Asianet Suvarna News Asianet Suvarna News

ಇಂಟರ್‌ನೆಟ್ ಬಳಕೆಗೆ ನಿಯಂತ್ರಣವಿಲ್ಲ , ಕೇಂದ್ರ ಸರಕಾರದ ದಿಟ್ಟ ಹೆಜ್ಜೆ

ಅನೇಕ ವಾದ-ವಿವಾದ, ಚರ್ಚೆಗೆ ಕಾರಣವಾಗಿದ್ದ ನೆಟ್ ನ್ಯೂಟ್ರಾಲಿಟಿಗೆ ಭಾರತ ಸರಕಾರ ಒಪ್ಪಿಗೆ ನೀಡಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ನೀಡಿದ್ದ ಶಿಫಾರಸುಗಳನ್ನು ಕೇಂದ್ರ ದೂರಸಂಪರ್ಕ ಇಲಾಖೆ ಅಂಗೀಕರಸಿದ್ದು ವಿವರಗಳು ಮುಂದಿವೆ.

Internet to remain free and fair in India Govt approves net neutrality

ನವದೆಹಲಿ[ಜು.12]  ಮುಕ್ತ ಹಾಗೂ ಉಚಿತ ಇಂಟರ್‌ನೆಟ್‌ ಗ್ರಾಹಕರಿಗೆ ನೀಡಬೇಕು ಎಂಬ ಶಿಫಾರಸುಗಳಿರುವ ನೆಟ್‌ ನ್ಯೂಟ್ರಾಲಿಟಿಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. 2017ರ ನವೆಂಬರ್‌ ತಿಂಗಳಲ್ಲಿ ಟ್ರಾಯ್‌ ಸಲ್ಲಿಸಿದ್ದ ಶಿಫಾರಸುಗಳನ್ನು ಕೇಂದ್ರ ದೂರಸಂಪರ್ಕ ಸಚಿವಾಲಯ ಬುಧವಾರ ಅಂಗೀಕರಿಸಿದ್ದು ನೆಟ್‌ ನ್ಯೂಟ್ರಾಲಿಟಿ ತತ್ವಗಳ ಪರವಾಗಿರುವ ದೇಶಗಳ ಪೈಕಿ ಭಾರತ ಕೂಡಾ ಒಂದಾಗಲಿದೆ.

ಇಂಟರ್‌ನೆಟ್‌ ಸೇವೆಯಲ್ಲಿ ಯಾವುದೇ ತಾರತಮ್ಯ ವಾಗಬಾರದು. ಉಚಿತ ಇಂಟರ್‌ನೆಟ್‌ ಸೇವೆ ಕೊಡುವ ಕಂಪನಿಗಳು ಹಾಗೂ ಸೇವಾದಾರ ಸಂಸ್ಥೆಗಳು ಯಾವುದೇ ಸೇವೆಗಳ ಮೇಲೆ ನಿಯಂತ್ರಣ ಹೇರದೆ ಗ್ರಾಹಕರ ಹಿತ ಕಾಪಾಡಬೇಕು ಎಂದು ಟ್ರಾಯ್‌ ಶಿಫಾರಸು ಮಾಡಿತ್ತು.

ಇಂಟರ್‌ನೆಟ್‌ ಸೇವೆಯಲ್ಲಿ ಕೆಲವನ್ನು ಬ್ಲಾಕ್‌ ಮಾಡುವುದು, ಕೆಲವನ್ನು ಮಾತ್ರ ಆದ್ಯತೆಯಾಗಿಸುವುದು, ಇಂಟರ್‌ನೆಟ್‌ ವೇಗವನ್ನು ತಗ್ಗಿಸುವುದು, ಸೇವೆ ನೀಡುವ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಹೊಸ ತತ್ವ ವಿರೋಧಿಸಲಿದೆ. ಒಟ್ಟಿನಲ್ಲಿ ಮುಕ್ತ ಇಂಟರ್ ನೆಟ್ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ.

Follow Us:
Download App:
  • android
  • ios