ಅಬ್ಬಾ! ಸೋಷಿಯಲ್ ಮೀಡಿಯಾ ಸ್ಟಾರ್ ಗಳ ಗಳಿಕೆ ಕೇಳಿದ್ರೆ ಶಾಕ್ ಆಗ್ತೀರಾ, ಬರೀ ಒಂದು ವಿಡಿಯೋದಿಂದ 15 ಲಕ್ಷ ಆದಾಯ

ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ ನೋಡ್ತಾ ಸಮಯ ಕಳೆಯುತ್ತಿದ್ದೀರಾ? ನೀವು ನೋಡೋ ಒಂದು ವಿಡಿಯೋದಿಂದ ಈ ಸೋಷಿಯಲ್ ಮೀಡಿಯಾ ಸ್ಟಾರ್ ಗಳು ಎಷ್ಟು ಆದಾಯ ಗಳಿಸ್ತಿದ್ದಾರೆ ಗೊತ್ತಾ? 

Indian celebrity influencers earn Rs 7 15 lakh per instagram video report anu

ನವದೆಹಲಿ (ಏ.4): ಸೋಷಿಯಲ್ ಮೀಡಿಯಾ ಈಗ ಹಲವರಿಗೆ ಆದಾಯದ ಮೂಲವೂ ಆಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಕೆಲವರು ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಲೈಫ್ ಸ್ಟೈಲ್, ಡಯಟ್ , ಟ್ರಾವೆಲ್ ಹೀಗೆ ವಿವಿಧ ವಿಚಾರಗಳಿಗೆ ಸಂಬಂಧಿಸಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಇನ್ನು ಕೆಲವರ ಆದಾಯ ಕೇಳಿದ್ರೆ ತಲೆ ತಿರುಗುತ್ತದೆ ಕೂಡ. ಇತ್ತೀಚಿನ ವರದಿಯೊಂದರ ಪ್ರಕಾರ ಭಾರತದಲ್ಲಿ ಸೆಲೆಬ್ರಿಟಿ ಪ್ರಭಾವಿಗಳು ಇನ್ ಸ್ಟಾಗ್ರಾಮ್ ವಿಡಿಯೋ ಮೂಲಕ ಪ್ರತಿ ವಿಡಿಯೋಗೆ 7ಲಕ್ಷ ರೂ.ನಿಂದ 15ಲಕ್ಷ ರೂ. ಗಳಿಸುತ್ತಿದ್ದಾರೆ. ಇನ್ನು ಕೆಲವು  ಯೂಟ್ಯೂಬ್ ಸ್ಟಾರ್ ಗಳು ಪ್ರತಿ ವಿಡಿಯೋಗೆ 1ಲಕ್ಷ ರೂ.ನಿಂದ 5ಲಕ್ಷ ರೂ. ತನಕ ಗಳಿಕೆ ಮಾಡುತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದ ಭಾರತೀಯ ಕಂಟೆಂಟ್ ಕ್ರಿಯೇಟರ್ ಗಳು ಒಂದು ತಿಂಗಳಿಗೆ 20,000ರೂ. ನಿಂದ 2 ಲಕ್ಷ ರೂ. ತನಕ ಗಳಿಕೆ ಮಾಡುತ್ತಿದ್ದಾರೆ. ಇದರಲ್ಲಿ 10,00-1 ಲಕ್ಷದ ತನಕದ ಸಣ್ಣ ಮಟ್ಟದ ಅಥವಾ ಮೈಕ್ರೋ ಇನ್ ಫ್ಲುಯೆನ್ಸರ್ ಕೂಡ ಸೇರಿದ್ದಾರೆ. ಇವರ ಎಂಗೇಜ್ಮೆಂಟ್ ದರ ಶೇ.1.5-2 ತನಕ ಇದೆ ಎಂದು ಮಾರ್ಕೇಟಿಂಗ್ ಸಂಸ್ಥೆ ಕೊಫ್ಲುಯೆನ್ಸ್ ತಿಳಿಸಿದೆ.

ಎಂಗೇಜ್ಮಂಟ್ ದರವೆಂದ್ರೆ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ ಗೆ ಎಷ್ಟು ಮಂದಿ ವೀಕ್ಷಕರು ಲೈಕ್ ಅಥವಾ ಕಾಮೆಂಟ್ ಮಾಡಿದ್ದಾರೆ ಎಂಬುದರ ಪ್ರಮಾಣ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಭಾವಿಗಳಿಗೆ ಎಷ್ಟು ಜನರು ಫಾಲೋವರ್ಸ್ ಇದ್ದಾರೆ ಎಂಬುದು ಕೂಡ ಅವರ ಗಳಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗೆಯೇ ಅವರ ಕಂಟೆಂಟ್, ವೀಕ್ಷಕರ ಪ್ರಮಾಣ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೋಫ್ಲುಯೆನ್ಸ್ ಸಹಸಂಸ್ಥಾಪಕ ರಿತೇಶ್ ಉಜ್ಜವಲ್ ತಿಳಿಸಿದ್ದಾರೆ.

ಇನ್ಸ್ಟಾಗ್ರಾಮ್ ಪ್ರಭಾವಿಗಳಿಗೆ ಅಯೋಧ್ಯೆ ಹಾಟ್ಸ್ಪಾಟ್… ಎಲ್ಲಿ ನೋಡಿದ್ರೂ ರೀಲ್ಸ್.. ರೀಲ್ಸ್!

ಫ್ಯಾಷನ್ ಇನ್ ಫ್ಲುಯೆನ್ಸರ್ ಪ್ರತಿ ವೀಕ್ಷಣೆಗೆ 40 ರಿಂದ 60 ಪೈಸೆ ಗಳಿಸುತ್ತಾರೆ. ಇನ್ನು ಜೀವನಶೈಲಿ ಕ್ರಿಯೇಟರ್ ಪ್ರತಿ ವೀಕ್ಷಣೆಗೆ 30-50 ಪೈಸೆ ಚಾರ್ಜ್ ಮಾಡುತ್ತಾರೆ ಎಂದು ರಿತೇಶ್ ಉಜ್ವಲ್ ತಿಳಿಸಿದ್ದಾರೆ. ಸಾವಿರ ವೀಕ್ಷಣೆಗೆ ವೆಚ್ಚದ ಮಾನದಂಡ ಬಳಸಿ ಬೆಲೆ ನಿಗದಿಪಡಿಸುತ್ತಾರೆ ಎಂದು ಕೂಡ ಅವರು ತಿಳಿಸಿದ್ದಾರೆ.

ಆರೋಗ್ಯ, ಹಣಕಾಸಿಗೆ ಸಂಬಂಧಿಸಿದ ಕಂಟೆಂಟ್ ಗಳ ದರ ಹೆಚ್ಚಿರುತ್ತದೆ. ವೈದ್ಯರು ಸೃಷ್ಟಿಸುವ ಆರೋಗ್ಯ ಕಂಟೆಂಟ್ ಗಳಿಗೆ ಪ್ರತಿ ವೀಕ್ಷಣೆಗೆ 1-2ರೂ. ಶುಲ್ಕ ವಿಧಿಸಲಾಗುತ್ತದೆ. ಹಾಗೆಯೇ ಹಣಕಾಸು ಕ್ರಿಯೇಟರ್ ಪ್ರತಿ ವೀಕ್ಷಣೆಗೆ 3-4ರೂ. ದರ ನಿಗದಿಪಡಿಸುತ್ತಾರೆ. 

ಇನ್ನು ಕೋಫ್ಲುಯೆನ್ಸ್ 2024ನೇ ಸಾಲಿನ ವಿಶ್ಲೇಷಣೆ ಪ್ರಕಾರ ಇನ್ ಸ್ಟಾಗ್ರಾಮ್ ನಲ್ಲಿ ಮೆಗಾ-ಇನ್ ಫ್ಲುಯೆನ್ಸರ್ ಕಿರು ಅವಧಿಯ ವಿಡಿಯೋ ಕಂಟೆಂಟ್ ಗಳಿಗೆ 3-5ಲಕ್ಷ ರೂ. ಗಳಿಸುತ್ತಿದ್ದಾರೆ. ಇದರಲ್ಲಿ ಐಜಿ ರೀಲ್ಸ್ ಹಾಗೂ ವೈಟಿ ಶಾರ್ಟ್ ಗಳು ಸೇರಿವೆ. ಇನ್ನು ಯೂಟ್ಯೂಬರ್ ಗಳು 1.2 ಲಕ್ಷ ರೂ.ನಿಂದ 3ಲಕ್ಷ ರೂ. ಚಾರ್ಜ್ ಮಾಡುತ್ತಿದ್ದಾರೆ. 

15 ಸೋಶಿಯಲ್‌ ಮೀಡಿಯಾ ಇನ್‌ಫ್ಲ್ಯುಯೆನ್ಸರ್‌ಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌!

ಸೋಷಿಯಲ್ ಮೀಡಿಯಾದಲ್ಲಿ ಅವರ ಹಿಂಬಾಲಕರನ್ನು ಆಧರಿಸಿ ಪ್ರಭಾವಿಗಳನ್ನು ಐದು ವರ್ಗಗಳಲ್ಲಿ ವಿಂಗಡಿಸಬಹುದು. ನ್ಯಾನೋ ಪ್ರಭಾವಿಗಳು 100  ರಿಂದ 10,000 ಫಾಲೋವರ್ಸ್ ಹೊಂದಿರುತ್ತಾರೆ. ಇನ್ನು ಮೈಕ್ರೋ ಪ್ರಭಾವಿಗಳು 10,000 ದಿಂದ ಒಂದು ಲಕ್ಷ ಫಾಲೋವರ್ಸ್ ಹೊಂದಿರುತ್ತಾರೆ. ಇನ್ನು ಮ್ಯಾಕ್ರೋ ಹಾಗೂ ಮೆಗಾ ಪ್ರಭಾವಿಗಳು 1ಲಕ್ಷದಿಂದ ಒಂದು ಮಿಲಿಯನ್ ಅಥವಾ ಅದಕ್ಕೂ ಹೆಚ್ಚಿನ ಫಾಲೋವರ್ಸ್ ಗಳನ್ನು ಹೊಂದಿರುತ್ತಾರೆ. 

ಸೆಲೆಬ್ರಿಟಿ ಪ್ರಭಾವಿಗಳು ಇನ್ ಸ್ಟಾಗ್ರಾಮ್ ನಲ್ಲಿ ಪ್ರತಿ ವಿಡಿಯೋಗೆ 7 ಲಕ್ಷ ರೂ.ನಿಂದ 15ಲಕ್ಷ ರೂ. ಗಳಿಸುತ್ತಾರೆ. ಅದೇ ಯೂಟ್ಯೂಬ್ ಸೆಲೆಬ್ರಿಟಿಗಳು ಪ್ರತಿ ವಿಡಿಯೋಗೆ 1ಲಕ್ಷ ರೂ.ನಿಂದ 5 ಲಕ್ಷ ರೂ. ತನಕ ಗಳಿಸುತ್ತಾರೆ. ಇನ್ನು ಮೈಕ್ರೋ ಪ್ರಭಾವಿಗಳು ಇನ್ ಸ್ಟಾಗ್ರಾಮ್ ನಲ್ಲಿ ಪ್ರತಿ ವಿಡಿಯೋಗೆ 20,000 ರೂ.ನಿಂದ 50,000ರೂ. ಗಳಿಸುತ್ತಾರೆ. ಯೂಟ್ಯೂಬ್ ನಲ್ಲಿ 20,000ರೂ. ನಿಂದ 39,000ರೂ. ತನಕ ಗಳಿಸುತ್ತಾರೆ. ಇನ್ನು ಇನ್ ಸ್ಟಾಗ್ರಾಮ್ ನಲ್ಲಿ ಮ್ಯಾಕ್ರೋ ಪ್ರಭಾವಿಗಳು 60,000 ರೂ. ನಿಂದ 1.6 ಲಕ್ಷ ರೂ. ತನಕ ಗಳಿಸುತ್ತಾರೆ. ಇನ್ನು ಯೂಟ್ಯೂಬ್ ಮ್ಯಾಕ್ರೋ ಪ್ರಭಾವಿಗಳು 40,000 ರೂ. ನಿಂದ 1 ಲಕ್ಷ ರೂ. ತನಕ ಗಳಿಸುತ್ತಾರೆ. 
 

Latest Videos
Follow Us:
Download App:
  • android
  • ios