Breaking: ಮೂರು ತಿಂಗಳ ಕನಿಷ್ಠಕ್ಕೆ ಕುಸಿದ ಡಿಸೆಂಬರ್ ಜಿಎಸ್‌ಟಿ ಕಲೆಕ್ಷನ್!
ಡಿಸೆಂಬರ್ 2024 ರಲ್ಲಿ ಭಾರತದ ಜಿಎಸ್‌ಟಿ ಕಲೆಕ್ಷನ್ ₹1.77 ಲಕ್ಷ ಕೋಟಿಗೆ ಕುಸಿದಿದೆ, ಇದು ನವೆಂಬರ್‌ಗಿಂತ 2.97% ಕಡಿಮೆ ಮತ್ತು ಕಳೆದ ಮೂರು ತಿಂಗಳಲ್ಲಿಯೇ ಕನಿಷ್ಠ. ಆದರೆ, ವಾರ್ಷಿಕವಾಗಿ 7.3% ರಷ್ಟು ಏರಿಕೆಯಾಗಿದೆ.
ನವದೆಹಲಿ (ಜ.1): ಡಿಸೆಂಬರ್ ತಿಂಗಳಿನಲ್ಲಿ ಭಾರತದ ಸರಕು ಮತ್ತು ಸೇವಾ ತೆರಿಗೆಯ ಕಲೆಕ್ಷನ್ ಕಳೆದ ಮೂರು ತಿಂಗಳಲ್ಲಿಯೇ ಕನಿಷ್ಠ ಪ್ರಮಾಣಕ್ಕೆ ಕುಸಿದಿದೆ. ಜನವರಿ 1 ರಂದು ಬಿಡುಗಡೆಯಾದ ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಡಿಸೆಂಬರ್ 2024 ರಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ (GST) ಕಲೆಕ್ಷನ್ ₹1,76,857 ಕೋಟಿಗಳಷ್ಟಿದ್ದು, ಕಳೆದ ವರ್ಷದ ಡಿಸೆಂಬರ್‌ಗೆ ಹೋಲಿಸಿದರೆ 7.3% ಹೆಚ್ಚಾಗಿದೆ.ಡಿಸೆಂಬರ್ 2023 ರಲ್ಲಿ ಒಟ್ಟು 1,66,882 ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಆದರೆ, 2024ರ ನವೆಂಬರ್ ತಿಂಗಳಿಗೆ ಹೋಲಿಸಿದರೆ, ಶೇ. 2.97ರಷ್ಟು ಕಡಿಮೆಯಾಗಿದೆ. ನವೆಂಬರ್ ತಿಂಗಳು ಮಾತ್ರವಲ್ಲ, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಜಿಎಸ್‌ಟಿ ಕಲೆಕ್ಷನ್‌ಗೆ ಹೋಲಿಸಿದರೂ, ಡಿಸೆಂಬರ್ ತಿಂಗಳ ಕಲೆಕ್ಷನ್ ಕಡಿಮೆ ಆಗಿದೆ. ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಕ್ರಮವಾಗಿ ₹1,73,240 ಕೋಟಿ, ₹1,87,346 ಕೋಟಿ ಮತ್ತು ₹1,82,269 ಕೋಟಿ ಜಿಎಸ್‌ಟಿ ಕಲೆಕ್ಷನ್ ಆಗಿದ್ದವು.
2024ರ ವರ್ಷವೊಂದರಲ್ಲಿ ಒಟ್ಟಾರೆ ₹16,33,569 ಕೋಟಿ ಜಿಎಸ್‌ಟಿ ಕಲೆಕ್ಷನ್ ಆಗಿದೆ. 2023ರ ವರ್ಷಕ್ಕೆ ಹೋಲಿಸಿದರೆ ಇದು ಶೇ. 9.10ರಷ್ಟು ಏರಿಕೆ ಎನಿಸಿದೆ. ಈ ಬೆಳವಣಿಗೆಯ ಹೊರತಾಗಿಯೂ, 2024 ರ ಆರ್ಥಿಕ ವರ್ಷದಲ್ಲಿ ಒಟ್ಟು ಯೋಜಿತ ಕಲೆಕ್ಷನ್ ಟಾರ್ಗೆಟ್‌ಗಿಂತ ಇನ್ನೂ 18.98% ನಷ್ಟು ಕಡಿಮೆಯಾಗಿದೆ.
ಗಮನಾರ್ಹವಾಗಿ, ಹಬ್ಬದ ಋತುವಿನಲ್ಲಿ (ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ) ಹಿಂದಿನ ವರ್ಷಕ್ಕಿಂತ 8.24% ಹೆಚ್ಚಿನ ಕಲೆಕ್ಷನ್ ಕಂಡಿದೆ. ಆದರೂ, ಈ ಅವಧಿಯಲ್ಲಿನ ಬೆಳವಣಿಗೆಯ ದರವು ಸತತ ನಾಲ್ಕನೇ ವರ್ಷವೂ ನಿಧಾನವಾಗುತ್ತಿದೆ. 2021 ರಲ್ಲಿ, ಹಬ್ಬದ ಋತುವಿನ ಸಂಗ್ರಹಣೆಗಳು 22.33% ರಷ್ಟು ಏರಿಕೆ ಕಂಡಿತ್ತು. ನಂತರ 2022 ರಲ್ಲಿ 19.01%, 2023 ರಲ್ಲಿ 11.95% ಮತ್ತು 2024 ರಲ್ಲಿ 8.24% ಆಗಿದೆ.
ದೇಶಿಯ ವಿಮಾನಗಳಲ್ಲಿ ಹೊಸ ಸೇವೆ ಪರಿಚಯಿಸಿ ದಾಖಲೆ ಮಾಡಿದ ಏರ್ ಇಂಡಿಯಾ, ಇದು ಉಚಿತ!
ದೇಶೀಯ ಬಳಕೆಯ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹಗಳು ವರ್ಷದಿಂದ ವರ್ಷಕ್ಕೆ 8.5% ರಷ್ಟು ಏರಿಕೆಯಾಗಿ ₹1.82 ಲಕ್ಷ ಕೋಟಿಗಳಿಗೆ ತಲುಪಿದೆ. ಮಾಸಿಕ ಆಧಾರದ ಮೇಲೆ, ಕಲೆಕ್ಷನ್‌ಗಳು ಸರಿಸುಮಾರು 2.7% ರಷ್ಟು ಕಡಿಮೆಯಾಗಿದೆ, ಅಕ್ಟೋಬರ್‌ನಲ್ಲಿ ₹1.87 ಲಕ್ಷ ಕೋಟಿ ಕಲೆಕ್ಷನ್ ಆಗಿದ್ದವು.
ಗಮನದಲ್ಲಿರಲಿ, ಹೊಸ ವರ್ಷದಲ್ಲಾಗಲಿದೆ ಈ 13 ಬದಲಾವಣೆಗಳು!