ಭಾರತಕ್ಕೆ ಎಚ್-64ಇ(1) ಅಪಚೆ ಗಾರ್ಡಿಯನ್ ಹೆಲಿಕಾಪ್ಟರ್ ಹಸ್ತಾಂತರ| ವಾಯುಸೇನೆಗೆ ಬಲ ತುಂಬುವ ಕೇಂದ್ರದ ನಿರ್ಧಾರ ಅಚಲ| 22 ಅಪಾಚೆ ಎಎಚ್-64 ಇ(1) ಹೆಲಿಕಾಪ್ಟರ್'ಗಳನ್ನು ಭಾರತಕ್ಕೆ ಹಸ್ತಾಂತರಿಸಿದ ಅಮೆರಿಕದ ಬೋಯಿಂಗ್ ಕಂಪನಿ| 2015ರಲ್ಲೇ ಭಾರತ-ಅಮೆರಿಕ ನಡುವೆ ಒಪ್ಪಂದ| ಆಧುನಿಕ ತಂತ್ರಜ್ಞಾನಗಳ ಭಂಢಾರವನ್ನೇ ಹೊಂದಿರುವ ಅಪಾಚೆ ಎಎಚ್-64 ಇ(1) ಹೆಲಿಕಾಪ್ಟರ್'ಗಳು|

ಅರಿಜೋನಾ(ಮೇ.11): ದೇಶದ ವಾಯುಸೇನೆಗೆ ಮತ್ತಷ್ಟು ಶಕ್ತಿ ತುಂಬಲು ದೃಢ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ, ಹಂತ ಹಂತವಾಗಿ ವಾಯುಸೇನೆಯನ್ನು ಬಲಿಷ್ಠಗೊಳಿಸುವತ್ತ ಹೆಜ್ಜೆ ಇಟ್ಟಿದೆ.

ಅದರಂತೆ ವಿಶ್ವದ ಅತಿದೊಡ್ಡ ವಿಮಾನ ತಯಾರಿಕಾ ಕಂಪನಿ ಅಮೆರಿಕ ಮೂಲದ ಬೋಯಿಂಗ್, 22 ಅಪಾಚೆ ಎಎಚ್-64 ಇ(1) ಹೆಲಿಕಾಪ್ಟರ್'ಗಳನ್ನುಭಾರತೀಯ ವಾಯುಪಡೆಗೆ ಹಸ್ತಾಂತರಿಸಿದೆ.

ಮೂರೂವರೆ ವರ್ಷಗಳ ಹಿಂದೆಯೇ ಭಾರತ ಮತ್ತು ಅಮೆರಿಕ ನಡುವೆ ನಡೆದ ಬಹುಶತಕೋಟಿ ಹೆಲಿಕಾಪ್ಟರ್ ಖರೀದಿ ಮತ್ತು ಮಾರಾಟ ಒಪ್ಪಂದವಾಗಿದ್ದು, ಅದರಂತೆ ಭಾರತದ ವಾಯುಸೇನೆಯ ಬತ್ತಳಿಕೆಗೆ 22 ಅಪಾಚೆ ಎಎಚ್-64ಇ(1) ಹೆಲಿಕಾಪ್ಟರ್'ಗಳು ಸೇರ್ಪಡೆಯಾಗಿವೆ.

Scroll to load tweet…

ಅಮೆರಿಕದ ಎಎಚ್-64 ಇ(1) ಅಪಚೆ ಹೆಲಿಕಾಪ್ಟರ್ ಭಾರತೀಯ ವಾಯುಪಡೆಗೆ ಸೇರ್ಪಡೆಯಿಂದ ಭಾರತದ ಯುದ್ಧವಿಮಾನ ಪಡೆಯ ಆಧುನೀಕರಣದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತೀಯ ವಾಯುಪಡೆಯ ಭವಿಷ್ಯದ ಅಗತ್ಯಗಳಿಗೆ ಹೊಂದಿಕೆಯಾಗುವಂತೆ ಈ ಹೆಲಿಕಾಪ್ಟರ್'ನ್ನು ವಿನ್ಯಾಸಗೊಳಿಸಲಾಗಿದ್ದು, ಪರ್ವತ, ಕಣಿವೆಗಳಲ್ಲಿ ಸಹ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ.

ಮೊದಲ ಎಎಚ್-64ಇ(1) ಅಪಚೆ ಗಾರ್ಡಿಯನ್ ಹೆಲಿಕಾಪ್ಟರ್'ನ್ನು ಭಾರತೀಯ ವಾಯುಪಡೆಗೆ ಔಪಚಾರಿಕವಾಗಿ ಬೋಯಿಂಗ್ ಉತ್ಪಾದನಾ ಕೇಂದ್ರವಾದ ಮೆಸಾ, ಅರಿಜೊನಾದಲ್ಲಿ ಹಸ್ತಾಂತರಿಸಲಾಯಿತು

ಈ ಕುರಿತು ಮಾಹಿತಿ ನೀಡಿರುವ ಭಾರತೀಯ ವಾಯುಪಡೆ ವಕ್ತಾರ ಗ್ರೂಪ್ ಕಾಪ್ಟನ್ ಅನುಪಮ್ ಬ್ಯಾನರ್ಜಿ, ಹೆಲಿಕಾಪ್ಟರ್'ನ ಮೊದಲ ತಂಡ ಮುಂದಿನ ಜುಲೈನಲ್ಲಿ ಭಾರತಕ್ಕೆ ಬಂದು ಇಳಿಯಲಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ವಾಯುಸೇನೆ ಮತ್ತು ಭೂಸೇನೆಯ ಆಯ್ದ ಸಿಬ್ಬಂದಿಗೆ ಅಮೆರಿಕದ ಸೇನಾ ನೆಲೆ ಫೋರ್ಟ್ ರುಖೆರ್ ಮತ್ತು ಅಲ್ಬಾಮಾದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ವಾಯುಸೇನೆ ಮಾಹಿತಿ ನೀಡಿದೆ.

Scroll to load tweet…

ಎಚ್-64ಇ(1) ಅಪಚೆ ಗಾರ್ಡಿಯನ್ ವಿಶೇಷತೆಗಳು:

ತನ್ನ ವ್ಯಾಪ್ತಿಯಲ್ಲಿ ನಿಖರ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದ್ದು, ಇದು ವಿಶ್ವದ ಅತ್ಯಂತ ಸುಧಾರಿತ ಬಹುಕಾರ್ಯ ಯುದ್ಧ ಹೆಲಿಕಾಪ್ಟರ್ ಆಗಿದೆ. ಎಲ್ಲಾ ಹವಾಮಾನಗಳಲ್ಲಿ ಹೋರಾಟ ನಡೆಸುವ ಶಕ್ತಿ ಇದಕ್ಕಿದ್ದು, ಸಂಯೋಜಿತ ಸಂವೇದಕಗಳು, ಜಾಲ, ಮತ್ತು ಸಾಂದರ್ಭಿಕ ಜಾಗೃತಿ ಡಿಜಿಟಲ್ ಸಂವಹನದಂತ ಆಧುನಿಕ ಉಪಕರಣಗಳು ಇದರಲ್ಲಿವೆ.

ನೈಜ ಸಮಯದಲ್ಲಿ ಯುದ್ಧ ರಂಗದಲ್ಲಿ ನಿರ್ವಹಣೆ, ಮತ್ತು ಜಂಟಿ ಕಾರ್ಯಾಚರಣೆ 'ಯುದ್ಧಭೂಮಿಯಲ್ಲಿ ಯೋಧರಿಗೆ ಚಿತ್ರಗಳನ್ನು ಕಳುಹಿಸುವ ಮತ್ತು ಗುರಿ ಸ್ಥಾನಗಳ ಡಿಜಿಟಲ್ ಸಂವಹನ ಮೊದಲಾದ ಸೌಲಭ್ಯಗಳು ಇದರಲ್ಲಿವೆ.

ಯುದ್ಧಭೂಮಿಯ ಚಿತ್ರಣವನ್ನು ಸ್ವೀಕರಿಸಿ ಅದನ್ನು ವರ್ಗಾಯಿಸುವ ತಂತ್ರಜ್ಞಾನ ಅಳವಡಿಸಲಾಗಿದ್ದು, ಭೂಸೇನಾ ಪಡೆಗೆ ಯುದ್ಧದಲ್ಲಿ ಜಂಟಿ ಕಾರ್ಯಾಚರಣೆಗೆ ಹೆಲಿಕಾಪ್ಟರ್ ನೆರವಾಗಲಿದೆ.