ಬಯಲಾಯ್ತು ಅಚ್ಚರಿಯ ವರದಿ| ಲಾಕ್‌ಡೌನ್ ವೇಳೆ ಶ್ರೀಮಂತರ ಆಸ್ತಿ ಶೇ. 35ರಷ್ಟು ಏರಿಕೆ| ಅಂಬಾನಿ ಗಳಿಸಿದ್ದೆಷ್ಟು ಗೊತ್ತಾ?

ಮುಂಬೈ(ಜ.25): ಬಡತನ ನಿರ್ಮೂಲನೆಗಾಗಿ ಕಾರ್ಯ ನಿರ್ವಹಿಸುವ ಸಂಸ್ಥೆ ಆಕ್ಸ್‌ಫೈಮ್ ಅಚ್ಚರಿಗ್ಒಳಿಸುವ ಮಾಹಿತಿಯೊಂದನ್ನು ಹೊರ ಹಾಕಿದೆ. ಕೊರೋನಾ ನಿವಾರಣೆಗೆಂದು ಹೇರಲಾದ ಲಾಕ್‌ಡೌನ್ ವೇಳೆ ಭಾರತೀಯ ಕೋಟ್ಯಾಧಿಪತಿಗಳ ಆಸ್ತಿ ಶೇ. 35 ರಷ್ಟು ವೃದ್ಧಿಸಿದೆ ಎಂದಿದೆ. ಇದೇ ವೇಳೆ ಕೊಟ್ಯಂತರ ಮಂದಿಯ ತೀವ್ರ ಸಂಕಷ್ಟವನ್ನು ಎದುರಿಸಿದ್ದಾರೆಂಬುವುದೂ ಉಲ್ಲೇಖನೀಯ.

 ಆಕ್ಸ್‌ಫೈಮ್ ವರದಿಯನ್ವಯ 'ಇನ್‌ಇಕ್ವಾಲಿಟಿ ವೈರಸ್‌'ನಲ್ಲಿ ಮಾರ್ಚ್ 2020ರ ಬಳಿಕ ಭಾರತದ ಸುಮಾರು ನೂರು ಕೋಟ್ಯಾಧಿಪತಿಗಳ ಸಂಪತ್ತಿನಲ್ಲಿ 12,97,822 ಕೋಟಿ ಮೊತ್ತ ಹೆಚ್ಚಿದೆ. ಇಷ್ಟು ಮೊತ್ತವನ್ನು ದೇಶದ 13.8 ಕೋಟಿ ಅತಿ ಹೆಚ್ಚು ಬಡವರಿಗೆ ವಿತರಿಸಿದ್ದರೆ, ಇವರಲ್ಲಿ ಪ್ರತಿಯೊಬ್ಬರಿಗೂ 94,045 ರೂ. ಮೊತ್ತ ನೀಡಬಹುದಿತ್ತು ಎಂದಿದೆ.

ವರದಿಯಲ್ಲಿ ಆದಾಯದ ಅಸಮಾನತೆಯನ್ನು ಉಲ್ಲೇಖಿಸುತ್ತಾ, ಈ ಮಹಾಮಾರಿ ಜನರ ನಿದ್ದೆ ಕಂಗೆಡಿಸಿದ್ದ ಸಂದರ್ಭದಲ್ಲಿ ಮುಕೇಶ್ ಅಂಬಾನಿ ಒಂದು ಗಂಟೆಯಲ್ಲಿ ಸಂಪಾದಿಸಿದ ಹಣ ಗಳಿಸಲು ಓರ್ವ ದಿನಗೂಲಿ ಕಾರ್ಮಿಕನಿಗೆ ಹತ್ತು ಸಾವಿರ ವರ್ಷವಾಗುತ್ತದೆ. ಅಂಬಾನಿ ಒಂದು ಸೆಕೆಂಡ್‌ನಲ್ಲಿ ಗಳಿಸಿದ ಮೊತ್ತ ಗಳಿಸಲು ಸುಮಾರು ಮೂರು ವರ್ಷ ಬೇಕಾಗುತ್ತದೆ ಎಂದಿದೆ. 

ಈ ವರದಿಯನ್ನು ವಿಶ್ವ ಆರ್ಥಿಕ ವೇದಿಕೆ 'ದಾವೋಸ್ ಸಂವಾದ'ದ ಹಿಂದಿನ ದಿನ ಬಿಡುಗಡೆ ಮಾಡಲಾಗಇದೆ. ಈ ವರದಿಯನ್ವಯ ಕೊರೋನಾ ವೈರಸ್ ಮಹಾಮಾರಿ ಕಳೆದ ನೂರು ವರ್ಷದಲ್ಲಿ ಮನುಕುಲವನ್ನು ಕಾಡಿದ ಅತಿ ದೊಡ್ಡ ಆರೋಗ್ಯ ಸಮಸ್ಯೆ, ಇದರಿಂದಾಗಿ 1930 ರ ಸಂಕಷ್ಟದ ಬಳಿಕ ಅತಿ ದೊಡ್ಡ ಆರ್ಥಿಕ ಸಮಸ್ಯೆ ಎದುರಾಗಿದೆ ಎಂದಿದೆ. 

ಇನ್ನು ಈ ವರದಿಯಲ್ಲಿ ಶ್ರೀಮಮತರ ಆಸ್ತಿ ಅಅತ್ಯಂತ ವೇಗವಾಗಿ ವೃದ್ಧಿಸಿದ್ದು, ಕಾರ್ಮಿಕರು ತಮ್ಮ ಕೆಲಸ ಕಳೆದುಕೊಂಡಿರುವ ವಿಚಾರವನ್ನೂ ಉಲ್ಲೇಖಿಸಲಾಗಿದೆ.