ಜನವರಿಯಿಂದ ಟೀವಿ, ಫ್ರಿಜ್ ಬೆಲೆ ಶೇ.10ರವರೆಗೂ ಏರಿಕೆ!
ಜನವರಿಯಿಂದ ಟೀವಿ, ಫ್ರಿಜ್ ಬೆಲೆ ಶೇ.10ರವರೆಗೂ ಏರಿಕೆ| ಕಚ್ಚಾವಸ್ತು ಬೆಲೆ, ಸಾಗಣೆ ವೆಚ್ಚ ಹೆಚ್ಚಳ ಪರಿಣಾಮ
ನವದೆಹಲಿ(ಡಿ.28): ಹೊಸ ವರ್ಷದ ಸಂಭ್ರಮದಲ್ಲಿ ಟೀವಿ, ರೆಫ್ರಿಜರೇಟರ್‌ನಂತಹ ಗÜೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಆಲೋಚನೆ ಇದ್ದರೆ, ಡಿ.31ರೊಳಗೇ ಖರೀದಿ ಮಾಡಿಬಿಡಿ. ಏಕೆಂದರೆ ಜನವರಿಯಿಂದ ಈ ವಸ್ತುಗಳ ಬೆಲೆ ಶೇ.10ರವರೆಗೂ ಏರಿಕೆಯಾಗಲಿದೆ.
ಈ ವಸ್ತುಗಳ ಉತ್ಪಾದನೆಗೆ ಪ್ರಮುಖವಾಗಿ ಬಳಸುವ ತಾಮ್ರ, ಅಲ್ಯುಮಿನಿಯಂ ದರ ಗಣನೀಯವಾಗಿ ಏರಿಕೆಯಾಗಿದೆ. ಮತ್ತೊಂದೆಡೆ ಟೀವಿಗಳ ಒಟ್ಟು ವೆಚ್ಚದಲ್ಲಿ ಹೆಚ್ಚಿನ ಪಾಲು ಹೊಂದಿರುವ ಟೀವಿ ಪ್ಯಾನೆಲ್‌ಗಳ ದರ ಭಾರಿ ಹೆಚ್ಚಳವಾಗಿದೆ. ಇನ್ನು ಕಚ್ಚಾತೈಲ ಬೆಲೆ ಏರಿಕೆ ಪರಿಣಾಮವಾಗಿ ಪ್ಲಾಸ್ಟಿಕ್ ದರವೂ ಏರಿಕೆಯಾಗಿದೆ. ಮತ್ತೊಂದೆಡೆ ಕಚ್ಚಾತೈಲದ ದರ ಏರಿಕೆ ಪರಿಣಾಮ ಸಾಗಣೆ ವೆಚ್ಚವೂ ಏರಿಕೆಯಾಗಿದೆ. ಹೀಗಾಗಿ ಹೊಸ ವರ್ಷದಲ್ಲಿ ದರ ಏರಿಕೆ ಮಾಡದೆ ಬೇರೆ ದಾರಿಯೇ ಇಲ್ಲ ಎಂದು ಎಲ್‌ಜಿ, ಪ್ಯಾನಸೋನಿಕ್, ಥಾಮ್ಸನ್ ಮೊದಲಾದ ಕಂಪನಿಗಳು ಸ್ಪಷ್ಟಪಡಿಸಿವೆ.
ಲಾಕ್ಡೌನ್ ವೇಳೆ ಕಂಪನಿಗಳು ಮುಚ್ಚಿದ್ದ ಪರಿಣಾಮ ಟೀವಿ ಸೇರಿದಂತೆ ಕೆಲ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಬೇಕಾದ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಭಾರೀ ಇಳಿಕೆಯಾಗಿದೆ. ಅಲ್ಲದೆ ಲಾಕ್ಡೌನ್ ವೇಳೆ ಬಹುತೇಕ ಜನ ವರ್ಕ್ಫ್ರಮ್ ಹೋಮ್‌ಗೆ ಒಳಗಾಗಬೇಕಿದ್ದರಿಂದ ಟೀವಿ ಸೇರಿದಂತೆ ಕೆಲ ಉಪಕರಣಗಳ ಬೇಡಿಕೆಯೂ ಭಾರೀ ಏರಿಕೆಯಾಗಿದೆ. ಬೇಡಿಕೆ ಇದ್ದಷ್ಟುಪ್ರಮಾಣದಲ್ಲಿ ಸರಬರಾಜು ಇಲ್ಲದ ಕಾರಣ ಕೃತಕವಾಗಿ ಕೊರತೆ ಕಾಣಿಸಿಕೊಂಡಿದೆ. ಇದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.
ಭಾರತದ ಗೃಹೋಪಯೋಗಿ ವಸ್ತುಗಳ ಮಾರುಕಟ್ಟೆ2018-19ರಲ್ಲಿ 76400 ಕೋಟಿ ರು.ನಷ್ಟುಇತ್ತು. ಈ ಪೈಕಿ ಶೇ.50ರಷ್ಟುದೇಶೀಯವಾಗಿಯೇ ಉತ್ಪಾದನೆಯಾಗುತ್ತದೆ