Asianet Suvarna News Asianet Suvarna News

Indian Billionaire: ಭಾರತದಲ್ಲಿ ಏರಿದ ದೊಡ್ಡ ಕುಳಗಳ ಲೆಕ್ಕ!

* ಭಾರತದಲ್ಲಿ 13367 ಆಗರ್ಭ ಶ್ರೀಮಂತರು

* 2021ರಕ್ಕೆ ಹೋಲಿಸಿದರೆ ಭಾರೀ ಶ್ರೀಮಂತರ ಪ್ರಮಾಣ ಶೇ.11ರಷ್ಟುಹೆಚ್ಚಳ

* ಶ್ರೀಮಂತರ ಪ್ರಮಾಣ ಏರಿಕೆಯಲ್ಲಿ ಬೆಂಗಳೂರಿಗೆ ದೇಶದಲ್ಲೇ ನಂ.1 ಸ್ಥಾನ

India records 11 percents on-year rise in ultra HNIs in 2021 Knight Frank mah
Author
Bengaluru, First Published Mar 2, 2022, 3:33 AM IST

ನವದೆಹಲಿ (ಮಾ. 02) ಕೋವಿಡ್‌ ಹೊರತಾಗಿಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಾರತದಲ್ಲಿ(India) ಭಾರೀ ಶ್ರೀಮಂತರ ಸಂಖ್ಯೆಯಲ್ಲಿ ಶೇ.11ರಷ್ಟುಏರಿಕೆಯಾಗಿದೆ ಎಂದು ವರದಿಯೊಂದು ಹೇಳಿದೆ. 

ಆಸ್ತಿ ಸಲಹಾ ಸಂಸ್ಥೆಯಾಧ ನೈಟ್ರ ಫ್ರಾಂಕ್‌ ಬಿಡುಗಡೆ ಮಾಡಿರುವ ವರದಿಯ ಅನ್ವಯ 2022ರಲ್ಲಿ ಭಾರತದಲ್ಲಿ ಭಾರೀ ಶ್ರೀಮಂತಿಕೆ (225 ಕೋಟಿ ರು.) ಹೊಂದಿರುವವರ ಸಂಖ್ಯೆ 13637. ಕಳೆದ ವರ್ಷ ಈ ಪ್ರಮಾಣ 12287 ಇತ್ತು ಎಂದು ವರದಿ ಹೇಳಿದೆ. ಷೇರುಪೇಟೆಯಲ್ಲಿ ( Share Market) ಕಂಪನಿಗಳ ಮೌಲ್ಯ ಏರಿಕೆ ಮತ್ತು ಡಿಜಿಟಲ್‌ ಕ್ರಾಂತಿಯ ಪರಿಣಾಮ ಭಾರತದಲ್ಲಿ ಭಾರೀ ಶ್ರೀಮಂತರ ಸಂಖ್ಯೆ ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.

ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಭಾರೀ ಶ್ರೀಮಂತರ ಸಂಖ್ಯೆಯಲ್ಲಿ ಶೇ.17.1 (352)ರಷ್ಟುಏರಿಕೆಯಾಗಿದೆ. ನಂತರದ ಸ್ಥಾನಗಳಲ್ಲಿ ದೆಹಲಿ ಶೇ.12.2(210), ಮುಂಬೈ ಶೇ.9 (1596) ನಗರಳಿವೆ ಎಂದು ವರದಿ ಹೇಳಿದೆ. ಇನ್ನು ಜಾಗತಿಕ ಮಟ್ಟದಲ್ಲಿ ಇಂಥ ಶ್ರೀಮಂತರ ಸಂಖ್ಯೆ 6.10 ಲಕ್ಷ ಎಂದು ವರದಿ ಹೇಳಿದೆ.

Karnataka Budget 2022-23: ಸಿಎಂ ಚೊಚ್ಚಲ ಬಜೆಟ್‌ ಬಗ್ಗೆ ಹಲವು ನಿರೀಕ್ಷೆ

ಮೈಕ್ರೋಸಾಫ್ಟ್‌ ಸಿಇಒ  ಸತ್ಯಾ ನಾದೆಳ್ಲಾ ಪುತ್ರ  ಆನಾರೋಗ್ಯದಿಂದ ಸಾವು:  ಮೈಕ್ರೋಸಾಫ್ಟ್‌ ಕಂಪನಿಯ ಸಿಇಒ ಸತ್ಯ ನಾದೆಳ್ಲಾ ಅವರ ಪುತ್ರ ಝೈನ್‌ ನಾದೆಳ್ಲಾ (26) ಅನಾರೋಗ್ಯದಿಂದ ಮಂಗಳವಾರ ಮೃತಪಟ್ಟಿದ್ದಾರೆ. ಝೈನ್‌ ಹುಟ್ಟುವಾಗಲೇ ಸೆರೆಬ್ರಲ್‌ ಪಾಲ್ಸಿ (ಮೆದುಳು ಸಂಬಂಧಿ ಕಾಯಿಲೆ)ಯೊಂದಿಗೆ ಜನಿಸಿದ್ದರು. ಪುತ್ರನ ಈ ಕಾಯಿಲೆ ತಂತ್ರಜ್ಞಾನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿತ್ತು ಎಂದು ಈ ಹಿಂದೆ ಸತ್ಯ ನಾದೆಳ್ಲಾ ಹೇಳಿದ್ದರು. ನಾದೆಳ್ಲಾ ಕುಟುಂಬಕ್ಕೆ ಹಲವರು ಟ್ವೀಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ಹೈದರಾಬಾದ್‌ ಮೂಲದ ಸತ್ಯ ನಾದೆಳ್ಲಾ 2014ರಲ್ಲಿ ಮೈಕ್ರೋಸಾಫ್ಟ್‌ ಕಂಪನಿಯ ಸಿಇಒ ಆಗಿ ನೇಮಕವಾಗಿದ್ದರು. 20212ರಲ್ಲಿ ಇವರು ಕಂಪನಿಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಜಿಎಸ್‌ಟಿ ಸಂಗ್ರಹ:  

. 02) 2022ನೇ ಸಾಲಿನಲ್ಲಿ ಫೆಬ್ರವರಿಯಲ್ಲಿ 1.33 ಲಕ್ಷ ಕೋಟಿ ರು. ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವಾಗಿದೆ. ಇದು ಕಳೆದ ವರ್ಷ ಫೆಬ್ರವರಿಯಲ್ಲಿ ಸಂಗ್ರಹವಾಗಿದ್ದ ತೆರಿಗೆಗಿಂತ ಶೇ.18ರಷ್ಟುಮತ್ತು 2020ರಲ್ಲಿ ಸಂಗ್ರಹವಾದ ತೆರಿಗೆಗಿಂತ ಶೇ.26ರಷ್ಟುಅಧಿಕ ಎಂದು ಕೇಂದ್ರ ಹಣಕಾಸು ಸಚಿವಾಲಯ (Union finance ministry)ಮಂಗಳವಾರ ತಿಳಿಸಿದೆ. ಈ ಮೂಲಕ ಸತತ 9 ತಿಂಗಳಿನಿಂದ 1 ಲಕ್ಷ ಕೋಟಿ ರು. ಗೂ ಅಧಿಕ ಜಿಎಸ್‌ಟಿ ಸಂಗ್ರಹವಾದಂತಾಗಿದೆ.

2022ರ ಫೆಬ್ರವರಿಯ ಆರಂಭದಲ್ಲೂ ದೇಶಾದ್ಯಂತ ಕೋವಿಡ್‌ ರೂಪಾಂತರಿ ಒಮಿಕ್ರೋನ್‌ (Coronavirus) ವ್ಯಾಪಾರ ವಹಿವಾಟಿನ ಮೇಲೆ ಪ್ರಭಾವ ಬೀರಿತ್ತು. ಅಲ್ಲದೆ ಫೆಬ್ರವರಿಯಲ್ಲಿ 28 ದಿನಗಳು ಮಾತ್ರ ಇತ್ತು. ಹೀಗಾಗಿ ಜಿಎಸ್‌ಟಿ ಸಂಗ್ರಹ ಕಳೆದ ಜನವರಿಗಿಂತ ಕಡಿಮೆಯಾಗಿದೆ. ಜನವರಿಯಲ್ಲಿ 1.40 ಲಕ್ಷ ಕೋಟಿ ರು. ತೆರಿಗೆ ಸಂಗ್ರಹವಾಗಿತ್ತು.

ಫೆಬ್ರವರಿಯಲ್ಲಿ ಒಟ್ಟು 1,33,026 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಈ ಪೈಕಿ ಕೇಂದ್ರದ ಜಿಎಸ್‌ಟಿ 24,435 ಕೋಟಿ ರು., ರಾಜ್ಯ ಜಿಎಸ್‌ಟಿ 30,779 ಕೋಟಿ ರು. ಮತ್ತು ಸಮಗ್ರ ಜಿಎಸ್‌ಟಿ 67,471 ಕೋಟಿ ರು. ಇದೆ. ಸೆಸ್‌ನಿಂದ 10,340 ಕೋಟಿ ಸಂಗ್ರಹವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಆರ್ಥಿಕ ಸಮೀಕ್ಷೆ ಕೊಟ್ಟಿದ್ದ ವಿವರಣೆ:   2021-22ನೇ ಆರ್ಥಿಕ ಸಾಲಿನಲ್ಲಿ ಈ ತನಕದ ಅಂಕಿಅಂಶಗಳ ಪ್ರಕಾರ ಕೇಂದ್ರ  ಸರ್ಕಾರದ ಆದಾಯದಲ್ಲಿ(Income) ಸಾಕಷ್ಟು ಚೇತರಿಕೆ ಕಂಡುಬಂದಿತ್ತು.  2021 ಏಪ್ರಿಲ್ ನಿಂದ ನವೆಂಬರ್ ಅವಧಿಯಲ್ಲಿ ಕೇಂದ್ರ ಸರ್ಕಾರದ ಕಂದಾಯ ಸ್ವೀಕೃತಿಯಲ್ಲಿ ಶೇ.67.2 ಏರಿಕೆ ಕಂಡಿತ್ತು. 2021-22ನೇ ಸಾಲಿನ ಬಜೆಟ್ ನಲ್ಲಿ ಶೇ. 9.6 ಪ್ರಗತಿ ಅಂದಾಜಿಸಲಾಗಿತ್ತು. ನೇರ (Direct) ಹಾಗೂ ಪರೋಕ್ಷ (Indirect) ತೆರಿಗೆಗಳ ಸಂಗ್ರಹದಲ್ಲಿ (Tax Collection) ಕೂಡ ಹೆಚ್ಚಳ ಕಂಡುಬಂದಿದೆ. ಮಾಸಿಕ ಜಿಎಸ್ ಟಿ (GST) ಸಂಗ್ರಹವು  2021ರ ಜುಲೈನಿಂದ ಒಂದು ಲಕ್ಷ ಕೋಟಿ ರೂ. ದಾಟುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ. 

Follow Us:
Download App:
  • android
  • ios