಹಾಳಾದರೆ ಮನೆಯ ಅಂದ ಕೆಡಿಸಿ, ರೀಸೇಲ್ ಮೌಲ್ಯವನ್ನು ಕಡಿಮೆ ಮಾಡುತ್ತದೆ.'

ಕಲೆಯನ್ನು ಹೋಗಿಸಲು ಗಮನ ಹರಿಸಿದರೆ, ನೀರು ಸೋರುವುದನ್ನು ತಡೆಯಲಾಗುವುದಿಲ್ಲ. ಇದನ್ನು ಸರಿ ಪಡಿಸಲು ಪದೆ ಪದೇ ಹಣ ವ್ಯಯಿಸಬೇಕಾಗುತ್ತದೆ. ಹವಾಮಾನ ವೈಪರಿತ್ಯ ತಡೆದುಕೊಳ್ಳುವ ಶಕ್ತಿ ಮನೆಗೆ ಬಣ್ಣ ಹಚ್ಚುವುದರಿಂದ ಬರುವುದಿಲ್ಲ. ಇದು ಓವರೆಡ್ ಟ್ಯಾಂಕ್ ಅಥವಾ ನೀರು ಸಂಗ್ರಹ ವ್ಯವಸ್ಥೆಯಿಂದ ನೀರು ಲೀಕ್ ಆಗುವುದನ್ನು ನಿಲ್ಲಿಸುವುದಿಲ್ಲ. ಇದರಿಂದ ಚಾವಣಿ ಮತ್ತು ಗೋಡೆಯ ಶಕ್ತಿ ಮತ್ತಷ್ಟು ಕುಂದುತ್ತದೆ. ಮನೆಯ ಮೌಲ್ಯ ಕುಸಿದು, ಮನೆಗೇ ಅಪಾಯ ತಂದೊಡ್ಡುವ ಸಾಧ್ಯತೆಯೂ ಇರುತ್ತದೆ. 

ಪೇಂಟ್ ಆರ್ ವಾಟರ್ ಫ್ರೂಫಿಂಗ್, ಗೋಡೆಗೆ ಯಾವುದು ಒಳಿತು ?

'ನೀರಿನಿಂದ ಗೋಡೆ ಹಾಗೂ ಸೀಲಿಂಗ್‌ಗೆ ಆದ ಹಾನಿ ತಡೆಯಲು ವಾಟರ್ ಪ್ರೂಫಿಂಗ್ ಸೂಕ್ತ ಹಾಗೂ ಶಾಶ್ವತ ಚಿಕಿತ್ಸೆ.'

ಗೋಡೆಗಾದ ನಷ್ಟ ಸರಿಪಡಿಸಲು ಪದೆ ಪದೇ ಬಣ್ಣ ಹಚ್ಚಲು ಹಣ ವ್ಯಯಿಸುವ ಬದಲು, ಶಾಶ್ವತ ಪರಿಹಾರಕ್ಕೆ ಮುಂದಾಗೋದು ಹೆಚ್ಚು ಸೂಕ್ತ. ಇದಕ್ಕೆ ವಾಟರ್ ಪ್ರೂಫಿಂಗ್ ಚಿಕಿತ್ಸೆ ಅಗತ್ಯ. ಚಾವಣೆಯಲ್ಲಿ ಬಿರುಕು ಸೃಷ್ಟಿಯಾಗಿ, ನೀರು ಸೋರುವುದು ಸರ್ವೇ ಸಾಮಾನ್ಯ ಸಮಸ್ಯೆ. ಇದಕ್ಕೆ ಅತ್ಯುತ್ತಮ ಪರಿಹಾರವೆಂದರೆ ಡಾ ಫಿಕ್ಸಿಟ್ ರೂಫ್‌ಸೀಲ್. ಇದು ಮನೆಯ ಗೋಡೆ ಹಾಗೂ ಚಾವಣಿಯನ್ನು ಸಂರಕ್ಷಿಸಿ, ಮನೆಯ ಸೌಂದರ್ಯವನ್ನು ಕಾಪಾಡುತ್ತದೆ. ಅಲ್ಲದೇ ಮನೆಗೆ ಯಾವುದೇ ಹಾನಿಯಾಗದಂತೆ ಕಾಪಾಡಬಲ್ಲದು. 

ಇದರಿಂದ ಮತ್ತೇನು ಉಪಯೋಗಗಳಿವೆ? 
- ಗೋಡೆಯಲ್ಲಿ ಬಿರುಕು ಮೂಡುವುದನ್ನು ತಡೆಯುತ್ತದೆ. ನೀರು ಸೋರುವುದು ನಿಲ್ಲುವಂತೆ ಮಾಡುತ್ತದೆ. 
- ಗೋಡೆ ನೀರು ಹೀರುವುದನ್ನು ನಿಯಂತ್ರಿಸುತ್ತದೆ. ಇದು ಗೋಡೆಯ ನೀರು ಹೀರಿ, ಸೃಷ್ಟಿಯಾಗುವ ಫಂಗಲ್ ಹಾಗೂ ಬ್ಯಾಕ್ಟೀರಿಯಾ ಸೋಂಕನ್ನು ತಡೆಯುತ್ತದೆ. 
- ಮನೆಯ ರಚನೆಯನ್ನು ಸಂರಕ್ಷಿಸಿ, ಶಕ್ತಿಯುತಗೊಳಿಸುತ್ತದೆ.
- ಸುದೀರ್ಘ ಕಾಲದವರೆಗೆ ಮನೆ ಗೋಡೆಯ ಸೌಂದರ್ಯವನ್ನು ಕಾಪಾಡಬಲ್ಲದು. 
-ಮನೆ ಮೇಲೆ ಬೀಳುವ ತೀವ್ರ ಶಾಖವುಳ್ಳು ಸೂರ್ಯನ ಕಿರಣಗಳನ್ನು ತಡೆ ಹಿಡಿದು, ಮನೆಯೊಳಗೆ ತಂಪಾಗಿರುವಂತೆ ನೋಡಿಕೊಳ್ಳುತ್ತದೆ. 

ಮನೆಯನ್ನು ಶಾಶ್ವತವಾಗಿ ನೀರಿನ ಸೋರಿಕೆಯಿಂದ ತಡೆಯಲು ಡಾ ಫಿಕ್ಸಿಟ್ ರೂಫ್‌ಸೀಲ್ ಅತ್ಯದ್ಭುತ ಉತ್ಪನ್ನ. ಪಿಯು ಹೈಬ್ರಿಡ್ ಕೋಟಿಂಗ್ ಇರೋ ಇದನ್ನು ನ್ಯಾನೋ ಫೈಬರ್ ತಂತ್ರಜ್ಞಾನದಿಂದ ತಯಾರಿಸಲಾಗಿದೆ. ಎಲ್ಲೆಡೆ ಸಮಾನವಾಗಿ ಹಂಚಿ ಹೋಗುವ ಇದರ ಕೋಟಿಂಗ್, ಗೋಡೆ ಹಾಗೂ ಚಾವಣಿಯ ಮೂಲೆ ಮೂಲೆಯನ್ನೂ ಸಂರಕ್ಷಿಸಬಲ್ಲದು. ಭಾರತದ ಎಲ್ಲಾ ರೀತಿಯ ಹಾವಾಮಾನಕ್ಕೂ ಹೊಂದುವಂಥ ಎಲೆಸ್ಟೋಮೆರಿಕ್ ಗುಣವನ್ನು ಹೊಂದಿರುವ ಈ ಉತ್ಪನ್ನ, ಗೋಡೆ ಹಾಗೂ ತಾರಸಿಯಲ್ಲಿ ಬಿರುಕು ಮೂಡದಂತೆ ಮಾಡಿ, ನೀರು ಸೋರದಂತೆ ತಡೆಯುತ್ತದೆ. ಶಾಖವನ್ನು ಹೀರಿಕೊಳ್ಳದೇ, ಮನೆಯಲ್ಲಿ ತಂಪಾಗಿಡಬಲ್ಲದು. 

ನಿಮ್ಮ ಸೂರನ್ನು ಸುದೀರ್ಘ ಕಾಲದವರೆಗೆ ಸೋರಿಕೆಯಾಗದಂತೆ ತಡೆದು, ಸುಂದರವಾಗಿ ಕಾಣಬೇಕೆಂದರೆ ತಜ್ಞರಿಂದ ಮನೆಗೆ ವಾಟರ ಪ್ರೂಫ್ ಚಿಕಿತ್ಸೆ ಕೊಡಿಸಿ. ನಿಮ್ಮ ಮನೆಯನ್ನು ರಕ್ಷಿಸಿಕೊಳ್ಳಿ.