Asianet Suvarna News Asianet Suvarna News

ಎಲ್ಲಾ ಮೊಬೈಲ್‌ಗೂ 4ಜಿ, ರೆಡಿಯಾಗಿ ಪಡೆಯಲು 5ಜಿ: ಇದು ಅಂಬಾನಿ ಪ್ರಾಮಿಸ್!

ಭಾರತ 2020ರ ವೇಳೆಗೆ ಸಂಪೂರ್ಣ 4ಜಿ ತಂತ್ರಜ್ಞಾನ ಹೊಂದಿದ ರಾಷ್ಟ್ರ! ರಿಲಯನ್ಸ್ ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಭರವಸೆ! ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮುಖೇಶ್ ಅಂಬಾನಿ! 5ಜಿ ತಂತ್ರಜ್ಞಾನಕ್ಕೆ ತನ್ನನ್ನು ತಾನು ತೆರೆದುಕೊಳ್ಳಲಿರುವ ಭಾರತ! ಜಗತ್ತಿನಲ್ಲೇ ಭಾರತ ಅತ್ಯಂತ ಹೆಚ್ಚು ಮೊಬೈಲ್ ಡಾಟಾ ಬಳಸುವ ರಾಷ್ಟ್ರ! ಜಿಯೋ ದೇಶಾದ್ಯಂತ ಫೈಬರ್ ನೆಟವರ್ಕ್ ವಿಸ್ತರಣೆಗೆ ಕಟಿಬದ್ಧ   

India will be fully 4G, ready for 5G says Mukesh Ambani
Author
Bengaluru, First Published Oct 25, 2018, 2:53 PM IST
  • Facebook
  • Twitter
  • Whatsapp

ನವದೆಹಲಿ(ಅ.25): ಭಾರತ 2020ರ ವೇಳೆಗೆ ಸಂಪೂರ್ಣ 4ಜಿ ತಂತ್ರಜ್ಞಾನ ಹೊಂದಿದ ರಾಷ್ಟ್ರವಾಗಲಿದೆ ಎಂದು ರಿಲಯನ್ಸ್ ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಭರವಸೆ ವ್ಯಕ್ತಪಡಿಸಿದ್ದಾರೆ.

ಇಲ್ಲಿ ನಡೆಯುತ್ತಿರುವ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮುಖೇಶ್, 2020 ರಲ್ಲಿ ಭಾರತ ಸಂಪೂರ್ಣವಾಗಿ 4ಜಿ ತಂತ್ರಜ್ಞಾನ ಬಳಸಲಿದ್ದು, 5ಜಿ ತಂತ್ರಜ್ಞಾನಕ್ಕೆ ತನ್ನನ್ನು ತಾನು ತೆರೆದುಕೊಳ್ಳಲಿದೆ ಎಂದು ಹೇಳಿದರು.

ಭಾರತ ಈಗಾಗಲೇ ಇಡೀ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಮೊಬೈಲ್ ಡಾಟಾ ಬಳಸುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಮೊಬೈಲ್ ಬ್ರಾಡ್ ಬ್ಯಾಂಡ್ ವಿಸ್ತರಣೆಯಲ್ಲಿ 154ನೇ ಸ್ಥಾನ ಪಡೆದಿದೆ ಎಂದು ಅಂಬಾನಿ ಹೇಳಿದರು.

ಭಾರತದ ಎಲ್ಲಾ ಮೊಬೈಲ್ ಫೋನ್ ಗಳು 2020ರ ವೇಳೆಗೆ 4ಜಿ ವೇಗ ಪಡೆಯಲಿದ್ದು, ಇದಕ್ಕಾಗಿ ರಿಲಯನ್ಸ್ ಜಿಯೋ ಶ್ರಮಿಸಲಿದೆ ಎಂದು ಮುಖೇಶ್ ಭರವಸೆ ನೀಡಿದರು. 

ಜಿಯೋ ದೇಶಾದ್ಯಂತ ಫೈಬರ್ ನೆಟವರ್ಕ್ ವಿಸ್ತರಣೆಗೆ ಕಂಕಣಬದ್ಧವಾಗಿದ್ದು, ದೇಶದ ಪ್ರತಿಯೊಂದು ಮನೆಗೂ ಇಂಟರನೆಟ್ ಸೇವೆ ಲಭ್ಯವಾಗುವಂತೆ ಮಾಡಲು ಶ್ರಮಿಸುತ್ತಿದೆ ಎಂದು ಅಂಬಾನಿ ಮಾಹಿತಿ ನೀಡಿದರು.

Follow Us:
Download App:
  • android
  • ios