ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಹತ್ವದ ನಿರ್ಧಾರ| ದಿಢೀರ್ ಅಂತಾ ಇಂಧನ ಪೂರೈಕೆ ನಿಲ್ಲಿಸಿದ ಐಒಸಿ| ಜೆಟ್ ಏರ್‌ವೇಸ್‌ಗೆ ಇಂಧನ ಸರಬರಾಜು ಸ್ಥಗಿತಗೊಳಿಸಿದ ಐಒಸಿ| ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಜೆಟ್ ಏರ್ವೇಸ್| 

ಮುಂಬೈ(ಏ.06): ಮಹತ್ವದ ಬೆಳವಣಿಗೆಯೊಂದರಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಜೆಟ್ ಏರ್‌ವೇಸ್‌ಗೆ ಇಂಧನ ಸರಬರಾಜನ್ನು ನಿಲ್ಲಿಸಿದೆ.

ತೀವ್ರ ಆರ್ಥಿಕ ನಷ್ಟದಿಂದ ಬಳಲುತ್ತಿರುವ ಜೆಟ್ ಏರ್‌ವೇಸ್‌ಗೆ ನಿನ್ನೆ(ಶುಕ್ರವಾರ)ಯಿಂದಲೇ ಜಾರಿಗೆ ಬರುವಂತೆ ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಐಒಸಿ ತಿಳಿಸಿದೆ.

ಐಒಸಿಗೆ ಜೆಟ್ ಏರ್‌ವೇಸ್‌ಬಾಕಿ ಹಣ ನೀಡಬೇಕಿದ್ದು, ಮತ್ತಷ್ಟು ಇಂಧನ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಐಒಸಿ ಹೇಳಿದೆ.

ಆದರೆ ಈ ಕುರಿತು ಜೆಟ್ ಏರ್‌ವೇಸ್ ಸಂಸ್ಥೆ ವತಿಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಂಸ್ಥೆ ಹಣಕಾಸು ಮುಗ್ಗಟ್ಟು ಎದುರಿಸುತ್ತಿದ್ದು, ನಿಗದಿತ ಹಣ ಬಿಡುಗಡೆ ಖಾತ್ರಿಪಡಿಸಿಕೊಳ್ಳಲು ಲೇವಾದೇವಿದಾರರಿಂದ ಒಪ್ಪಂದ ಮಾಡಿಕೊಂಡಿದೆ.