ಹೂಡಿಕೆ ಮಾಡಿ ಅಂತಾ ಮೋದಿ ಹೇಳೊದು ಇದ್ಕೆನಾ?: ಸೆನ್ಸೆಕ್ಸ್ ಝೇಂಕರಿಸುತ್ತಿದೆ!

First Published 27, Jul 2018, 2:37 PM IST
Investors rejoice as Sensex, Nifty hit all-time high today
Highlights

ಐದನೇ ದಿನವೂ ಕೇಳಿಸುತ್ತಿದೆ ಸೆನ್ಸೆಕ್ಸ್ ಗೂಳಿ ಕೂಗು

ಶುಕ್ರವಾರವೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಸೆನ್ಸೆಕ್ಸ್

37,272.86 ಅಂಕಗಳ ಗರಿಷ್ಠ ಮಟ್ಟ ತಲುಪಿದ ಸೆನ್ಸೆಕ್ಸ್

11,237.45 ಅಂಕಗಳ ಮಟ್ಟ ತಲುಪಿದ ನಿಫ್ಟಿ

 

ಮುಂಬೈ(ಜು.27): ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ ಇಂದೂ ಕೂಡ ಏರುಗತಿಯಲ್ಲೇ ಸಾಗುತ್ತಿದೆ. ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 300 ಅಂಕಗಳ ಜಿಗಿತ ಕಾಣುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.

ಇಂದು ಬೆಳಗಿನ ಆರಂಭಿಕ ವಹಿವಾಟಿನಲ್ಲಿ 300 ಅಂಕಗಳ ಏರಿಕೆ ಕಾಣುವ ಮೂಲಕ 37,272.86 ಅಂಕಗಳ ಮಟ್ಟವನ್ನು ತಲುಪಿತು. ಇದೇ ವೇಳೆ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 77 ಅಂಕಗಳ ಮುನ್ನಡೆಯನ್ನು ದಾಖಲಿಸಿ 11,237.45 ಅಂಕಗಳ ಮಟ್ಟವನ್ನು ತಲುಪಿತು.

ಕಳೆದ ಐದು ದಿನಗಳ ನಿರಂತರ ಗೆಲುವಿನ ಓಟದಲ್ಲಿ ಸೆನ್ಸೆಕ್ಸ್ ಒಟ್ಟು 633.41 ಅಂಕಗಳನ್ನು ಸಂಪಾದಿಸಿದೆ. ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ಸ್ಥಿರತೆಯ ವಾತಾವರಣ ನೆಲೆಸಿರುವುದು ಮತ್ತು ವಿದೇಶಿ ಬಂಡವಾಳದ ಒಳಹರಿವಿನಲ್ಲಿ ದೃಢತೆ ಷೇರು ಮಾರುಕಟ್ಟೆಯ ದಾಖಲೆ ಜಿಗಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಇಂದಿನ ಆರಂಭಿಕ ವಹಿವಾಟಿನಲ್ಲಿ ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್‌, ಹೀರೋ ಮೋಟೋ ಕಾರ್ಪ್, ಬಜಾಜ್‌ ಆಟೋ, ಏಷ್ಯನ್‌ ಪೇಂಟ್, ಕೋಟಕ್ ಬ್ಯಾಂಕ್‌, ವಿಪ್ರೋ ಮುಂತಾದ ಸಂಸ್ಥೆಗಳ ಷೇರುಗಳು ಶೇ.3ರ ಏರಿಕೆಯನ್ನು ದಾಖಲಿಸಿವೆ. ಇದೇ ವೇಳೆ ಡಾಲರ್‌ ಎದುರು ರೂಪಾಯಿ ಮೌಲ್ಯ ಇಂದಿನ ಆರಂಭಿಕ ವಹಿವಾಟಿನಲ್ಲಿ 6 ಪೈಸೆಯಷ್ಟು ಸುಧಾರಿಸಿ 68.60 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿದೆ.

loader