Asianet Suvarna News Asianet Suvarna News

ಭಾರತೀಯರ ಸರಾಸರಿ ಮಾಸಿಕ ತಲಾದಾಯ ಭರ್ಜರಿ ಏರಿಕೆ

ದೇಶದ ಜನತೆ ಆದಾಯ ಪ್ರಮಾಣದಲ್ಲಿ ಭರ್ಜರಿ ಏರಿಕೆ ಕಂಡು ಬಂದಿದೆ. ತಲಾ ಆದಾಯ ಶೇ.10ರಷ್ಟುಏರಿಕೆಯಾಗಿದ್ದು ಅದು 10,534ಕ್ಕೆ ತಲುಪಿದೆ. 

India's per capita income grows To 10 Percent
Author
Bengaluru, First Published Jun 1, 2019, 9:17 AM IST

ನವದೆಹಲಿ :  ಭಾರತದ ನಾಗರೀಕನ ಮಾಸಿಕ ತಲಾದಾಯ ಶೇ.10 ರಷ್ಟು ಏರಿಕೆಯಾಗಿದ್ದು ಅದೀಗ 10,534 ರೂಪಾಯಿ ತಲುಪಿದೆ. 

ಕೇಂದ್ರ ಸರ್ಕಾರ 2019ರ ಆರ್ಥಿಕ ವರ್ಷದ ಅಂತ್ಯಕ್ಕೆ ಬಿಡುಗಡೆ ಮಾಡಿದ ಅಂಕಿ-ಅಂಶಗಳಿಂದ ಈ ಅಂಕಿಅಂಶ ಬೆಳಕಿಗೆ ಬಂದಿದೆ. 2017-18ರಲ್ಲಿ ಪ್ರತಿ ನಾಗರೀಕನ ತಲಾದಾಯ 9,580 ರೂಪಾಯಿ ಇತ್ತು. ಈ ಅವಧಿಯಲ್ಲಿ  ನಾಗರೀಕನೊಬ್ಬ ವಾರ್ಷಿಕ 1,14,958 ರಷ್ಟು ( ಮಾಸಿಕ .9,580 ರೂಪಾಯಿ) ಆದಾಯ ಪಡೆಯುತ್ತಿದ್ದ. 

2018-19ಕ್ಕೆ ಅದು 1,26,406 (.10,534 ರೂಪಾಯಿ) ರಷ್ಟುಏರಿಕೆಯಾಗಿದೆ. ಈ ಕುರಿತು ಸಾಂಖ್ಯಿಕ ಮಂತ್ರಾಲಯ 2018-19ರ ತಲಾದಾಯ ಹಾಗೂ ಜಿಡಿಪಿ ಅಂಕಿ ಸಂಖ್ಯೆ ಬಿಡುಗಡೆ ಮಾಡಿದ್ದು 2018-19ರಲ್ಲಿ ದೇಶದ ಒಟ್ಟಾರೆ ಆದಾಯವನ್ನು 188.17 ಲಕ್ಷ ಕೋಟಿ ಎಂದು ನಿರೀಕ್ಷಿಸಲಾಗಿದೆ.

 ಇದು 2017-18ಕ್ಕೆ 169.10 ಲಕ್ಷ ಕೋಟಿ ಇತ್ತು. ಈ ಮೂಲಕ ಶೇ.11.3ರಷ್ಟು ಏರಿಕೆ ದಾಖಲಿಸಿದೆ. ಅಂತೂ ನಮ್ಮಗಳ ಸಂಪಾದನೆ ಜಾಸ್ತಿ ಆಯ್ತು ಎನ್ನಿ !

Follow Us:
Download App:
  • android
  • ios