ನವದೆಹಲಿ(ಡಿ.26):  ಅಭಿವೃದ್ಧಿಯತ್ತ ಹೆಜ್ಜೆಹಾಕಿದ ಭಾರತಕ್ಕೆ ಕೊರೋನಾ ವೈರಸ್ ತೀವ್ರ ಹೊಡೆತ ನೀಡಿದೆ. 2019ರಲ್ಲಿ UK ಹಿಂದಿಕ್ಕಿದ ಭಾರತ, ವಿಶ್ವದ 5ನೇ ಅತೀ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತ್ತು. ಆದರೆ 2020ರಲ್ಲಿ ಕೊರೋನಾ ವೈರಸ್ ಕಾರಣ ಭಾರತ ಆರ್ಥಿಕತೆಗೆ ಹಿನ್ನಡೆಯಾಗಿದೆ. ಹೀಗಾಗಿ 5ನೇ ಸ್ಥಾನದಿಂದ ಭಾರತ 6ನೇ ಸ್ಥಾನಕ್ಕೆ ಕುಸಿದಿದೆ. ಆದರೆ ಪ್ರಗತಿಯಲ್ಲಿರುವ ಭಾರತದ ಆರ್ಥಿಕತೆ ಕುರಿತು CEBR ಸವಿಸ್ತಾರ ವರದಿ ಪ್ರಕಟಿಸಿದೆ.

IT ರಿಟರ್ನ್ ಸಲ್ಲಿಕೆ ಹಾಗೂ ಪ್ರಯೋಜನ; ಹಿಂದೇಟು ಹಾಕಿ ಸೌಲಭ್ಯದಿಂದ ವಂಚಿತರಾಗಬೇಡಿ!

ಥಿಂಕ್ ಟ್ಯಾಂಕ್ ವರದಿ ಪ್ರಕಾರ, 2025ರ ವೇಳೆಗೆ ಭಾರತ ಮತ್ತೆ 5ನೇ ಸ್ಥಾನಕ್ಕೇರಲಿದೆ. ತ್ವರಿತಗತಿಯಲ್ಲಿ ಪ್ರಗತಿ ಸಾಧಿಸಿರುವ ಭಾರತ 2030ರ ವೇಳೆ ಜಗತ್ತಿನ 3ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ ಎಂದು ಸೆಂಟರ್ ಫಾರ್ ಎಕನಾಮಿಕ್ಸ್ ಅಂಡ್ ಬಿಸಿನೆಸ್ ರಿಸರ್ಚ್ (CEBR) ವರದಿಯಲ್ಲಿ ಹೇಳಿದೆ. 

ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಅಂಬಾನಿ ಔಟ್; ಕಾರಣವೇನು?

ಸೆಂಟರ್ ಫಾರ್ ಎಕನಾಮಿಕ್ಸ್ ಅಂಡ್ ಬಿಸಿನೆಸ್ ರಿಸರ್ಚ್ ವರದಿ ಪ್ರಕಾರ ಭಾರತದ ಆರ್ಥಿಕತೆ 2021ರ ವೇಳೆ ಶೇಕಡಾ 9 ರಷ್ಟು ವೃದ್ಧಿಸಿದ್ದರೆ, 2022ಕ್ಕೆ ಶೇಕಡಾ 7ರಷ್ಟು ವೃದ್ಧಿಸಲಿದೆ. ಭಾರತದ ಆರ್ಥಿಕತೆ ಅಭಿವೃದ್ಧಿ ನಿಧಾನವಾಗಿದ್ದರೂ, ಸದೃಢವಾಗಿದೆ ಎಂದು  CEBR ವಾರ್ಷಿಕ ವರದಿಯಲ್ಲಿ ಹೇಳಿದೆ.

ಭಾರತದ ಜಿಡಿಪಿ ಬೆಳವಣಿಗೆ 2035ಕ್ಕೆ 5.8 ಶೇಕಡಾ ಆಗಲಿದೆ. ಇದು ಭಾರತದ ಆರ್ಥಿಕತೆ ವೃದ್ಧಿಗೆ ನೆರವಾಗಲಿದೆ. ಇದರಿಂದ 2025ಕ್ಕೆ ಯುಕೆ ಹಾಗೂ 2027ಕ್ಕೆ ಜರ್ಮನಿಯನ್ನು ಹಿಂದಿಕ್ಕಲಿದೆ. ಅಮೆರಿಕದ ಥಿಂಕ್ ಟ್ಯಾಂಕ್ ವರದಿ ಪ್ರಕಾರ 2028ರ ವೇಳೆಗೆ ಚೀನಾ, ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಅತೀ ದೊಡ್ಡ ಆರ್ಥಿಕತೆ ದೇಶವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದೆ.