Asianet Suvarna News Asianet Suvarna News

ವಿದೇಶಿ ಉತ್ಪನ್ನಗಳಿಗೆ ಭಾರತ ಮಾರುಕಟ್ಟೆಯಾಗಬಾರದು: ಕೇಂದ್ರ ಸಚಿವ ಕ್ರಿಶನ್

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ದೇಶೀ ಉತ್ಪನ್ನಗಳ ಉತ್ಪಾದನೆ ಹೆಚ್ಚಳದ ಮೂಲಕ ಭಾರತ ವಿಶ್ವದ ಗಮನಸೆಳೆದಿದೆ. ಭಾರತಕ್ಕೆ ವಿದೇಶಗಳಿಂದ ಆಮದಾಗುವ ಎಲ್ಲಾ ರೀತಿಯ ಉತ್ಪನ್ನಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸಬೇಕು ಎಂಬುದು ಮೋದಿ ಅವರ ಆಶಯವಾಗಿದೆ ಎಂದು ಕೇಂದ್ರ ಭಾರೀ  ಮತ್ತು ಇಂಧನ ಇಲಾಖೆ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜಾಲ್ ಹೇಳಿದ್ದಾರೆ. 

India should not be a market for domestic products says Union Minister Krishan Pal Gujral gow
Author
First Published Dec 16, 2022, 7:48 PM IST

ತುಮಕೂರು (ಡಿ.16): ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ದೇಶೀ ಉತ್ಪನ್ನಗಳ ಉತ್ಪಾದನೆ ಹೆಚ್ಚಳದ ಮೂಲಕ ಭಾರತ ವಿಶ್ವದ ಗಮನಸೆಳೆದಿದೆ. ಭಾರತಕ್ಕೆ ವಿದೇಶಗಳಿಂದ ಆಮದಾಗುವ ಎಲ್ಲಾ ರೀತಿಯ ಉತ್ಪನ್ನಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸಬೇಕು ಎಂಬುದು ಮೋದಿ ಅವರ ಆಶಯವಾಗಿದೆ ಎಂದು ಕೇಂದ್ರ ಭಾರೀ  ಮತ್ತು ಇಂಧನ ಇಲಾಖೆ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜಾಲ್ ಹೇಳಿದ್ದಾರೆ. ಕುಣಿಗಲ್ ನಲ್ಲಿ ಕೇಂದ್ರ ಯೋಜನೆಗಳ ಫಲಾನುಭವಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಯುದ್ಧ ಟ್ಯಾಂಕರ್, ಹೆಲಿಕಾಪ್ಟರ್,ಅತ್ಯಾಧುನಿಕ ರೈಫಲ್ ಗಳು ಸೇರಿದಂತೆ ಶೇ.70 ರಷ್ಟು ಮಿಲಿಟರಿ ಸಂಬಂಧಿತ ಉಪಕರಣಗಳನ್ನು ಕಳೆದ ಎಂಟು ವರ್ಷಗಳಿಂದ ಭಾರತದಲ್ಲೇ ಉತ್ಪಾದಿಸುವ ಮೂಲಕ ಭಾರತ ಸ್ವಾವಲಂಬಿ ಹಾದಿಯತ್ತ ಸಾಗಿದೆ ಎಂದು ಸಚಿವ ಕ್ರಿಶನ್ ಪಾಲ್ ಹೆಮ್ಮೆ ವ್ಯಕ್ತಪಡಿಸಿದರು.

ದೇಶೀ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಶೇ.70 ರಷ್ಟು ಉತ್ಪನ್ನಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುವ ಮೂಲಕ ಕ್ರಾಂತಿಯತ್ತ ಮುನ್ಮಡೆಯುವ ಮೂಲಕ ಭಾರತ,ವಿದೇಶಿ ಉತ್ಪನ್ನಗಳಿಗೆ ಕೇವಲ ಮಾರುಕಟ್ಟೆ ಅಲ್ಲ ಎಂಬುದನ್ನು ದೇಶೀ ಉತ್ಪಾದನೆ ಮೂಲಕ ತಿಳಿಸುತ್ತಿದೆ ಎಂದು ಅವರು ಹೇಳಿದರು.

ಉತ್ಪಾದನಾ ಜೋಡಣಾ ಪ್ರೋತ್ಸಾಹ ಯೋಜನೆ (PLI)ಜಾರಿಗೊಳಿಸುವ ಮೂಲಕ ಆಟೋಮೊಬೈಲ್, ಫಾರ್ಮಸಿ,ಜವಳಿ,ಆಹಾರ ಉತ್ಪನ್ನ ಸೇರಿದಂತೆ ಒಟ್ಟು 14 ಕ್ಷೇತ್ರಗಳಲ್ಲಿ ಜಗತ್ತಿನ ಅತ್ಯುನ್ನತ ಆವಿಷ್ಕಾರಗಳು ಭಾರತಕ್ಕೆ ಬರುವ ಹಾಗೇ ಮಾಡಲಾಗಿದೆ ಎಂದ ಅವರು,  ಇದಕ್ಕಾಗಿ ಬೃಹತ್ ಕೈಗಾರಿಕೆ ಮತ್ತು ಐಐಟಿ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.

ಭಾರತದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ದೇಶೀ ಉತ್ಪನ್ನಗಳು ಉತ್ಪಾದನೆಯಾಗಬೇಕು,ಅವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಾಗುವಂತಾಗಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಕೇಂದ್ರ ಸಚಿವ ಕ್ರಿಶನ್ ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಯೋಜನೆಗಳಿಂದ ಸೌಕರ್ಯಗಳನ್ನು ಪಡೆದ ಕುಣಿಗಲ್ ತಾಲ್ಲೂಕಿನ ನೂರಾರು ಫಲಾನುಭವಿಗಳು ಸಚಿವರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಟೆಕ್ಕಿಗಳಿಗೆ ಎಲ್ಐಸಿಯ ಹೊಸ ಪಾಲಿಸಿ; ವರ್ಷಕ್ಕೆ 4000ರೂ. ಪ್ರೀಮಿಯಂ ಪಾವತಿಸಿದ್ರೆ 50ಲಕ್ಷ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ವಲಯಕ್ಕೆ ಉತ್ತೇಜನ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಮೆಚ್ವುಗೆಯ ಮಾತುಗಳನ್ನಾಡಿದ್ದು ವಿಶೇಷವಾಗಿತ್ತು.

ಎಫ್ಎಂಸಿಜೆ ಕ್ಷೇತ್ರಕ್ಕೆ ರಿಲಯನ್ಸ್ ಎಂಟ್ರಿ; ಇಂಡಿಪೆಂಡೆನ್ಸ್ ಬ್ರ್ಯಾಂಡ್ ಅಡಿಯಲ್ಲಿ ಉತ್ಪನ್ನಗಳ ಬಿಡುಗಡೆ

ಮಾಜಿ ಸಂಸದ ಮುದ್ದಹನುಮೇಗೌಡ,ವಿಧಾನಪರಿಷತ್ ಸದಸ್ಯ ಅ.ದೇವೇಗೌಡ,ಉಪ ವಿಭಾಗಾಧಿಕಾರಿ ಅಜಯ್,ತಹಶೀಲ್ದಾರ್ ಮಹಾಬಲೇಶ್ವರ ಮೊದಲಾದವರು ಹಾಜರಿದ್ದರು.

Follow Us:
Download App:
  • android
  • ios