*  ನ.16ರಿಂದ 18ರವರೆಗೆ ಬೆಂಗಳೂರು ಟೆಕ್‌ ಶೃಂಗ*  26ನೇ ಸಮಾವೇಶಕ್ಕೆ ‘ಟೆಕ್‌4ನೆಕ್ಸ್ಟ್‌-ಜೆನ್‌’ ಘೋಷವಾಕ್ಯ*  ದೇಶದಲ್ಲಿರುವ 100 ಯೂನಿಕಾರ್ನರ್‌ ಕಂಪನಿಗಳ ಪೈಕಿ 39 ಬೆಂಗಳೂರಿನಲ್ಲೇ ಇವೆ 

ಬೆಂಗಳೂರು(ಜೂ.09): 25ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಸಮಾವೇಶವು (ಬಿಟಿಎಸ್‌-25) ಟೆಕ್‌4ನೆಕ್ಸ್ಟ್‌-ಜೆನ್‌ ಘೋಷ ವಾಕ್ಯದೊಂದಿಗೆ ನ.16ರಿಂದ 18ರವರೆಗೆ ಅರಮನೆ ಮೈದಾನದಲ್ಲಿ ನಡೆಯಲು ಉದ್ದೇಶಿಸಿದ್ದು ಸಮಾವೇಶದ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.

‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ಯ (ಬಿಟಿಎಸ್‌) 25ನೇ ವರ್ಷದ ಸಮಾವೇಶವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಜಾಗತಿಕ ನಾವೀನ್ಯತಾ ಸಹಭಾಗಿ (ಜಿಐಎ) ರಾಷ್ಟ್ರಗಳ ಕಾನ್ಸುಲ್‌ ಜನರಲ್‌, ಡೆಪ್ಯುಟಿ ಕಾನ್ಸುಲ್‌ ಜನರಲ್‌ ಮತ್ತು ಗೌರವ ಕಾನ್ಸುಲ್‌ ಜನರಲ್‌ಗಳೊಂದಿಗೆ ಐಟಿ-ಬಿಟಿ ಸಚಿವ ಡಾ.ಸಿ.ಎನ್‌ ಅಶ್ವತ್‌ನಾರಾಯಣ ಬುಧವಾರ ಸಮಾಲೋಚನೆ ನಡೆಸಿದರು.

ರೈತರಿಗೆ ಮೋದಿ ಬಂಪರ್‌ ಕೊಡುಗೆ!

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನ.16ರಿಂದ ಮೂರು ದಿನ ಬಿಟಿಎಸ್‌-25 ಸಮಾವೇಶ ನಡೆಯಲಿದ್ದು 48ಕ್ಕೂ ಹೆಚ್ಚು ರಾಷ್ಟ್ರಗಳು ಪಾಲ್ಗೊಳ್ಳಲಿವೆ. ಈ ಸಮಾವೇಶದ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ರಾಜ್ಯವು ಈಗಾಗಲೇ 30ಕ್ಕೂ ಹೆಚ್ಚು ಜಿಐಎ ಸಹಭಾಗಿತ್ವಗಳನ್ನು ಹೊಂದಿದ್ದು, 50ಕ್ಕೂ ಹೆಚ್ಚು ಮಹತ್ವದ ಯೋಜನೆಗಳು ಪ್ರಗತಿಯಲ್ಲಿವೆ. ಅಗ್ರಿಟೆಕ್‌, ಫಿನ್ಟೆಕ್‌, ಮೆಡ್‌-ಟೆಕ್‌, ಕೃತಕ ಬುದ್ಧಿಮತ್ತೆ, ಮಷೀನ್‌ ಲರ್ನಿಂಗ್‌ ಮತ್ತು ಇಂಟರ್ನೆಟ್‌ ಆಫ್‌ ಥಿಂಗ್ಸ್‌ (ಐಒಟಿ) ಕ್ಷೇತ್ರಗಳಲ್ಲಿ ನಾವೀನ್ಯತಾ ಸಹಭಾಗಿತ್ವದ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಈಗಾಗಲೇ 40 ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಇವೆ. ಇನ್ನೂ ಹೆಚ್ಚಿನ ಕಂಪನಿಗಳ ಇಂತಹ ಕೇಂದ್ರಗಳು ಇಲ್ಲಿ ಆರಂಭಗೊಳ್ಳಬೇಕು. ಇದಕ್ಕೆ ಪೂರಕವಾಗಿ ರಾಜ್ಯವು ಸ್ಟಾರ್ಟಪ್‌ ಕರ್ನಾಟಕ, ಇನ್ನೊವೇಟ್‌ ಕರ್ನಾಟಕ ಮತ್ತು ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಶನ್‌ ತರಹದ ಉಪಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ರೆಪೋ ರೇಟ್, ಸಿಆರ್‌ಆರ್‌ ಏರಿಕೆ ಮಾಡಿದ ಆರ್‌ಬಿಐ ನಿರ್ಧಾರದಿಂದ ಆಗುವ 5 ಬದಲಾವಣೆಗಳು

ಜಾಗತಿಕ ಮಟ್ಟದ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಲೆಂದೇ ಕರ್ನಾಟಕವು 2017ರಲ್ಲೇ ಜಿಐಎ ಉಪಕ್ರಮ ಆರಂಭಿಸಿದೆ. ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿ ಇರುವ ರಾಷ್ಟ್ರಗಳೊಂದಿಗೆ ಬಹುಪಕ್ಷೀಯ ಒಪ್ಪಂದ ಮಾಡಿಕೊಳ್ಳುವ ಮೂಲಕ ರಾಜ್ಯದ ಆರ್ಥಿಕತೆಯನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ. ದೇಶದಲ್ಲಿರುವ 100 ಯೂನಿಕಾರ್ನರ್‌ ಕಂಪನಿಗಳ ಪೈಕಿ 39 ಬೆಂಗಳೂರಿನಲ್ಲೇ ಇವೆ. ಕಳೆದ ವರ್ಷ (2021-22) ಭಾರತಕ್ಕೆ 83.57 ಶತಕೋಟಿ ಡಾಲರ್‌ ವಿದೇಶಿ ನೇರ ಹೂಡಿಕೆ ಹರಿದುಬಂದಿದೆ. ಇದರಲ್ಲಿ ಶೇ.38ರಷ್ಟು ಡಿಕೆ ರಾಜ್ಯದಲ್ಲೇ ಆಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆಸ್ಪ್ರೇಲಿಯಾದ ಕಾನ್ಸುಲ್‌ ಜನರಲ್‌ ಸಾರಾ ಕಿಲ್ರ್ಯೂ, ಕೆನಡಾದ ಬೆನೊಯ್‌ಟಪ್ರಿಫೆಂಟೈನ್‌, ಡೆನ್ಮಾರ್ಕಿನ ಎಸ್ಕ್‌ಬೋ ರೋಸನ್ಬಗ್‌ರ್‍, ಫಿನ್ಲೆಂಡಿನ ಮಿಕಾ ಟಿರೋನೆನ್‌, ಫ್ರಾನ್ಸಿನ ಥಿಯರಿ ಬರ್ತೆಲೋಟ್‌, ಜರ್ಮನಿಯ ಅಕಿಂ ಬರ್ಕಾರ್ಚ್‌, ಇಸ್ರೇಲಿನ ಟ್ಯಾಮಿ ಬೆನ್ಹೈಮ್‌, ಸ್ವಿಜರ್ಲೆಂಡಿನ ಜೋನಸ್‌ ಬ್ರುನ್ಸಿವಗ್‌ ಮತ್ತು ಯುನೈಟೆಡ್‌ ಕಿಂಗ್‌ಡಮ್‌ನ ಅನ್ನಾ ಶಾಟ್ಬೋಲ್ಟ್‌ ಉಪಸ್ಥಿತರಿದ್ದರು.