* ಕರ್ನಾಟಕದ ಉದ್ದಿಮೆ ಸೆಳೆಯಲು ನೆರೆರಾಜ್ಯಗಳಿಂದ ಭರ್ಜರಿ ತಂತ್ರ* ತೆಲಂಗಾಣ ಬಳಿಕ ಈಗ ತಮಿಳುನಾಡು ಮುಕ್ತ ಆಹ್ವಾನ* ಧರ್ಮಾಧಾರಿತ ವಿಷಯ ಪ್ರಸ್ತಾಪಿಸಿ ಗಾಳ
ಹೈದರಾಬಾದ್/ಚೆನ್ನೈ(ಏ.08): ಬಂಡವಾಳ(Investment) ಹೂಡಿಕೆಯಲ್ಲಿ ದೇಶದ ಅಗ್ರಗಣ್ಯ ರಾಜ್ಯಗಳ ಪೈಕಿ ಒಂದಾಗಿರುವ ಕರ್ನಾಟಕದಿಂದ ಉದ್ಯಮಗಳು ಮತ್ತು ಉದ್ಯಮಿಗಳನ್ನು ನೇರವಾಗಿ ಸೆಳೆಯಲು ಸಾಧ್ಯವಾಗದ ನೆರೆಯ ತೆಲಂಗಾಣ(Telangana) ಮತ್ತು ತಮಿಳುನಾಡು(Tamil Nadu) ಸರ್ಕಾರಗಳು ಇದೀಗ ಹೊಸ ತಂತ್ರಕ್ಕೆ ಮೊರೆ ಹೋಗಿವೆ.
ಮೂಲಸೌಕರ್ಯ ಮತ್ತು ಇತ್ತೀಚೆಗೆ ಕರ್ನಾಟಕದಲ್ಲಿ(Karnataka) ಆರಂಭವಾಗಿರುವ ಹಿಜಾಬ್(Hijab), ಹಲಾಲ್(Halal) ಮತ್ತಿತರ ಧರ್ಮಾಧಾರಿತ ಬಹಿಷ್ಕಾರ ವಿವಾದಗಳ ಹಿನ್ನೆಲೆಯಲ್ಲಿ ಉದ್ಯಾನನಗರಿ ಬೆಂಗಳೂರಿನಲ್ಲಿರುವ(Bengaluru) ಬಂಡವಾಳ ಹೂಡಿಕೆದಾರರಿಗೆ ತಮ್ಮ ರಾಜ್ಯಕ್ಕೆ ಬರುವಂತೆ ಉಭಯ ರಾಜ್ಯಗಳು ಕರೆಕೊಟ್ಟಿವೆ.
SmartecIndia 2021: ಉದ್ದಿಮೆಗೆ ಪೂರಕ ವಾತಾವರಣ ಸೃಷ್ಟಿಗೆ ಸಿದ್ಧ: ಡಾ.ಅಶ್ವತ್ಥ
ಇತ್ತೀಚೆಗೆ ‘ಖಾತಾ ಬುಕ್’ ಎಂಬ ಬೆಂಗಳೂರು ಮೂಲದ ಸ್ಟಾರ್ಟಪ್ ಸಂಸ್ಥೆಯ ಮುಖ್ಯಸ್ಥರು ಬೆಂಗಳೂರಿನ ರಸ್ತೆ ಸೇರಿದಂತೆ ಮೂಲಸೌಕರ್ಯಗಳ ಬಗ್ಗೆ ಆಕ್ಷೇಪ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ತೆಲಂಗಾಣದ ಸಚಿವ ಕೆ.ಟಿ.ರಾಮರಾವ್ ಅವರು ತಮ್ಮ ರಾಜ್ಯಕ್ಕೆ ಬಂದರೆ ಎಲ್ಲಾ ರೀತಿಯ ಸೌಕರ್ಯ ನೀಡುವುದಾಗಿ ಕರ್ನಾಟಕದ ಉದ್ಯಮಿಗಳಿಗೆ ಟ್ವೀಟರ್‌ನಲ್ಲೇ ಆಹ್ವಾನ ನೀಡಿದ್ದರು. ಅದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಮತ್ತು ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ(Basavaraj Bommai) ಅವರೇ ತಿರುಗೇಟು ನೀಡಿದ್ದರು.
ಅದರ ಬೆನ್ನಲ್ಲೇ ಇದೀಗ ತಮಿಳುನಾಡು ಸರ್ಕಾರ ಕೂಡ ರಾಜ್ಯದ ಉದ್ಯಮಿಗಳಿಗೆ(Entrepreneurs) ಗಾಳ ಹಾಕಲು ಸಜ್ಜಾಗಿ ನಿಂತಿರುವ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡಿನ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು, ‘ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮೇಲೆ ತಮಿಳುನಾಡು ನಿಗಾ ಇರಿಸಿದೆ. ಉದ್ಯಮಗಳನ್ನು ತಮಿಳುನಾಡಿಗೆ ಸ್ಥಳಾಂತರಿಸುವ ಬಗ್ಗೆ ಮಾಹಿತಿ ತಂತ್ರಜ್ಞಾನ ಕಂಪನಿಗಳು ಒಲವು ತೋರಿಸುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರವೂ ಸಹಕಾರಕ್ಕೆ ಸಿದ್ಧವಾಗಿದೆ’ ಎಂದು ಹೇಳಿದ್ದಾರೆ.
ಇದೇ ವೇಳೆ, ಮುಖ್ಯಮಂತ್ರಿ ಸ್ಟಾಲಿನ್(Stalin) ನೇತೃತ್ವದ ಸರ್ಕಾರ ರಾಜ್ಯದಲ್ಲಿ ಹೂಡಿಕೆಯನ್ನು ಆಕರ್ಷಿಸುತ್ತಿದ್ದು, ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋಮು ಗಲಭೆಗಳಿಂದಾಗಿ(Communal Riot) ತಮ್ಮ ಉದ್ಯಮವನ್ನು ಸ್ಥಳಾಂತರಿಸಲು ಬಯಸುವ ಉದ್ಯೋಗದಾತರಿಗೆ ತಮಿಳುನಾಡು ಮುಕ್ತ ಆಹ್ವಾನ ನೀಡುತ್ತದೆ. ನೂರು ವರ್ಷಗಳ ಹಿಂದೆಯೇ ತಮಿಳುನಾಡು ಧರ್ಮವನ್ನು ಪ್ರಜಾಪ್ರಭುತ್ವಗೊಳಿಸಿದೆ. ಮೂಲಭೂತ ಮೌಲ್ಯ ವ್ಯವಸ್ಥೆಗಳು ಯಾವುದೇ ರೀತಿಯ ಮೂಲಭೂತವಾದಕ್ಕೆ ಅವಕಾಶ ನೀಡುವುದಿಲ್ಲ. ಆದ್ದರಿಂದ ತಮಿಳುನಾಡಿನಲ್ಲಿ ಆಕ್ರಮಣಕಾರಿ ಹಿಂದುತ್ವವು ರೂಪುಗೊಳ್ಳುವುದು ಅಸಾಧ್ಯ’ ಎಂದು ಹೇಳಿದ್ದಾರೆ.
ಕರ್ನಾಟಕದಿಂದ ತಮಿಳ್ನಾಡಿಗೆ ಬನ್ನಿ
ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮೇಲೆ ತಮಿಳುನಾಡು ನಿಗಾ ಇರಿಸಿದೆ. ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋಮು ಗಲಭೆಗಳಿಂದಾಗಿ ತಮ್ಮ ಉದ್ಯಮವನ್ನು ಸ್ಥಳಾಂತರಿಸಲು ಬಯಸುವ ಉದ್ಯೋಗದಾತರಿಗೆ ತಮಿಳುನಾಡು ಮುಕ್ತ ಆಹ್ವಾನ ನೀಡುತ್ತದೆ ಅಂತ ತಮಿಳುನಾಡು ವಿತ್ತ ಸಚಿವ ಪಳನಿವೇಲ್ ತ್ಯಾಗರಾಜನ್ ತಿಳಿಸಿದ್ದಾರೆ.
BTS-2021: ಸ್ಟಾರ್ಟಪ್ ಉತ್ತೇಜನಕ್ಕೆ ಬಿಯಾಂಡ್ ಸ್ಟಾರ್ಟಪ್ ಗ್ರಿಡ್, ಸಚಿವ ಅಶ್ವತ್ಥ್
ಸ್ಟಾರ್ಟ್‌ಅಪ್ ಉದ್ದಿಮೆಗಳ ಸ್ಥಾಪನೆಯಲ್ಲಿ ರಾಜ್ಯ ಮಂಚೂಣಿ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಸ್ಟಾರ್ಟ್‌ಅಪ್ ಉದ್ದಿಮೆಗಳ ಸ್ಥಾಪನೆಯಲ್ಲಿ ರಾಜ್ಯ ಮಂಚೂಣಿಯಲ್ಲಿದೆ. ಕೈಗಾರಿಕೆ ಹಾಗೂ ಉದ್ದಿಮೆ ಸ್ಥಾಪನೆ ಮಾಡಲು ಹೆಚ್ಚಿನ ಸವಲತ್ತು ಹಾಗೂ ಸಹಾಯಧನವನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನೀಡಲಾಗಿದೆ. ಮಹಿಳಾ ಉದ್ದಿಮೆದಾರರಿಗೆ ಆರ್ಥಿಕ ಸಹಾಯವನ್ನು ಘೋಷಿಸಲಾಗಿದೆ. ಹುಬ್ಬಳ್ಳಿ ನಗರದಲ್ಲಿ ಎಫ್.ಎಂ.ಸಿಜಿ ಕ್ಲಸ್ಟರ್ (FMCG Cluster) ಸ್ಥಾಪನೆಗೆ ವಿಶೇಷ ಪ್ರೋತ್ಸಾಹ ನೀಡಿದ್ದು. ಒಂದು ಲಕ್ಷ ಉದ್ಯೋಗ (One Lakh Employment) ಅವಕಾಶಗಳು ಸೃಷ್ಠಿಯಾಗಲಿವೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ ನವೀನ್ ಹೋಟೆಲ್‌ನಲ್ಲಿ 'ಟೈ (TIE Hubli) ಯುವ ಉದ್ದಿಮೆದಾರರ ಸಮಾವೇಶದಲ್ಲಿ ಆಯೋಜಿಸಲಾಗಿದ್ದ "ಆನ್ ಇವನಿಂಗ್ ವಿಥ್ ಲೆಜೆಂಡ್' (On Evening With Legends) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಿಯಾಂಡ್ ಬೆಂಗಳೂರು ಆಲೋಚನೆಗೆ ಒತ್ತು ನೀಡಿದ್ದು, ಬೆಂಗಳೂರು ಹೊರತಾಗಿ ರಾಜ್ಯದ ವಿವಿಧ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಗುಜರಾತ್ ಮಾದರಿಯಲ್ಲಿ ವಿಶೇಷ ಹೂಡಿಕೆ ವಲಯವನ್ನು ಸ್ಥಾಪಿಸಿ, ರಿಯಾಯಿತಿಗಳನ್ನು ಸಹ ನೀಡಲಾಗಿದೆ. ಚೆನ್ನೈ ಬೆಂಗಳೂರು ಹಾಗೂ ಚಿತ್ರದುರ್ಗ ಹಾಗೂ ಬೆಳಗಾವಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಕೈಗಾರಿಕಾ ಟೌನ್‌ಶಿಪ್ (industrial Township) ನಿರ್ಮಿಸಲಾಗುವುದು ಎಂದರು.
