Asianet Suvarna News Asianet Suvarna News

ಚೀನಾದತ್ತ ಮೋದಿ ಚಿತ್ತ: ರಫ್ತು ನಮ್ದು ಕಾಂಚಾಣ ನಿಮ್ದು!

ಅಮೆರಿಕದೊಂದಿಗಿನ ವಾಣಿಜ್ಯ ಯುದ್ಧಕ್ಕೆ ಬೆಂಡಾದ ಚೀನಾ! ವ್ಯಾಪಾರ ಸಂಬಂಧಕ್ಕಾಗಿ ಭಾರತದತ್ತ ದೃಷ್ಟಿ ಹರಿಸಿದೆ ಡ್ರ್ಯಾಗನ್ ರಾಷ್ಟ್ರ! ಚೀನಾಗೆ 200 ಕ್ಕೂ ಹೆಚ್ಚು ಉತ್ಪನ್ನಗಳ ರಫ್ತಿಗೆ ಮುಂದಾದ ಮೋದಿ ಸರ್ಕಾರ! ಆಸ್ಟ್ರೆಲೀಯಾ, ದಕ್ಷಿಣ ಕೋರಿಯಾ  ಸ್ಪರ್ಧೆ ಎದುರಿಸಲು ಭಾರತ ಸಿದ್ಧ! ಚೀನಾಗೆ ರಫ್ತಿನ ಪ್ರಮಾಣ ಹೆಚ್ಚಿಸಲು ಪ್ರಧಾನಿ ಮೋದಿ ಆಸಕ್ತಿ  

India Wants Fresh Trade Deal With China to Boost Exports
Author
Bengaluru, First Published Oct 24, 2018, 6:25 PM IST
  • Facebook
  • Twitter
  • Whatsapp

ನವದೆಹಲಿ(ಅ.24): ಅಮೆರಿಕದೊಂದಿಗೆ ವಾಣಿಜ್ಯ ಯುದ್ಧದಲ್ಲಿ ತೊಡಗಿರುವ ಚೀನಾ, ಅತ್ತ ಗೆಲ್ಲಲೂ ಆಗದೇ ಇತ್ತ ಸೋಲನ್ನು ಒಪ್ಪಿಕೊಳ್ಳಲೂ ಆಗದೇ ಪರದಾಡುತ್ತಿದೆ.

ಇದೇ ಕಾರಣಕ್ಕೆ ತನ್ನ ವಾಣಿಜ್ಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಚೀನಾ ಇದೀಗ ಭಾರತದತ್ತ ಮುಖ ಮಾಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಾರತ-ಚೀನಾ ವಾಣಿಜ್ಯ ಒಪ್ಪಂದ ಮತ್ತಷ್ಟು ಗಟ್ಟಿಗೊಳ್ಳಬೇಕು ಎಂದು ಈಗಾಗಲೇ ಚೀಬಾ ಹಲವು ಬಾರಿ ಹೇಳಿದೆ.

ಅದರಂತೆ ಚೀನಾಕ್ಕೆ ಸುಮಾರು 200 ಉತ್ಪನ್ನಗಳನ್ನು ಸಾಗಿಸಲು ಮತ್ತು ಕೊರತೆಯನ್ನು ಕಡಿಮೆ ಮಾಡಲು ಭಾರತ ಯೋಜನೆಯನ್ನು ರೂಪಿಸುತ್ತಿದೆ. 

ಈ ಯೋಜನೆಯು ಏಷ್ಯಾ ಫೆಸಿಫಿಕ್ ಟ್ರೇಡ್ ಅಗ್ರೀಮೆಂಟ್ ಅಡಿಯಲ್ಲಿ ನಡೆಯಲಿದ್ದು, ರಾಫ್ಟರ್ ಉತ್ಪನ್ನಗಳ ಮೇಲೆ ಆಮದು ಸುಂಕ ರಹಿತ ವ್ಯವಹಾರ ನಡೆಯಲಿದೆ ಎನ್ನಲಾಗಿದೆ. 

ಇನ್ನು ಚೀನಾದೊಂದಿಗೆ ವ್ಯಾಪಾರ ವೃದ್ಧಿಗೆ ಖುದ್ದು ಪ್ರಧಾನಿ ನರೇಂದ್ರ ಆಸಕ್ತಿ ವಹಿಸಿದ್ದು, ಆಸ್ಟ್ರೆಲೀಯಾ ಮತ್ತು ದಕ್ಷಿಣ ಕೋರಿಯಾ ಸ್ಪರ್ಧೆಯನ್ನು ಮೀರಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ. 

Follow Us:
Download App:
  • android
  • ios