Index Of Industrial Production: ಭಾರತದ ಕೈಗಾರಿಕಾ ಉತ್ಪಾದನೆಯಲ್ಲಿ ಶೇ.3.2 ಹೆಚ್ಚಳ

*2021ರ ಅಕ್ಟೋಬರ್ ನಲ್ಲಿ ಗಣಿಗಾರಿಕೆ ಉತ್ಪಾದನೆಯಲ್ಲಿ ಶೇ.11.4ರಷ್ಟು ಏರಿಕೆ
*ಉತ್ಪಾದನಾ ವಲಯದ ಉತ್ಪಾದನೆಯಲ್ಲಿ ಶೇ.2ರಷ್ಟು ಹೆಚ್ಚಳ
*ವಿದ್ಯುತ್ ಉತ್ಪಾದನೆಯಲ್ಲಿ ಶೇ.3.1 ಏರಿಕೆ

Index of industrial production of India grew by 3.2 percent in October says Ministry of Statistics & Program anu

ನವದೆಹಲಿ (ಡಿ.11): ಸಾಂಖ್ಯಿಕ ಹಾಗೂ ಯೋಜನಾ ಅನುಷ್ಠಾನ ಸಚಿವಾಲಯ (Ministry of Statistics & Programme Implementation) ಡಿ. 10ರಂದು ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಭಾರತದ(India) ಕೈಗಾರಿಕಾ ಉತ್ಪಾದನೆ ಸೂಚ್ಯಂಕ (IIP)ಅಕ್ಟೋಬರ್ ನಲ್ಲಿ ಶೇ.3.2ರಷ್ಟು ಪ್ರಗತಿ ದಾಖಲಿಸಿದೆ. 

ಐಐಪಿ ಪ್ರಕಾರ ಭಾರತದ ಕೈಗಾರಿಕಾ ಉತ್ಪಾದನೆ(Industrial production) 2021ರ ಅಕ್ಟೋಬರ್‌ನಲ್ಲಿ ಶೇ.3.2ರಷ್ಟು ಏರಿಕೆ ಕಂಡಿದೆ.  2020ರ ಅಕ್ಟೋಬರ್  ಕೈಗಾರಿಕಾ ಉತ್ಪಾದನೆಯಲ್ಲಿ ಶೇ. 4.5 ಏರಿಕೆ ಕಂಡುಬಂದಿತ್ತು. 2021ರ ಅಕ್ಟೋಬರ್ ನಲ್ಲಿ ಗಣಿಗಾರಿಕೆ(Minning) ಉತ್ಪಾದನೆ ಶೇ.11.4ರಷ್ಟು ಹೆಚ್ಚಳ ಕಂಡಿದೆ. ಇನ್ನು ಉತ್ಪಾದನಾ ವಲಯದ ಉತ್ಪಾದನೆಯು ಶೇ.2ರಷ್ಟು ಹೆಚ್ಚಳವಾಗಿದೆ. ಇನ್ನು ಅಕ್ಟೋಬರ್ ನಲ್ಲಿ ವಿದ್ಯುತ್(Electricity) ಉತ್ಪಾದನೆಯಲ್ಲಿ ಕೂಡ ಶೇ.3.1 ಹೆಚ್ಚಳವಾಗಿದೆ. ಕಳೆದ ಕೆಲವು ತಿಂಗಳಿಂದ ಕೈಗಾರಿಕಾ ಉತ್ಪಾದನೆಯಲ್ಲಿ ಹೆಚ್ಚಳ ಕಂಡುಬಂದಿದೆ. 

LIC Stake: ಇಂಡಸ್ ಇಂಡ್ ಬ್ಯಾಂಕಿನಲ್ಲಿ ಎಲ್ಐಸಿ ಷೇರು ಹೆಚ್ಚಳಕ್ಕೆ ಆರ್ ಬಿಐ ಅನುಮತಿ

2021ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಕೈಗಾರಿಕಾ ಉತ್ಪಾದನೆ ಸೂಚ್ಯಂಕವು 2020ರ ಇದೇ ಅವಧಿಗೆ ಹೋಲಿಸಿದ್ರೆ ಶೇ.20ರಷ್ಟು ಏರಿಕೆ ದಾಖಲಿಸಿತ್ತು. 2020ರ ಏಪ್ರಿಲ್-ಅಕ್ಟೋಬರ್ ನಡುವೆ ಕೈಗಾರಿಕಾ ಉತ್ಪಾದನಾ ಸೂಚ್ಯಂಕ 17.3ರಷ್ಟು ಇಳಿಕೆ ದಾಖಲಿಸಿತ್ತು. 2020ರ ಮಾರ್ಚ್ ಬಳಿಕ ಕೈಗಾರಿಕಾ ಉತ್ಪಾದನೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿತ್ತು. ಇದಕ್ಕೆ ಮುಖ್ಯಕಾರಣ ಕೋವಿಡ್ -19. ಕೊರೋನಾ(Corona) ಸೋಂಕು ಹರಡುವಿಕೆ ತಡೆಯೋ ಉದ್ದೇಶದಿಂದ ಸರ್ಕಾರ ಲಾಕ್ ಡೌನ್(Lockdown) ಜಾರಿಗೊಳಿಸಿತು. ಇದ್ರಿಂದ ಕೈಗಾರಿಕಾ ವಲಯದಲ್ಲಿ ಕೆಲವು ತಿಂಗಳ ಕಾಲ ಉತ್ಪಾದನೆ ಸ್ಥಗಿತಗೊಂಡಿತ್ತು. ಲಾಕ್ ಡೌನ್ ತೆರವಿನ ಬಳಿಕ ಕೂಡ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ನೌಕರರ ಬಳಕೆ ಮಿತಿ ಮೇಲೆ ನಿರ್ಬಂಧ, ಕಚ್ಚಾ ವಸ್ತುಗಳ ಪೂರೈಕೆಯಲ್ಲಿನ ವ್ಯತ್ಯಯ, ತಗ್ಗಿದ ಬೇಡಿಕೆ ಮುಂತಾದ ಕಾರಣಗಳಿಂದ ಹಲವು ತಿಂಗಳ ಕಾಲ ಕೈಗಾರಿಕಾ ವಲಯದ ಉತ್ಪಾದನೆ ಕಡಿಮೆ ಪ್ರಮಾಣದಲ್ಲೇ ಇತ್ತು. ಕೆಲವು ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ಕೂಡ ಗುರಿಯಾಗಿದ್ದವು. ಆದ್ರೆ 2021ರಲ್ಲಿ ಕೊರೋನಾ ವಿರುದ್ಧದ ಲಸಿಕೆ(Vaccination) ಅಭಿಯಾನ ಭಾರತದಲ್ಲಿ ತೀವ್ರಗೊಂಡ ಕಾರಣ ಕೈಗಾರಿಕಾ ಉತ್ಪಾದನೆ ಕೂಡ ಮರಳಿ ಹಳಿಗೆ ಬಂದಿದೆ. 

ಸೆಪ್ಟೆಂಬರ್, 2021 ರ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (Production) ಅಂದರೆ IIP ಅಂದಾಜು ಬಿಡುಗಡೆಯು ಕೈಗಾರಿಕಾ ಉತ್ಪಾದನೆಯಲ್ಲಿ ಸ್ಥಿರವಾದ ಬೆಳವಣಿಗೆಯನ್ನು ತೋರಿಸಿದೆ.  FY 2021-22 ರ ಮೊದಲ ತ್ರೈಮಾಸಿಕದಲ್ಲಿ IIP ಸರಾಸರಿ 121.3 ರಿಂದ ಎರಡನೇ ತ್ರೈಮಾಸಿಕದಲ್ಲಿ 130.2 ಕ್ಕೆ ಬೆಳೆದಿದೆ.  ಸರ್ಕಾರದ ಪ್ರಕಾರ, ಮುಂಗಾರು  ಮಳೆಯ ಹೆಚ್ಚಳ ಈ ಬಾರಿ  ಕಲ್ಲಿದ್ದಲು ಉತ್ಪಾದನೆಗೆ ಸಾಕಷ್ಟು ಅಡಚಣೆಯುಂಟು ಮಾಡಿದೆ, 

Rupee vs Dollar: 16 ತಿಂಗಳಲ್ಲೇ ದಾಖಲೆ ಕುಸಿತ ಕಂಡ ರೂಪಾಯಿ ಮೌಲ್ಯ, ಇದಕ್ಕೇನು ಕಾರಣ?

ಕೈಗಾರಿಕಾ ಉತ್ಪಾದನೆ ಸೂಚ್ಯಂಕ(IIP) ಅಂದ್ರೇನು?
ನಿಗದಿತ ಕಾಲಾವಧಿಯಲ್ಲಿ ಆರ್ಥಿಕತೆಯ ವಿವಿಧ ಕೈಗಾರಿಕಾ ಗುಂಪುಗಳ ಪ್ರಗತಿ ದರವನ್ನು ಸೂಚಿಸೋ ಸೂಚ್ಯಂಕವನ್ನು ಕೈಗಾರಿಕಾ ಉತ್ಪಾದನೆ ಸೂಚ್ಯಂಕ (IIP) ಎಂದು ಕರೆಯಲಾಗುತ್ತದೆ. ಐಐಪಿ ಸೂಚ್ಯಂಕವನ್ನು ಕೇಂದ್ರ ಸಾಂಖ್ಯಿಕ ಸಂಸ್ಥೆ (CSO) ಸಿದ್ಧಪಡಿಸುತ್ತದೆ. ಈ ಸಂಸ್ಥೆ ಕೈಗಾರಿಕಾ ವಲಯದಲ್ಲಿನ ಉತ್ಪಾದನೆಗೆ ಸಂಬಂಧಿಸಿದ ಮಾಹಿತಿಗಳನ್ನು ಕಲೆ ಹಾಕಿ ಆ ಬಳಿಕ ಅದನ್ನು ತಿಂಗಳ ಆಧಾರದಲ್ಲಿ ಪ್ರಕಟಿಸುತ್ತದೆ. ಕೈಗಾರಿಕಾ ಗುಂಪುಗಳ ಪ್ರಗತಿ ದರದ ಲೆಕ್ಕಾಚಾರಕ್ಕೆ ಅವುಗಳನ್ನು ಎರಡು ಗುಂಪುಗಳನ್ನಾಗಿ ವರ್ಗೀಕರಿಸಲಾಗಿದೆ. ಗಣಿಗಾರಿಕೆ, ಉತ್ಪಾದನೆ ಹಾಗೂ ವಿದ್ಯುತ್ ಒಳಗೊಂಡ ವಲಯ ಹಾಗೂ ಇನ್ನೊಂದು ಬಳಕೆ ಆಧಾರಿತ ವಲಯ ಅಂದ್ರೆ ಮೂಲಭೂತ ಸರಕುಗಳು, ಕ್ಯಾಪಿಟಲ್ ಸರಕುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಉತ್ಪಾದಿಸೋ ಕೈಗಾರಿಕೆಗಳು. ಕೈಗಾರಿಕಾ ಉತ್ಪಾದನಾ ಸೂಚ್ಯಂಕವು ದೇಶದ ಆರ್ಥಿಕ ಪ್ರಗತಿಯ ದರವನ್ನು ಲೆಕ್ಕ ಹಾಕಲು ಕೂಡ ನೆರವು ನೀಡುತ್ತದೆ. 

Latest Videos
Follow Us:
Download App:
  • android
  • ios