Asianet Suvarna News Asianet Suvarna News

ಮೋದಿ ಕರೆದ ದಿಢೀರ್ ಸಭೆ: ರೆಡಿಯಾಗಿ ಬಂದ ಬ್ಯುಸಿನೆಸ್ ಟೈಕೂನ್ಸ್!

ಆರ್ಥಿಕ ನೀತಿ ನಿರೂಪಕರ ಜೊತೆ ಪ್ರಧಾನಿ ಸಭೆ| ಬಜೆಟ್ ಪೂರ್ವ ಸಿದ್ಧತೆ ಸಭೆಯ ನೇತೃತ್ವ ವಹಿಸಿದ ಪ್ರಧಾನಿ ಮೋದಿ| ವಿವಿಧ ವಲಯಗಳ ಪರಿಣತರೊಂದಿಗೆ ಮೋದಿ ಸಮಾಲೋಚನೆ| 'ಆರ್ಥಿಕತೆಯ ಮೂಲ ಅಡಿಪಾಯದಿಂದ ಪುಟಿದೇಳುವ ಸಾಮರ್ಥ್ಯ ಭಾರತಕ್ಕಿದೆ'| 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ವಿಶ್ವಾಸ ಇಮ್ಮಡಿಯಾಗಿದೆ ಎಂದ ಪ್ರಧಾನಿ| ಆರ್ಥಿಕ ಪುನಶ್ಚೇತನಕ್ಕೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ|

Indian Economy Has Capacity To Bounce Back Says PM Modi
Author
Bengaluru, First Published Jan 10, 2020, 12:13 PM IST

ನವದೆಹಲಿ(ಜ.10): ಕೇಂದ್ರ ಸರ್ಕಾರ ವಾರ್ಷಿಕ ಬಜೆಟ್‌ಗೆ ಸಿದ್ಧತೆ ನಡೆಸಿದ್ದು, ಬಜೆಟ್ ಪೂರ್ವ ಸಮಾಲೋಚನೆಯಲ್ಲಿ ನಿರತವಾಗಿದೆ.

ಅದರಂತೆ ಬಜೆಟ್ ಪೂರ್ವ ಸಿದ್ಧತೆಗಳ ಭಾಗವಾಗಿ ಪ್ರಧಾನಿ ಮೋದಿ ಆರ್ಥಿಕ ತಜ್ಞರು ಹಾಗೂ ವಿವಿಧ ವಲಯಗಳ ಪರಿಣತರೊಂದಿಗೆ ಸಮಾಲೋಚನೆ ಸಭೆ ನಡೆಸಿದರು.

ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸುವಂತಾಗಲು ವಿಶೇಷ ಪ್ರಯತ್ನಗಳನ್ನು ಮಾಡುವಂತೆ ಈ ವೇಳೆ ಪ್ರಧಾನಿ ಮೋದಿ ಕರೆ ನೀಡಿದರು.

ಆರ್ಥಿಕ ವಲಯದ ನೀತಿ ನಿರೂಪಕರೊಂದಿಗೆ ಸಮನ್ವಯತೆ ವೃದ್ಧಿಸುವತ್ತ ಕೇಂದ್ರ ಸರ್ಕಾರ ದೃಷ್ಟಿ ಹರಿಸಿದ್ದು, ದೇಶದ ಸಾಮರ್ಥ್ಯವನ್ನು ಹೆಚ್ಚಿಸಲು ಈ ಸಭೆ ಅವಕಾಶ ಒದಗಿಸಿದೆ ಎಂದು ಪ್ರಧಾನಿ ಕಚೇರಿ ಅಭಿಪ್ರಾಯಪಟ್ಟಿದೆ. 

ಆರ್ಥಿಕತೆಯ ಮೂಲ ಅಡಿಪಾಯದಿಂದ ಪುಟಿದೇಳುವ ಸಾಮರ್ಥ್ಯ ಭಾರತಕ್ಕಿದ್ದು, 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ವಿಶ್ವಾಸ ಇಮ್ಮಡಿಯಾಗಿದೆ ಎಂದು ಮೋದಿ ನುಡಿದರು.

ಜನತೆಯಿಂದ ಸಲಹೆ ಆಹ್ವಾನಿಸಿದ ಪ್ರಧಾನಿ ಮೋದಿ

ಪ್ರಸಕ್ತ ಸಾಲಿನಲ್ಲಿ ಆರ್ಥಿಕ ಬೆಳವಣಿಗೆ ಶೇ. 5ಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ, ಆರ್ಥಿಕ ಪುನಶ್ಚೇತನಕ್ಕೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಇಂದಿನ ಸಭೆಯಲ್ಲಿ ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್, ನೀತಿ ಆಯೋಗ ಸಿಇಒ ಅಮಿತಾಭ್ ಕಾಂತ್, ಹಿರಿಯ ಆರ್ಥಿಕ ತಜ್ಞರು, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಹಣಕಾಸು ವಲಯದ ತಜ್ಞರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಆದರೆ ಪ್ರಧಾನಿ ಮೋದಿ ಸಭೆಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಅವರಿಗೆ ಕೇವಲ ಕಾರ್ಪೋರೇಟ್ ವಲಯದ ಹಿತಾಸಕ್ತಿಯಷ್ಟೇ ಮುಖ್ಯವಾಗಿದ್ದು, ರೈತರ, ಯುವ ಸಮುದಾಯದ ಹಾಗೂ ಮಹಿಳೆಯರ ಹಿತರಕ್ಷಣೆ ಅವರಿಗೆ ಮುಖ್ಯವಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Follow Us:
Download App:
  • android
  • ios