ಮದುವೆ ಸೀಸನ್‌ನಲ್ಲಿ ಸಣ್ಣ ನೋಟುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬ್ಯಾಂಕುಗಳಲ್ಲಿ ಲಭ್ಯತೆ ಕಡಿಮೆಯಾಗುತ್ತಿದೆ. ಕಲೆಕ್ಷನ್ ಬಜಾರ್, ಕಲೆಕ್ಟರ್ ಬಜಾರ್, ಕಾಯಿನ್ ಬಜಾರ್‌ನಂತಹ ವೆಬ್‌ಸೈಟ್‌ಗಳು ಹೆಚ್ಚಿನ ಬೆಲೆಗೆ ನೋಟುಗಳನ್ನು ಮಾರಾಟ ಮಾಡುತ್ತಿವೆ. ವಿಶೇಷ ಸಂಖ್ಯೆಯ ನೋಟುಗಳಿಗೆ ಆರ್‌ಬಿಐನಿಂದ ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ. ಆನ್‌ಲೈನ್‌ನಲ್ಲಿ ನೋಟು ಖರೀದಿಸುವಾಗ ನಕಲಿ ನೋಟುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.
ಮದುವೆ (wedding) ಋತುವಿನಲ್ಲಿ ಜನರಿಗೆ ನಗದಿನ ಅವಶ್ಯಕತೆ ಹೆಚ್ಚಿರುತ್ತೆ. ಹತ್ತು, ಇಪ್ಪತ್ತು, ಐವತ್ತು ಮತ್ತು ನೂರು ರೂಪಾಯಿ ನೋಟಿನ ಬಂಡಲ್ ಗಳನ್ನು ಜನರು ಕೇಳ್ತಾರೆ. ಬ್ಯಾಂಕ್ (Bank) ಗಳಲ್ಲಿ ಬೇಡಿಕೆ ಹೆಚ್ಚಾದಂತೆ ಅದನ್ನು ಪೂರೈಸೋದು ಕಷ್ಟ. ಬ್ಯಾಂಕ್ ನಲ್ಲಿ ತಮಗೆ ಅಗತ್ಯವಿರುವಷ್ಟು ನೋಟಿನ ಕಟ್ಟು ಸಿಕ್ಕಿಲ್ಲ ಎಂದಾಗ ಸಂಬಂಧಿಕರು, ಸ್ನೇಹಿತರು, ಹತ್ತಿರದ ಸಣ್ಣ ಅಂಗಡಿಗಳಿಗೆ ಹೋಗಿ ಜನರು ನೋಟು ಪಡೆಯುವ ಪ್ರಯತ್ನ ಮಾಡ್ತಾರೆ. ಆದ್ರೆ ಅಲ್ಲಿಯೂ ನಿಮಗೆ ಅಗತ್ಯವಿರುಷ್ಟು ನೋಟು ಸಿಗುತ್ತೆ ಅನ್ನೋಕೆ ಸಾಧ್ಯವಿಲ್ಲ. ಇದನ್ನು ಮನಗಂಡಿರುವ ಕೆಲ ವೆಬ್ಸೈಟ್ ಗಳು ಆನ್ಲೈನ್ ನಲ್ಲಿ ನೋಟುಗಳ ಮಾರಾಟ ಶುರು ಮಾಡಿವೆ.
ಕಲೆಕ್ಷನ್ ಬಜಾರ್ (Collection Bazaar), ಕಲೆಕ್ಟರ್ ಬಜಾರ್ (Collector Bazaar) ಮತ್ತು ಕಾಯಿನ್ ಬಜಾರ್ (Coin Bazaar) ಹೆಸರಿನ ವೆಬ್ಸೈಟ್ ಗಳು ನಿಮಗೆ ಗರಿ ಗರಿ ನೋಟನ್ನು ನೀಡ್ತಿವೆ. ಇಬೇ ಕೂಡ ಭಾರತೀಯ ಕರೆನ್ಸಿಯನ್ನು ಮಾರಾಟ ಮಾಡ್ತಿತ್ತು. ಆದ್ರೀಗ ವೆಬ್ಸೈಟ್ ನಲ್ಲಿ ಯಾವುದೇ ಕರೆನ್ಸಿ ಕಾಣಿಸ್ತಿಲ್ಲ. ವಿಶೇಷ ಸಂಖ್ಯೆಯ ನೋಟುಗಳು ಮಾತ್ರ ಇಲ್ಲಿ ಖರೀದಿ, ಮಾರಾಟವಾಗ್ತಿವೆ.
2047ಕ್ಕೆ ಅಧಿಕ ಆದಾಯದ ದೇಶವಾಗಲಿದೆ ಭಾರತ!
ಆನ್ಲೈನ್ ಖರೀದಿ ದುಬಾರಿ : ಬ್ಯಾಂಕ್ ಅಥವಾ ಸಂಬಂಧಿಕರಿಂದ ನೀವು ನೋಟಿನ ಕಂತೆ ಪಡೆದಾಗ ಅದರ ಮೌಲ್ಯದ ಹಣವನ್ನು ಪಾವತಿ ಮಾಡ್ತೀರಿ. ಆದ್ರೆ ಈ ವೆಬ್ಸೈಟ್ ನಲ್ಲಿ ನೋಟುಗಳನ್ನು ಖರೀದಿ ಮಾಡಿದಾಗ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ. ಭಾರತೀಯ ಕರೆನ್ಸಿ ಕಾನೂನುಬದ್ಧ ಕರೆನ್ಸಿ ಆಗಿರುವ ಕಾರಣ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ. ಅದೇ ಕಾರಣಕ್ಕೆ ಈ ವೆಬ್ಸೈಟ್ ಗಳು ಸೀರಿಯಲ್ ಸಂಖ್ಯೆ ಅಥವಾ ವಿಶೇಷ ನೋಟು ಎನ್ನುವ ಹಣೆಪಟ್ಟಿ ನೀಡಿ, ನೋಟುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡ್ತಿವೆ.
ಸ್ನೇಹಿತರ ಬಳಿ 100 ರೂಪಾಯಿಯ 10 ನೋಟು ಖರೀದಿ ಮಾಡಿದ್ದರೆ 1000 ರೂಪಾಯಿ ಪಾವತಿ ಮಾಡ್ಬೇಕು. ಅದೇ ಕಲೆಕ್ಷನ್ ಬಜಾರ್ ವೆಬ್ಸೈಟ್ ನಲ್ಲಿ ನೀವು 100 ರೂಪಾಯಿಯ 10 ನೋಟುಗಳನ್ನು ಖರೀದಿ ಮಾಡ್ತಿದ್ದರೆ 1850 ರೂಪಾಯಿ ಪಾವತಿ ಮಾಡ್ಬೇಕು. ಕಾಯಿನ್ ಬಜಾರ್ 786 ಸರಣಿಯಿಂದ ಪ್ರಾರಂಭವಾಗುವ 10 ರೂಪಾಯಿ ನೋಟುಗಳ ಬಂಡಲ್ ಅನ್ನು 5,250 ರೂಪಾಯಿಗೆ ಮಾರಾಟ ಮಾಡುತ್ತಿದೆ. ಅದೇ ರೀತಿ 10 ರೂಪಾಯಿಯ 9 ವಿಶಿಷ್ಟ ನೋಟುಗಳ ಬೆಲೆಯನ್ನು 997.50 ರೂಪಾಯಿಗಳಿಗೆ ಮಾರಾಟ ಮಾಡಲಾಗ್ತಿದೆ.
ಅರ್ಧ ತಿಂಗಳಿಗೆ ಸಂಬಳ ಖಾಲಿಯಾಗುತ್ತಿದೆಯಾ? ಈ ತಪ್ಪು ಮಾಡಬೇಡಿ
ನಿಯಮ ಏನು? : ಯಾವುದೇ ವೆಬ್ಸೈಟ್ ವಿಶೇಷ ಸಂಖ್ಯೆಯ ನೋಟುಗಳನ್ನು ಹೆಚ್ಚಿನ ಸಂಖ್ಯೆಗೆ ಮಾರಾಟ ಮಾಡಿದ್ರೆ ಅದ್ರಲ್ಲಿ ಆರ್ ಬಿಐ ಮಧ್ಯಪ್ರವೇಶ ಮಾಡುವುದಿಲ್ಲ. ಈ ಬಗ್ಗೆ ಆರ್ ಬಿಐನಲ್ಲಿ ಯಾವುದೇ ಸ್ಪಷ್ಟ ನಿಯಮವಿಲ್ಲ. ಕೆಲ ವರ್ಷಗಳ ಹಿಂದೆ ಇದನ್ನು ವಿರೋಧಿಸಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದ್ರ ವಿಚಾರಣೆ ನಡೆಸಿದ್ದ ಮಧ್ಯಪ್ರದೇಶದ ಹೈಕೋರ್ಟ್, ಭಾರತದ ಕರೆನ್ಸಿಯನ್ನು ಅದ್ರ ಮುಖ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದ ಇಬೇಗೆ ನೋಟಿಸ್ ಜಾರಿ ಮಾಡಿತ್ತು.
ವೆಬ್ಸೈಟ್ ಮೂಲಕ ನಗದು ಖರೀದಿ ಸುರಕ್ಷಿತ ಎನ್ನಲು ಸಾಧ್ಯವಿಲ್ಲ. ಆನ್ಲೈನ್ ನಲ್ಲಿ ನೀವು ಖರೀದಿ ಮಾಡಿದ ನೋಟುಗಳು ನಕಲಿಯಾಗಿರುವ ಸಾಧ್ಯತೆಯೂ ಇದೆ. ಹಣ ಪಾವತಿಸಿದ ನಂತ್ರ ನೋಟು ನಮ್ಮ ಕೈಸೇರುತ್ತಾ ಎನ್ನುವ ಅನುಮಾನ ಕೂಡ ಜನರನ್ನು ಕಾಡುತ್ತದೆ. ಆನ್ಲೈನ್ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಮೈಯೆಲ್ಲ ಕಣ್ಣಾಗಿದ್ರೂ ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
