LIC Jeevan Labh policy:ಈ ಯೋಜನೆಯಲ್ಲಿ ದಿನಕ್ಕೆ ಕೇವಲ 8ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 17ಲಕ್ಷ ರೂ.!
ಭಾರತೀಯರ ವಿಶ್ವಾಸನೀಯ ಹೂಡಿಕೆ ಸಂಸ್ಥೆಗಳಲ್ಲಿ ಎಲ್ ಐಸಿ ಕೂಡ ಒಂದು. ಎಲ್ಐಸಿ ಈ ಒಂದು ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ್ರೆ ವಿಮೆ ಜೊತೆ ಸಾಲ ಸೌಲಭ್ಯ, ಆದಾಯ ತೆರಿಗೆ ವಿನಾಯ್ತಿ ಸೇರಿದಂತೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದ್ರೆ ಆ ಯೋಜನೆ ಯಾವುದು? ಇಲ್ಲಿದೆ ಮಾಹಿತಿ
ಭಾರತೀಯ ಜೀವ ವಿಮಾ ನಿಗಮ (LIC) ಎಲ್ಲ ವಯೋಮಾನದ ಜನರಿಗೂ ವಿವಿಧ ಹೂಡಿಕೆ ಯೋಜನೆಗಳನ್ನು(Investment Schemes) ಪರಿಚಯಿಸುತ್ತ ಬಂದಿದೆ. ವ್ಯಕ್ತಿಯ ವಯಸ್ಸು(Age),ಆದಾಯ(Income) ಹಾಗೂ ಉದ್ದೇಶವನ್ನು ಆಧರಿಸಿ ಎಲ್ಐಸಿಯ ಯೋಜನೆಗಳು ರೂಪುಗೊಂಡಿರುತ್ತವೆ. ಹೂಡಿಕೆಯ(Investment) ವಿಷಯಕ್ಕೆ ಬಂದ್ರೆ ಇಂದಿಗೂ ಭಾರತೀಯರ ವಿಶ್ವಾಸನೀಯ ಸಂಸ್ಥೆ ಎಲ್ಐಸಿ (LIC) ಎಂದೇ ಹೇಳಬಹುದು. ಎಲ್ಐಸಿಯ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ನಿಮಗೆ ಕೇವಲ ವಿಮೆ ಮಾತ್ರವಲ್ಲ, ಇತರ ಅನೇಕ ಪ್ರಯೋಜನಗಳು ಸಿಗುತ್ತವೆ. ಕಡಿಮೆ ಹಣಕ್ಕೆ ಉತ್ತ ರಿಟರ್ನ್ಸ್(Returns) ಕೂಡ ಸಿಗುತ್ತದೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಎಲ್ಐಸಿ ಅನುಕೂಲಕರವಾದ ಪ್ರೀಮಿಯಂ ನಿಗದಿಪಡಿಸಿರುತ್ತದೆ ಕೂಡ. ನೀವು ಹೂಡಿಕೆ ಮಾಡಲು ಯೋಚಿಸುತ್ತಿದ್ರೆ ಎಲ್ಐಸಿಯ ಈ ಒಂದು ಯೋಜನೆ ಬಗ್ಗೆ ಮಾತ್ರ ತಪ್ಪದೇ ತಿಳಿದುಕೊಳ್ಳಬೇಕು. ಈ ಯೋಜನೆ ವಿಮೆ(Insurance) ಹೊರತುಪಡಿಸಿ ಹೂಡಿಕೆದಾರರಿಗೆ ಇನ್ನೂ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಅಂದ ಹಾಗೇ ಇದರ ಹೆಸರು ಹೆಸರು ಜೀವನ್ ಲಾಭ್ ಪಾಲಿಸಿ (Jeevan Labh policy ).
ತಿಂಗಳಿಗೆ ಕೇವಲ 233ರೂ. ಪಾವತಿಸಿದ್ರೆ 17ಲಕ್ಷ ರೂ.!
ಜೀವನ್ ಲಾಭ್ ಪಾಲಿಸಿ ನಿಮಗೆ 17ಲಕ್ಷ ರೂ. ಗಳಿಸೋ ಅವಕಾಶ ನೀಡುತ್ತದೆ. ಅದೂ ತಿಂಗಳಿಗೆ ಬರೀ 233ರೂ. ಪಾವತಿಸೋ ಮೂಲಕ. ಅಂದ್ರೆ ದಿನಕ್ಕೆ ನೀವು ಪಾವತಿಸೋ ಹಣ 8ರೂ.ಗಿಂತಲೂ ಕಡಿಮೆ. ಇನ್ನು ಈ ಪಾಲಿಸಿ ನಾನ್ ಲಿಂಕ್ಡ್ ಸ್ಕೀಮ್ (non-linked scheme)ಆಗಿದ್ದು ಷೇರುಗಳು(Shares) ಅಥವಾ ಮ್ಯೂಚ್ಯುವಲ್ ಫಂಡ್ ಗಳ(Mutual Funds) ರಿಟರ್ನ್ಸ್ ಮೇಲೆ ಆಧರಿತವಾಗಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದಾದ ಅತ್ಯಂತ ಸುರಕ್ಷಿತ ಯೋಜನೆ ಇದಾಗಿದೆ.
LIC Stake: ಇಂಡಸ್ ಇಂಡ್ ಬ್ಯಾಂಕಿನಲ್ಲಿ ಎಲ್ಐಸಿ ಷೇರು ಹೆಚ್ಚಳಕ್ಕೆ ಆರ್ ಬಿಐ ಅನುಮತಿ
ವಯಸ್ಸಿನ ಮಿತಿ ಎಷ್ಟು?
ಈ ಪಾಲಿಸಿಯಲ್ಲಿ ಕನಿಷ್ಠ 8ರಿಂದ ಗರಿಷ್ಠ 59 ವರ್ಷಗಳ ವಯೋಮಾನದವರು ಹೂಡಿಕೆ ಮಾಡಬಹುದು. 16ರಿಂದ 25ವರ್ಷಗಳ ಅವಧಿಗೆ ಪಾಲಿಸಿ ಮಾಡಿಸಬಹುದು. ಆದ್ರೆ ಇದ್ರಲ್ಲಿ ಎಷ್ಟೇ ಮೊತ್ತದ ಪಾಲಿಸಿ ಮಾಡಬೇಕೆಂಬ ನಿಯಮವಿಲ್ಲ. ಅಂದ್ರೆ ಪಾಲಿಸಿ ಮೊತ್ತಕ್ಕೆ ಗರಿಷ್ಠ ಮಿತಿಯಿಲ್ಲ. ಆದ್ರೆ ಕನಿಷ್ಠ ಮಿತಿ 2ಲಕ್ಷ ರೂ.ಗಳಾಗಿವೆ. ಅಂದ್ರೆ ನೀವು ಎರಡು ಲಕ್ಷ ರೂ. ಹೂಡಿಕೆ ಮಾಡಲೇಬೇಕು.
ಈ ಎಲ್ಲ ಪ್ರಯೋಜನಗಳಿವೆ
ಈ ಯೋಜನೆಯಲ್ಲಿ ಹೂಡಿಕೆ(Invest) ಮಾಡಿದ ಹಣಕ್ಕೆ ಆದಾಯ ತೆರಿಗೆ ಕಾಯ್ದೆ(Income Tax Act) ಸೆಕ್ಷನ್ 80ರಡಿಯಲ್ಲಿ(80c) ತೆರಿಗೆ ವಿನಾಯ್ತಿ ಇದೆ. ಹೀಗಾಗಿ ಆದಾಯ ತೆರಿಗೆ ಉಳಿಸೋ ಮಾರ್ಗ ಹುಡುಕುತ್ತಿರೋರಿಗೆ ಈ ಯೋಜನೆ ಉತ್ತಮ ಆಯ್ಕೆ. ಇನ್ನು ಈ ಯೋಜನೆಗೆ ಮೂರು ವರ್ಷ ಪ್ರೀಮಿಯಂ(Premium) ಕಟ್ಟಿದ ಬಳಿಕ ನೀವು ನಿಮ್ಮ ಹೂಡಿಕೆ ಮೇಲೆ ಸಾಲ (Loan)ಪಡೆಯಲು ಕೂಡ ಅವಕಾಶವಿದೆ. ಎಲ್ಐಸಿ ಯೋಜನೆಗಳು ನಂಬಿಕಾರ್ಹವಾಗಿರೋ ಜೊತೆ ಉತ್ತಮ ರಿಟರ್ನ್ಸ್(Returns) ಕೂಡ ನೀಡೋ ಕಾರಣ ಸೂಕ್ತ ಸಮಯದಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ರಿಟರ್ನ್ಸ್ ಗಳಿಸಬಹುದು.
Index Of Industrial Production: ಭಾರತದ ಕೈಗಾರಿಕಾ ಉತ್ಪಾದನೆಯಲ್ಲಿ ಶೇ.3.2 ಹೆಚ್ಚಳ
ಪಾಲಿಸಿದರ ಮರಣ ಹೊಂದಿದ್ರೆ ಏನಾಗುತ್ತೆ?
ಒಂದು ವೇಳೆ ಪಾಲಿಸಿದಾರ ಆಕಸ್ಮಿಕವಾಗಿ ಮರಣ ಹೊಂದಿದ್ರೆ ಆತನ ನಾಮಿನಿ ಪಾಲಿಸಿಯ ಎಲ್ಲ ಪ್ರಯೋಜನಗಳನ್ನು ಪಡೆದುಕೊಳ್ಳಲು ಅರ್ಹನಾಗಿರುತ್ತಾನೆ. ನಾಮಿನಿಗೆ ನಿಗದಿತ ಹಣದ ಜೊತೆಗೆ ಬೋನಸ್ ಕೂಡ ನೀಡಲಾಗುತ್ತದೆ. ಒಂದು ವೇಳೆ ಪಾಲಿಸಿದಾರ ಎಲ್ಲ ಪ್ರೀಮಿಯಂಗಳನ್ನು ಭರಿಸಿದ್ದು, ಆ ಬಳಿಕ ನಿಧನ ಹೊಂದಿದರೆ ಆಗ ಆತನ ನಾಮಿನಿಗೆ ಈ ಮೇಲೆ ಹೇಳಿದ ಎಲ್ಲ ಪ್ರಯೋಜನಗಳ ಜೊತೆಗೆ ಇನ್ನೂ ಕೆಲವು ವಿಶೇಷ ಪ್ರಯೋಜನಗಳು ಸಿಗುತ್ತವೆ. ಅಂದ್ರೆ ಮರಣ ಹೊಂದಿದ ಸಂದರ್ಭದಲ್ಲಿ ನಿಗದಿಪಡಿಸಿರೋ ಹಣದ ಜೊತೆ ಹೆಚ್ಚುವರಿ ಬೋನಸ್ ಕೂಡ ನೀಡಲಾಗುತ್ತದೆ