Asianet Suvarna News Asianet Suvarna News

ದೇಶದ ಆರ್ಥಿಕತೆ ಭದ್ರವಾಗಿದೆ: ಸಮರ್ಥಿಸಿಕೊಂಡ ವಿತ್ತ ಸಚಿವೆ

 ಯುದ್ಧ, ಕೋವಿಡ್‌ನಿಂದ ಜಾಗತಿಕ ತಲ್ಲಣ ಆದರೂ ಭಾರತದ ಆರ್ಥಿಕತೆ  ಪುಟಿದೆದ್ದಿದೆ. ಎನ್‌ಡಿಎ ಸರ್ಕಾರದ ಕ್ರಮಗಳಿಂದಾಗಿ ಖಾದ್ಯ ತೈಲದ ದರ ಇಳಿಕೆಯಾಗಿದೆ. ಪ್ರತಿಪಕ್ಷಗಳ ಆರೋಪ ರಾಜಕೀಯಪ್ರೇರಿತ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ

india remains fastest growing economy says Union Finance Minister Nirmala Sitharaman gow
Author
Bengaluru, First Published Aug 2, 2022, 6:20 AM IST

ನವದೆಹಲಿ (ಜು.2): 5ಜಿ ಸೇವೆ ನೀಡಲು ಅಗತ್ಯವಾದ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ 7ನೇ ದಿನವಾದ ಸೋಮವಾರ ಮುಕ್ತಾಯವಾಗಿದ್ದು, ದಾಖಲೆಯ 1,50,173 ಕೋಟಿ ರು.ಮೊತ್ತಕ್ಕೆ ವಿವಿಧ ಕಂಪನಿಗಳು ಸ್ಪೆಕ್ಟ್ರಂ ಖರೀದಿ ಮಾಡಿವೆ. ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ 88,078 ಕೋಟಿ ರು. ಹಣ ತೆತ್ತು 24,740 ಮೆಗಾಹಟ್‌್ರ್ಜ ತರಂಗಾಂತರ ಖರೀದಿಸಿದೆ. ಈ ಮೂಲಕ ಅತ್ಯಧಿಕ ಪ್ರಮಾಣದ ತರಂಗಾಂತರ ಖರೀದಿ ಮೂಲಕ ಟಾಪ್‌ ಬಿಡ್ಡರ್‌ ಆಗಿ ಹೊರಹೊಮ್ಮಿದೆ. ಬೆಲೆ ಏರಿಕೆ ಕುರಿತು ವಿಪಕ್ಷಗಳ ಆರೋಪಕ್ಕೆ ದಿಟ್ಟಉತ್ತರ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ‘ಪ್ರಪಂಚದ ವಿದ್ಯಮಾನಗಳ ಪರಿಣಾಮ ಭಾರತದ ಮೇಲೂ ಆಗಿದೆ. ಆದರೆ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತವನ್ನು ಆರ್ಥಿಕವಾಗಿ ಮೇಲೆತ್ತಲು ಮೋದಿ ಸರ್ಕಾರ ಸಕಲ ಕ್ರಮ ಜರುಗಿಸುತ್ತಿದೆ. ಇದರ ಪರಿಣಾಮ ಇಂದು ಭಾರತವು ಆರ್ಥಿಕ ಕುಸಿತ ಎದುರಿಸುವ ಯಾವುದೇ ಭೀತಿಯಿಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ.ಲೋಕಸಭೆಯಲ್ಲಿ 15 ದಿನಗಳಿಂದ ಜಿಎಸ್‌ಟಿ ದರ ಏರಿಕೆ ಹಾಗೂ ಇತರ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಬೇಕು ಎಂದು ವಿಪಕ್ಷಗಳು ಗಲಾಟೆ ನಡೆಸುತ್ತಿದ್ದವು. ಇದಕ್ಕೆ ಕೊನೆಗೂ ಸೋಮವಾರ ಕಾಲ ಕೂಡಿ ಬಂತು.

ಸಂಜೆಯಿಂದ ಆರಂಭವಾದ ಚರ್ಚೆಯಲ್ಲಿ ಪ್ರತಿಪಕ್ಷ ಸದಸ್ಯರು ಮಾಡಿದ ಆರೋಪಗಳಿಗೆ ಸುದೀರ್ಘ ಉತ್ತರ ನೀಡಿದ ನಿರ್ಮಲಾ, ‘ವಿಶ್ವ ಇಂದು ಅನೇಕ ಸಮಸ್ಯೆಗಳ ಸುಳಿಯಲ್ಲಿದೆ. ಕೋವಿಡ್‌ ಸಾಂಕ್ರಾಮಿಕದ 2ನೇ ಅಲೆ, ಒಮಿಕ್ರೋನ್‌ ಅಲೆ, ರಷ್ಯಾ-ಉಕ್ರೇನ್‌ ಯುದ್ಧ, ಹಾಗೂ ಚೀನಾದ ಅತಿದೊಡ್ಡ ಪೂರೈಕೆ ಘಟಕಗಳು ಲಾಕ್‌ಡೌನ್‌ ಪರಿಸ್ಥಿತಿಯಲ್ಲಿ ಇರುವುದು- ಹೀಗೆ ಅನೇಕ ಅಡ್ಡಿ ಆತಂಕಗಳನ್ನು ಈವರೆಗೆ ಹಿಂದೆಂದೂ ಕಂಡು ಕೇಳರಿಯದ ರೀತಿ ಎದುರಿಸಿದ್ದೇವೆ. ಆದರೆ, ಇಂಥ ಪರಿಸ್ಥಿತಿಯಲ್ಲೂ ಆರ್ಥಿಕತೆ ಮೇಲೆತ್ತಲು ಹಲವು ಕ್ರಮ ಜರುಗಿಸಿದ್ದೇವೆ. ಹಣದುಬ್ಬರವು ಶೇ.7 ದಾಟದಂತೆ ಸರ್ಕಾರ ಕ್ರಮ ಕೈಗೊಂಡಿದೆ’ ಎಂದರು. ಈ ಮೂಲಕ ಜಿಎಸ್‌ಟಿ ಏರಿಕೆ ಸೇರಿ ಹಲವು ಕ್ರಮಗಳನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು. ಆದರೆ, ನಿರ್ಮಲಾ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್‌ ಸದಸ್ಯರು ಚರ್ಚೆಯ ನಡುವೆಯೇ ಸಭಾತ್ಯಾಗ ಮಾಡಿದರು.

ಅಂಕಿ-ಅಂಶ ಸಮೇತ ಸಚಿವೆ ಉತ್ತರ: ‘ದೇಶದಲ್ಲಿ ಪ್ರಸ್ತುತ ಚಿಲ್ಲರೆ ಹಣದುಬ್ಬರವು ಶೇ.7 ರಷ್ಟಿದೆ. 2004 ರಿಂದ 2014ರ ಯುಪಿಎ ಅವಧಿಯಲ್ಲಿ ಹಣದುಬ್ಬರವು ಎರಡಂಕಿ ದಾಟಿತ್ತು. ಸತತ 22 ತಿಂಗಳುಗಳ ಕಾಲ ಹಣದುಬ್ಬರ ಶೇ.9ಕ್ಕಿಂತ ಹೆಚ್ಚಾಗಿತ್ತು’ ಎಂದು ವಿಪಕ್ಷಗಳತ್ತ ಚಾಟಿ ಬೀಸಿದರು.

ಇದೇ ವೇಳೆ, ‘ವಿಪಕ್ಷಗಳು ದತ್ತಾಂಶಗಳ ಆಧರಿಸಿ ಚರ್ಚೆ ಮಾಡದೇ ಕೇವಲ ರಾಜಕೀಯ ಆರೋಪಗಳನ್ನು ಮಾಡುತ್ತಿವೆ. ಸದನದಲ್ಲಿ ಸುಮಾರು 30 ಸಂಸದರು ಬೆಲೆಯೇರಿಕೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಆದರೆ ಅವರು ಚರ್ಚೆಯಲ್ಲಿ ರಾಜಕೀಯವನ್ನು ಎಳೆದು ತರಲು ಪ್ರಯತ್ನಿಸಿದ್ದಾರೆಯೇ ಹೊರತು ದತ್ತಾಂಶ ಆಧರಿಸಿ ಚರ್ಚೆಗೆ ಮುಂದಾಗುತ್ತಿಲ್ಲ’ ಎಂದು ನಿರ್ಮಲಾ ಆರೋಪಿಸಿದರು. ಇದೇ ವೇಳೆ, ‘ಸರ್ಕಾರದ ಕ್ರಮಗಳಿಂದ ಖಾದ್ಯತೈಲ ಬೆಲೆ ಇಳಿಕೆಯಾಗುತ್ತಿದೆಯಲ್ಲವೇ?’ ಎಂದು ಪ್ರತಿಪಕ್ಷಗಳ ಸದಸ್ಯರಿಗೆ ಮರುಪ್ರಶ್ನೆ ಹಾಕಿದರು.

‘ಕೋವಿಡ್‌ ನೀಡಿದ ಹೊಡೆತದಿಂದಲೂ ಭಾರತದ ಆರ್ಥಿಕತೆಯು ಪ್ರಶಂಸನೀಯವಾಗಿ ಚೇತರಿಸಿಕೊಂಡಿದೆ. ಜಿಎಸ್‌ಟಿ ಸಂಗ್ರಹಣೆ ಹಾಗೂ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) ಭಾರತದ ಆರ್ಥಿಕತೆಯು ಇನ್ನಷ್ಟುಸದೃಢವಾಗುತ್ತಿದೆ ಎಂಬುವುದನ್ನು ಸೂಚಿಸುತ್ತಿದೆ’ ಎಂದರು.

5ಜಿ ಸ್ಪೆಕ್ಟ್ರಮ್‌ ಹರಾಜು ಅಂತ್ಯ, 1.50 ಲಕ್ಷ ಕೋಟಿ ಮೊತ್ತಕ್ಕೆ ಗರಿಷ್ಠ ಬಿಡ್‌!

‘ಜುಲೈನಲ್ಲಿ ಜಿಎಸ್‌ಟಿ ಸಂಗ್ರಹಣೆ ಶೇ. 28ರಷ್ಟುಏರಿಕೆ ಕಂಡು ಬಂದಿದ್ದು, 1.49 ಲಕ್ಷ ಕೋಟಿ ರು. ಸಂಗ್ರಹಹವಾಗಿದೆ. 6ನೇ ಬಾರಿ ಮಾಸಿಕ ಜಿಎಸ್‌ಟಿ ಸಂಗ್ರಹಣೆಯು 1.40 ಲಕ್ಷ ಕೋಟಿ ರು. ಗಡಿಯನ್ನು ದಾಟುತ್ತಿದೆ’ ಎಂದು ಅಂಕಿ ಅಂಶ ಸಮೇತ ವಿವರಿಸಿದರು.

ಅಕ್ಕಿ ಬೆಲೆಯಲ್ಲಿ ಶೇ.30ರಷ್ಟು ಏರಿಕೆ; ಜನಸಾಮಾನ್ಯರ ಜೇಬಿನ ಮೇಲೆ ಹೆಚ್ಚಿದ ಹೊರೆ

‘ಇತರೆ ದೇಶಗಳಿಗೆ ಹೋಲಿಸಿದರೆ ದೇಶದ ಬ್ಯಾಂಕಿಂಗ್‌ ವಲಯವೂ ಆರೋಗ್ಯಕರ ಸ್ಥಿತಿಯಲ್ಲಿದೆ. 2022ರ ಹಣಕಾಸಿನ ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಅನುಪಾತಕ್ಕೆ ಸರ್ಕಾರದ ಸಾಲವು ಶೇ. 56.29 ಕ್ಕೆ ಇಳಿಕೆಯಾಗಿದೆ’ ಎಂದರು.

Follow Us:
Download App:
  • android
  • ios