ಡಿ.1 ರಿಂದ ಎಸ್‌ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಸ್ಥಗಿತ!  ಮೊಬೈಲ್ ನಂಬರ್ ನೋಂದಾಯಿಸಿದವರಿಗೆ ಮಾತ್ರ ಅನ್ವಯ! ಶೀಘ್ರದಲ್ಲೇ ನಿಮ್ಮ ಅಧಿಕೃತ ಮಬೈಲ್ ನಂಬರ್ ನೋಂದಾಯಿಸಿ

ನವದೆಹಲಿ(ಅ.13): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ತಮ್ಮ ಅಧಿಕೃತ ಮೊಬೈಲ್ ನಂಬರ್‌ನ್ನು ನೋಂದಣಿ ಮಾಡಿಸದಿದ್ದರೆ ಅಂತಹ ಗ್ರಾಹಕರಿಗೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ನಿಲ್ಲಿಸಲಾಗುವುದು ಎಂದು ಎಸ್‌ಬಿಐ ತಿಳಿಸಿದೆ.

ತಮ್ಮ ಅಧಿಕೃತ ಮೊಬೈಲ್ ನಂಬರ್ ನೋಂದಣಿ ಮಾಡಿಸದ ಗ್ರಾಹಕರಿಗೆ ಡಿಸ್1 ರಿಂದ ಇಂಟರ್ನೆಟ್ ಸೇವೆ ಸಿಗುವುದಿಲ್ಲ ಎಂದು ಎಸ್‌ಬಿಐ ತಿಳಿಸಿದೆ. ಈ ಕುರಿತು ಗ್ರಾಹಕರಿಗೆ ಮಾಹಿತಿ ರವಾನಿಸಿರುವ ಎಸ್‌ಬಿಐ, ತಮ್ಮ ತಮ್ಮ ಶಾಖೆಗಳಲ್ಲಿ ಗ್ರಾಹಕರು ಈ ಕೂಡಲೇ ಅಧಿಕೃತ ಮೊಬೈಲ್ ನಂಬರ್ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳಿದೆ.

ಇದಕ್ಕಾಗಿ ಡಿ.1ರ ಗಡುವು ನೀಡಿರುವ ಎಸ್‌ಬಿಐ, ನಂತರ ನೋಂದಣಿಯಾಗದ ಮೊಬೈಲ್ ನಂಬರ್‌ಗಳ ಇಂಟರ್ನೆಟ್ ಸೇವೆ ನಿಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.